ಬಿಳಿ ಕೋಟ್‌ನ ಜೊತೆಗೆ ಬಿಳಿ ಅಂಗಿ ಮತ್ತು ಬಿಳಿಯ ಸ್ಕರ್ಟ್ ಅಥವಾ ಶಾರ್ಟ್ಸ್ ತೊಡಬಹುದು. ಇಲ್ಲವೆ, ಬಿಳಿಬಣ್ಣದ ಬಗೆಬಗೆಯ ಪ್ಯಾಂಟ್‌ಗಳನ್ನೂ ಧರಿಸಬಹುದು. ಸಡಿಲ ಹಾಗೂ ಆರಾಮದಾಯಕ ಪ್ಯಾಂಟ್‌ಗಳಲ್ಲಿ ಬಹಳಷ್ಟು ಆಯ್ಕೆಗಳಿವೆ.
ಬೇಸಿಗೆಯಲ್ಲಿ ಹತ್ತಿಯ ಬಟ್ಟೆಯಷ್ಟು ಹಿತವಾದ ಉಡುಪು ಮತ್ತೂಂದಿಲ್ಲ. ತಲೆಯಿಂದ, ಕಾಲಿನವರೆಗೂ ಸಂಪೂರ್ಣವಾಗಿ ಬಿಳಿಬಣ್ಣದ ಉಡುಪು ಜೊತೆಯಾದರೆ, ದೇಹಕ್ಕೂ ತಂಪು, ಕಣ್ಣಿಗೂ ತಂಪು. ಬಿಳಿ ಅಂದರೆ ಬೋರಿಂಗ್ ಕಲರ್ ಅನ್ನೋ ಅಭಿಪ್ರಾಯವಿದೆ. ಆದರೆ, ಬಿಳಿಬಣ್ಣದ ಉಡುಗೆಗಳು ಈಗ ವೆಸ್ಟರ್ನ್ (ಪಾಶ್ಚಾತ್ಯ) ಹಾಗೂ ಇಂಡಿಯನ್ (ಸಾಂಪ್ರದಾಯಿಕ) ಶೈಲಿಗಳಲ್ಲಿಯೂ ಲಭ್ಯ. ಬಿಗಿಯಾಗಿರದ, ಅಂದರೆ ಒಂದು ಅಳತೆಗಿಂತ ಒಂದು ಸೈಜ್ ದೊಡ್ಡದಾಗಿರುವ ಉಡುಗೆಗಳು ಬೇಸಿಗೆಗೆ ಹೇಳಿ ಮಾಡಿಸಿದ್ದು.
ಬಿಳಿಯಲ್ಲಿ ಬಹಳಷ್ಟು ಆಯ್ಕೆ: ಬಿಳಿ ಕೋಟ್‌ನ ಜೊತೆಗೆ ಬಿಳಿ ಅಂಗಿ ಮತ್ತು ಬಿಳಿಯ ಸ್ಕರ್ಟ್ ಅಥವಾ ಶಾರ್ಟ್ಸ್ ತೊಡಬಹುದು. ಇಲ್ಲವೆ, ಬಿಳಿಬಣ್ಣದ ಬಗೆಬಗೆಯ ಪ್ಯಾಂಟ್‌ಗಳನ್ನೂ ಧರಿಸಬಹುದು. ಸಡಿಲ ಹಾಗೂ ಆರಾಮದಾಯಕ ಪ್ಯಾಂಟ್‌ಗಳಲ್ಲಿ ಬಹಳಷ್ಟು ಆಯ್ಕೆಗಳಿವೆ. ಸಲ್ವಾರ್ ಪ್ಯಾಂಟ್, ಪಟಿಯಾಲ, ಪಂಜಾಬಿ ಸೂಟ್, ಪಲಾಝೊà, ಹ್ಯಾರೆಮ್ ಪ್ಯಾಂಟ್, ಜೀನೀ ಪ್ಯಾಂಟ್, ಬೆಲ್‌ಬಾಟಮ…, ಪ್ಯಾರಲಲ್‌ಪ್ಯಾಂಟ್, ಧೋತಿ ಪ್ಯಾಂಟ್.. ಹೀಗೆ.. ಇವುಗಳಲ್ಲಿ ಯಾವುದು ನಿಮಗೆ ಒಪ್ಪುತ್ತದೆ ಎಂದು ಪ್ರಯೋಗ ಮಾಡಿ ನೋಡಬಹುದು.
ಬಿಳಿಯ ಮೇಲೆ ಕಸೂತಿ ಚಿತ್ತಾರ: ಬಿಳಿಯ ಅಂಗಿ, ಕೋಟು, ಲಂಗ ಅಥವಾ ಪ್ಯಾಂಟ್ ಮೇಲೆ ಬಿಳಿಯ ದಾರಗಳಿಂದ ಕಸೂತಿ ಹಾಕಿರುತ್ತಾರೆ ಅಥವಾ ಸಾದಾ ಉಡುಪಿನ ಮೇಲೆ ಪ್ರತ್ಯೇಕವಾಗಿ ಕಸೂತಿ ಹಾಕಿಸಿದರೆ ಉಡುಪಿನ ಅಂದ ಇನ್ನೂ ಹೆಚ್ಚಾಗುತ್ತದೆ. ಬಿಳಿ ಕುರ್ತಾ ಜೊತೆಗೆ ಬಿಳಿಯ ಪ್ಯಾಂಟ್ ತೊಡುವುದಾದರೆ ಬಿಳಿ ದುಪಟ್ಟಾ (ಶಾಲು)ವನ್ನೇ ತೊಡುವುದು ಉತ್ತಮ. ಸಾದಾ ಬಿಳಿಯ ಉಡುಪಿನ ಮೇಲೆ ಲೇಸ್ ವರ್ಕ್, ಕ್ರೋಷೆ ಕೆಲಸ ಮಾಡಿಸಬಹುದು. ಲೇಸ್ ಮತ್ತು ಕ್ರೋಷೆ ಉಳ್ಳ ಬಿಳಿ ಬಣ್ಣದ ರೆಡಿಮೇಡ್ ಉಡುಪುಗಳೂ ಲಭ್ಯ. ಅಂಗಡಿ, ಅಂಗಡಿ ಅಲೆಯುವಷ್ಟು ತಾಳ್ಮೆ ಇಲ್ಲದವರಿಗೆ ಆನ್‌ಲೈನ್ ಶಾಪಿಂಗ್ ಇದ್ದೇ ಇದೆಯಲ್ಲ.
