Advertisement

Siddapura: ಹಳ್ಳಿಹೊಳೆ ಜಾಗಕ್ಕೆ ಅಕ್ರಮವಾಗಿ ಪ್ರವೇಶಿ ಬೆದರಿಕೆ; ಕಳವು

08:10 PM Oct 31, 2024 | Team Udayavani |

ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಎನ್ನುವಲ್ಲಿರುವ ತಮ್ಮ ಜಾಗಕ್ಕೆ ಸ್ಥಳೀಯರಾದ ಸುಷ್ಮಾ, ಗ್ರೀಷ್ಮಾ, ವಿಜಯೇಂದ್ರ, ಸುಮಾ ಅವರು ಅಕ್ರಮವಾಗಿ ಪ್ರವೇಶಿಸುವ ಮೂಲಕ ಕೆಲಸಗಾರನ್ನು ಬೆದರಿಸಿ, ಕೆಲವೊಂದು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಲಕ್ಷ್ಮೀನಾರಾಯಣ ಅವರು ಪೊಲೀಸರಿಗೆ ದೂರು ನೀಡಿದರು.

Advertisement

ಆರೋಪಿಗಳು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೆಲಸಗಾರ ಎಚ್‌. ಕೃಷ್ಣಯ್ಯ ಅವರನ್ನು ಬೆದರಿಸಿದ್ದಾರೆ. ಫಾರಂ ಹೌಸ್‌ನಲ್ಲಿದ್ದ ಅಡಿಕೆ, ಸಿಸಿ ಕೆಮರಾ, ಇನ್ವರ್ಟರ್‌, ತೋಟದಲ್ಲಿರುವ 50 ಸ್ಟ್ರಿಂಕ್ಲರ್‌, ಪಂಪ್‌ಸೆಟ್‌ ಕಳವು ಮಾಡಿಕೊಂಡು ಹೋಗಿದ್ದಾರೆ. ತೋಟಕ್ಕೆ ಅಳವಡಿಸಿದ್ದ ಕಬ್ಬಿಣದ ಗೇಟು ಕಿತ್ತು ಎಸೆದಿದ್ದಾರೆ. ಅಗಳನ್ನು ತೋಡಿ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಿದ್ದಾರೆ ಎಂದು ಲಕ್ಷ್ಮೀನಾರಾಯಣ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next