ಸಿದ್ದಾಪುರ : ಸಿದ್ದಾಪುರ ಕೆಳಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಮುಖ್ಯ ರಸ್ತೆಯಲ್ಲಿ ಬೈಕ್‌ಗಳ ನಡುವೆ ಮುಖಮುಖೀ ಡಿಕ್ಕಿಯಾಗಿ ಸವಾರರು ಹಾಗೂ ಹಿಂಬಂದಿ ಸವಾರರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳ್ಳೂರು-74 ಗ್ರಾಮದ ನಿಡಗೋಡು ಪ್ರಶಾಂತ ಶೆಟ್ಟಿ ಹಾಗೂ ಪತ್ನಿ ರೂಪಾ ಅವರು ಒಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಮತ್ತೂಂದು ಬೈಕ್‌ನಲ್ಲಿ ಸಿದ್ದಾಪುರ ಗ್ರಾಮದ ಮಂಜು ಕುಲಾಲ ಮತ್ತು ಶೇಖರ ಕುಲಾಲ ಪ್ರಯಾಣಿಸುತ್ತಿದ್ದರು.
ಡಿಕ್ಕಿ ಹೊಡೆದ ಬೈಕ್ ಸವಾರ ಮಂಜು ಕುಲಾಲ ಮತ್ತು ಹಿಂಬದಿ ಸವಾರ ಶೇಖರ ಕುಲಾಲ ಅವರ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಂಭಾಶಿ ರಾ.ಹೆ.66ರಲ್ಲಿ ಸರಣಿ ಅಪಘಾತ ; ಮಾರುತಿ ಸ್ವಿಫ್ಟ್ ಕಾರು ಸಂಪೂರ್ಣ ಜಖಂ