ಬೇಸಿಗೆಗೆ ಬಿಳಿಯೇ ಬೆಸ್ಟ್: ಬಿಳಿ ಬಣ್ಣದ ಒನ್ ಪೀಸ್‌ಗಳನ್ನು ಧರಿಸಿಯೂ ಬೇಸಿಗೆಯ ಸೆಖೆಯನ್ನು ದೂರವಾಗಿಸಬಹುದು. ಶರ್ಟ್‌ಡ್ರೆಸ್, ಜಂಪ್‌ಸೂಟ್, ಕಾಕ್ಟೇಲ… ಔಟ್‌ಫಿಟ್, ರಾಪ್ ಡ್ರೆಸ್, ಸನ್‌ಡ್ರೆಸ್, ಫ್ರಾಕ್, ಮಿಡಿ ಡ್ರೆಸ್ ಮತ್ತು ಗೌನ್‌ಗಳಲ್ಲೂ ಬಹಳಷ್ಟು ಆಯ್ಕೆಗಳಿವೆ. ಸ್ಲಿàವ್‌ಲೆಸ್ (ತೋಳುಗಳು ಇಲ್ಲದ) ಉಡುಪುಗಳೂ ಆರಾಮದಾಯಕ ಆಗಿರುತ್ತವೆ. ಉಡುಪಿನ ಬಟ್ಟೆ ಹತ್ತಿಯಾಗಿರುವುದರಿಂದ, ಬಟ್ಟೆ ಬೆವರನ್ನು ಹೀರಿಕೊಳ್ಳುತ್ತದೆ. ಹಾಗಾಗಿ, ಫುಲ್ ಸ್ಲಿàವ್ಸ್ ಇದ್ದರೂ, ಇಲ್ಲದಿದ್ದರೂ ಸೆಖೆಯ ಸಮಸ್ಯೆ ಕಾಡುವುದಿಲ್ಲ.ನಿಮ್ಮ ಅಭಿರುಚಿಗೆ ತಕ್ಕಂತೆ ತೋಳುಗಳು ಬೇಕೋ, ಬೇಡವೋ ಎಂದು ನಿರ್ಧರಿಸಬಹುದು.
ಬಿಳಿಗೆ ಬೆಳ್ಳಿಯೋ, ಚಿನ್ನವೋ?: ಹಿಮದಂಥ ಬಿಳಿ ಉಡುಪು ತೊಟ್ಟ ಮೇಲೆ ಚಂದದ ಆಭರಣ ತೊಡಬೇಕಲ್ಲ. ಅದರಲ್ಲಿಯೂ ಬಹಳಷ್ಟು ಆಯ್ಕೆಗಳಿವೆ. ವೈಟ್ ಮೆಟಲ…, ಜಂಕ್ ಜ್ಯುವೆಲರಿ, ಬೆಳ್ಳಿ, ಪ್ಲಾಟಿನಂ, ವಜ್ರ ಅಥವಾ ಚಿನ್ನಾಭರಣಗಳನ್ನು ತೊಡಬಹುದು. ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡುವ ಬದಲು ಎಲ್ಲ ಒಂದೇ ಬಗೆಯ ಒಡವೆಗಳನ್ನು ಧರಿಸಿ. ಅಂದರೆ, ಬೆಳ್ಳಿ ಬಳೆಗಳ ಜೊತೆ ಚಿನ್ನದ ಸರ ಮತ್ತು ವಜ್ರದ ಕಿವಿಯೋಲೆ ತೊಡಬೇಡಿ. ಬೆಳ್ಳಿ ಬಳೆಗಳ ಜೊತೆ, ಬೆಳ್ಳಿಸರ, ಬೆಳ್ಳಿ ಕಿವಿಯೋಲೆ ತೊಡಿ. ಚಿನ್ನದ ಬಳೆ ಜೊತೆ ಚಿನ್ನದ ಸರ, ಚಿನ್ನದ ಕಿವಿಯೋಲೆಯೇ ಚೆನ್ನ. ಈ ರೀತಿ ಎಲ್ಲ ಆಕ್ಸೆಸರೀಸ್ ಒಂದೇ ಬಗೆಯ¨ªಾಗಿದ್ದರೆ ಬಿಳಿಬಣ್ಣದ ಉಡುಪಿಗೂ ಒಂದು ಮೆರುಗು ಸಿಗುತ್ತದೆ.
* ಅದಿತಿಮಾನಸ. ಟಿ.ಎಸ್.