Advertisement

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

03:51 PM Apr 25, 2024 | Team Udayavani |

ಅರಂತೋಡು: ಅಜ್ಜಾವರದಲ್ಲಿ ಗುರುವಾರ ಜೀಪು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ಮೂರ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿಗಳಾದ ವಿನಾಯಕ ಮೂರ್ತಿ, ಪತ್ನಿ ಮಂಜುಳ ಗಂಭೀರ ಗಾಯಗೊಂಡಿದ್ದರು.

ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿಯಾಗಿ ವಿನಾಯಕ ಮೂರ್ತಿ ಹಾಗೂ ಮಂಜುಳಾ ದಂಪತಿ ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಅಜ್ಜಾವರದಲ್ಲಿ ಈ ಘಟನೆ ನಡೆದಿದೆ.

ಗಾಯಾಳುಗಳನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ತರಲಾಗಿತ್ತು. ಮೃತರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next