Advertisement

ಸಿದ್ಧಗಂಗಾ ಶ್ರೀಗಳು ಮತ್ತೂಮ್ಮೆ ಹುಟ್ಟಿ ಬರಲಿ

07:41 AM Jan 24, 2019 | Team Udayavani |

ಸಂಡೂರು: ನಿಜವಾದ ಪ್ರೀತಿಗೆ ಕಲ್ಲನ್ನೂ ಕರಗಿಸುವ ಶಕ್ತಿ ಜೊತೆಗೆ ಕಟುಕನನ್ನೂ ಬದಲಿಸುವ ಸಾಮರ್ಥ್ಯವಿದೆ ಎಂಬುವ ವಾಣಿಯಂತೆ ಲಕ್ಷಾಂತರ ಮಕ್ಕಳಿಗೆ ಅನ್ನದಾಸೋಹದ ಮೂಲಕ ಅಕ್ಷರ ದಾಸೋಹ ನೀಡಿದ ಶರಣ ಡಾ| ಶಿವಕುಮಾರಸ್ವಾಮಿಗಳು ಮತ್ತೂಮ್ಮ ಹುಟ್ಟಿಬರಲಿ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಜನಹಳ್ಳಿಯಲ್ಲಿ ನಡೆಯಲಿರುವ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗುರುಪೀಠದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಿಬೇಕು ಎಂಬ ಉದ್ದೇಶದಿಂದ ಈಗಾಗಲೇ 108 ತಾಲೂಕುಗಳಲ್ಲಿ ಸಂಚರಿಸಿ ಜನರಿಗೆ ಆಹ್ವಾನ ನೀಡುವ ಜೊತೆಗೆ ಜಾತ್ರೆಗೆ ನೆರವಾಗಲು ಸೂಚಿಸಿದ್ದೇವೆ. ಪ್ರತಿಗ್ರಾಮ, ಪಟ್ಟಣಗಳ ವಾಲ್ಮೀಕಿ ಸಮುದಾಯದವರು ನೀಡುವ ದೇಣಿಗೆ, ಕಟುಂಬಗಳ ಸದಸ್ಯರ ಸಂಖ್ಯೆ, ಬೆಡಗುಗಳ ವಿವರ ಪುಸ್ತಕಗಳಲ್ಲಿ ದಾಖಲಿಸಿ ಮಠಕ್ಕೆ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಿ.ಕೃಷ್ಣಪ್ಪ, ಜೆಬಿಟಿ ಬಸವರಾಜ್‌, ಪರಿ ನಿಂಗಪ್ಪ, ನವಲೂಟಿ ಜಯಣ್ಣ , ವಸಂತಣ್ಣ, ಗಂಡಿ ಮಾರಪ್ಪ, ಡಿ.ರಾಘವೇಂದ್ರ, ಅಂಬರೀಶ, ಶಾಮಿಯಾನ ಅಂಜಿನಿ, ಆರ್‌.ಧನುಂಜಯ, ಸುಬ್ರಹ್ಮಣಿ, ಬಾವಳ್ಳಿ ಫಕ್ಕೀರಪ್ಪ, ನಾಗರಾಜ್‌, ಆಮ್ಲೆಟ್ ಹನುಮಂತ, ವಿಜಯಕುಮಾರ್‌ , ಸುಶೀಲಾನಗರದ ಲಕ್ಷ್ಮ್ಮಣ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next