Advertisement
ಪಟ್ಟಣದ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ತಾಲ್ಲೂಕು ಕಸಾಪ ಸಾಹಿತ್ಯ ಚಟುವಟಿಕೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಬಳಿಗೆ ತಲುಪಬೇಕಾದರೆ ತಾಲ್ಲೂಕು ಮತ್ತು ಹೋಬಳಿ ಘಟಕಗಳು ಸಧೃಡವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಮ್ಮೇಳನಗಳಿಗೂ ಮುನ್ನ ಗ್ರಾಮಾಂತರ ಭಾಗಗಳಲ್ಲಿ ಸಮ್ಮೇಳನಗಳ ಸಂಘಟನೆ, ಸಾಹಿತ್ಯಾತ್ಮಕ ಕಾರ್ಯಕ್ರಮಗಳು ಹಮ್ಮಿಕೊಂಡಾಗ ಜನರಲ್ಲಿ ಕನ್ನಡ ಸಾಹಿತ್ಯ ದ ಬಗ್ಗೆ ಸ್ವಪ್ರೇರಣೆ ಉಂಟಾಗುತ್ತದೆ. ಸಾಹಿತ್ಯ ಪರಿಷತ್ತು ನಿರ್ವಹಣೆಯಲ್ಲಿ ಪಾರದರ್ಶಕವಾಗಿರಬೇಕು ಎಂದು ಎಚ್ಚರಿಸಿದರು.ಕವಿ ಕುವೆಂಪುರ ಕಾದಂಬರಿ ಕೃತಿಗಳನ್ನು ಹೆಚ್ಚು ಅಧ್ಯಯನ ಮಾಡಿದ್ದರಿಂದ ದಿನ ನಿತ್ಯ ಕನ್ನಡ ಭಾಷೆ ಬಳಕೆಯಲ್ಲಿ ಅನ್ಯ ಭಾಷೆಗಳ ಪದಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಹೆಚ್. ನಾಗರಾಜ ಮಾತನಾಡಿ ಕುವೆಂಪು ಅವತು ನೇಗಿಲ ಮೇಲೆ ನಿಂತಿದೆ ಧರ್ಮ. ರೈತರು ಸಮಾಜದಲ್ಲಿ ಪ್ರಥಮ ಗೌರವಕ್ಕೆ ಅರ್ಹರು, ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ವೈಚಾರಿಕತೆ ಮತ್ತು ಮಾನವೀಯತೆಗೆ ಸ್ಪರ್ಶ ನೀಡಿದ ಕಿರ್ತಿ ಕುವೆಂಪುಗೆ ಸಲ್ಲುತ್ತದೆ. ಹಾಗಾಗಿ ಕನ್ನಡಿಗರು ಕುವೆಂಪುರವರ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡು ಹಾಗೂ ಅವರ ಕೃತಿ ಕಾದಂಬರಿಗಳ ಅಧ್ಯಯನ ಮಾಡಿ ನಾವೆಲ್ಲರೂ ವಿಶ್ವ ಮಾನವರಾಗಲು ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿ ನೂತನ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ ಉದ್ದೇಶಗಳಿಗೆ ಧಕ್ಕೆಯಾಗದಂತೆ ಹಾಗೂ ಜಿಲ್ಲಾ ಅಧ್ಯಕ್ಷರ ಹಾಗೂ ಹಿರಿಯ ಸಾಹಿತಿಗಳ ಮಾರ್ಗದರ್ಶನ ಹಾಗೂ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಹಕಾರದಿಂದ ಕಸಾಪವನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸ, ಮಕ್ಕಳಲ್ಲಿ ಸಾಹಿತ್ಯಾಭಿರುಚಿ, ಸೃಜನಶೀಲಾ ಬರವಣಿಗೆ, ಪರಿಸರ ಸಂರಕ್ಷಣೆ, ಸಹಬಾಳ್ವೆ ಮತ್ತು ದೇಶಾಭಿಮಾನ ಮೂಡಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
Related Articles
Advertisement
ಇದನ್ನೂ ಓದಿ : ಹಂಪನಕುಪ್ಪೆ ಗ್ರಾಮವನ್ನು ಮತ್ತೆ ಕಿರಗಡಲು ಗ್ರಾಮದ ದಾಖಲೆಗೆ ಸೇರಿಸಿ : ಗ್ರಾಮಸ್ಥರ ಮನವಿ