ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲಿ ಬರೋಬ್ಬರಿ 35 ಅಡಿಯಷ್ಟು ಹಿಮದ ಕೆಳಗೆ ಆರು ದಿನಗಳ ಕಾಲ ಸೆಣಸಾಡಿ ಜೀವ ಉಳಿಸಿಕೊಂಡು ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದ ಧಾರವಾಡದ ವೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರಿಗೆ ಭಾನುವಾರ ಮರಣೋತ್ತರ ಸೇನಾ ಪದಕ ನೀಡಿ ಗೌರವಿಸಲಾಯಿತು.
Advertisement
ದೆಹಲಿಯಲ್ಲಿ ನಡೆದ ಸೇನಾ ದಿನಾಚರಣೆಯಲ್ಲಿ ಹನುಮಂತಪ್ಪ ಪತ್ನಿ ಮಹಾದೇವಿ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೇನಾ ಪದಕ ನೀಡಿ ಗೌರವಿಸಿದರು. 15 ಮಂದಿ ಇತರ ವೀರ ಯೋಧರಿಗೂ ಸೇನಾ ಪದಕ ನೀಡಿ ಗೌರವಿಸಲಾಯಿತು.