Advertisement

ಹಳ್ಳಿಗಳಲ್ಲಿಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

03:49 PM Sep 25, 2020 | Suhan S |

ತಿಪಟೂರು: ತಾಲೂಕಾದ್ಯಂತ ಹಳ್ಳಿಗಳೆಲ್ಲೆಲ್ಲಾ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಕ್ರಮಕೈಗೊಳ್ಳ ಅಬಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧ ತಾಲೂಕಿನ ಬಹುತೇಕ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಳೆದ 7-8 ತಿಂಗಳುಗಳಿಂದ ಕೋವಿಡ್‌-19ನಿಂದ ಬದುಕು ನಡೆಸುವುದೇ ದುಸ್ತರವಾಗಿರುವ ಇಂಥ ವೇಳೆ ಒಂದೊಂದು ಗ್ರಾಮದಲ್ಲಿ ಎರಡು-ಮೂರು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿರುವುದರಿಂದ ಬಡ ಹಾಗೂ ಮಧ್ಯಮ ಕುಟುಂಬಗಳು ಬೀದಿ ಪಾಲಾಗುತ್ತಿರುವ ಬಗ್ಗೆ ಅಬಕಾರಿ, ಪೊಲೀಸ್‌ ಇಲಾಖೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದಿರುವುದನ್ನು ನೋಡಿದರೆ ಅಧಿಕಾರಿಗಳೇ ಅಕ್ರಮ ಮಾರಾಟಗಾರರಿಗೆ ಶಾಮೀಲಾಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಎಣ್ಣೆ ದಾಸರಾಗುತ್ತಿರುವ ಯುವಕರು, ವಿದ್ಯಾರ್ಥಿಗಳು: ಹಳ್ಳಿಗಳಲ್ಲೂ ಮದ್ಯ ಸಿಗುತ್ತಿರುವುದರಿಂದ ಹಳ್ಳಿಗಳಲ್ಲಿರುವ ಯುವಜನತೆ, ವಿದ್ಯಾರ್ಥಿಗಳು ಸಹ ಕುಡಿತದ ದಾಸರಾಗುತ್ತಿದ್ದಾರೆ. ಇನ್ನೂ ಕೆಲವರು ಕೂಲಿ ಮಾಡುವವರಿಗೆ, ಯುವಕರಿಗೆ ಕೇವಲ ಎಣ್ಣೆ (ಮದ್ಯ) ಕುಡಿಸಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದುಕಂಡುಬರುತ್ತಿದ್ದುಇದರಿಂದಲೂ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಹಳ್ಳಿಗಳಲ್ಲಿ ಯಾರೇ ಕೆಲಸಕ್ಕೆ ಕರೆದರೂ ಸಂಜೆಗೆ ಎಣ್ಣೆ ಹಾಕಿಸುತ್ತೀರಾ ಎಂದು ಕೇಳುವಂತಾಗಿದೆ. ಸಣ್ಣಪುಟ್ಟ ಸಮಾರಂಭಗಳಿದ್ದರೂ ಹಳ್ಳಿಗಳಲ್ಲಿ ಯುವಕರಿಗೆ ಎಣ್ಣೆ ಪಾರ್ಟಿ ಮಾಡಿಸಲೇ ಬೇಕು ಎಂಬ ಮಟ್ಟಿಗೆ ಎಣ್ಣೆ ಮಾರಾಟವಾಗುತ್ತಿದ್ದು ಬದುಕಿ ಬಾಳಬೇಕಾದ ಯುವಜನತೆ, ವಿದ್ಯಾರ್ಥಿಗಳೂ ದಿಕ್ಕು ತಪ್ಪುವಂತಾಗಿದೆ. ದಿನದಿಂದ ದಿನಕ್ಕೆ ಕುಡುಕರ ಹಾವಳಿ ಹೆಚ್ಚಾಗುತ್ತಿದ್ದು, ಸಂಜೆಯಾದರೆ ಸಾಕು ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿ ಗಲಾಟೆ ಮಾಡಿಕೊಳ್ಳುತ್ತಾರೆ. ಇದರಿಂದಮಹಿಳೆಯರುಮತ್ತುಮಕ್ಕಳು ಗ್ರಾಮದಬೀದಿಗಳಲ್ಲಿ ಓಡಾಡದಂತಾಗಿದೆ. ಹಳ್ಳಿಗಳಲ್ಲಿ ಎಣ್ಣೆ ಮಾರುವವರಿಗೆ ಸಾರ್ವಜನಿಕರು, ಮಹಿಳೆಯರು ಎಣ್ಣೆ ಮಾರಕೂಡದು. ಮಾರಿದ್ರೆ ದೂರು ನೀಡುತ್ತೇವೆಂದು ಹೆದರಿಸಿದರೂ ಮಾರಾಟಗಾರರು ಯಾರಿಗೆ ದೂರು ನೀಡುತ್ತೀರೋ ನೀಡಿ ಎಂದು ಬೆದರಿಕೆ ಹಾಕುತ್ತಾರೆ ಎಂದುಮಹಿಳೆಯರು ದೂರುತ್ತಿದ್ದಾರೆ.

ದುಪ್ಪಟ್ಟು ಹಣಕ್ಕೆ ಮಾರಾಟ: ಎಂಎಸ್‌ಐಎಲ್‌ ಮಳಿಗೆಯಲ್ಲಿ ಮಾರಾಟವಾಗುವ ಒಂದು ಪ್ಯಾಕೆಟ್‌ಗೆ 35 ರೂ. ಇದ್ದರೆ ಹಳ್ಳಿಗಳಲ್ಲಿ ಅಕ್ರಮವಾಗಿ 55 ರಿಂದ60 ರೂ. ತನಕ ಇದೆ, ಮನೆ ಮುಂದೆ, ಗ್ರಾಮಗಳಲ್ಲಿಯೇ ಸಿಗುತ್ತಲ್ಲ ಎಂಬ ಕೆಟ್ಟ ಮನೋಭಾವನೆಯಿಂದ ಕುಡಿತದ ಚಟಗಾರರು ಡಬಲ್‌ ಬೆಲೆ ನೀಡಿ ಕುಡಿಯುತ್ತಿದ್ದು ದುಡಿದ ಹಣವನ್ನೆಲ್ಲಾ ಎಣ್ಣೆ ಪಾಲು ಮಾಡಿಕೊಳ್ಳುವ ಮೂಲಕ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

Advertisement

ಹಳ್ಳಿಗಳನ್ನು ಉಳಿಸಿಕೊಡಿ: ತಾಲೂಕಿನ ಬಹುತೇಕ ಹಳ್ಳಿಗಳಲ್ಲಿನ ಈ ದಂಧೆಯನ್ನು ಕೂಡಲೇ ಜಿಲ್ಲಾ ಹಾಗೂ ತಾಲೂಕು ಅಬಕಾರಿ ಅಧಿಕಾರಿಗಳ ಮೇಲೆ ಹಾಗೂ ಅಕ್ರಮ ಮದ್ಯದಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಯನ್ನು ನಿಲ್ಲಿಸುವ ಮೂಲಕ ಹಳ್ಳಿಗಳಲ್ಲಿನ ನೆಮ್ಮದಿ, ಯುವಜನತೆಯನ್ನು ರಕ್ಷಿಸಬೇಕೆಂದು ಮಹಿಳಾ ಸಂಘಟನೆಯವರು ಒತ್ತಾಯಿಸಿದ್ದಾರೆ.

ನ‌ಗರ ಅಥವಾ ಹಳ್ಳಿಗಳಲ್ಲಿ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುವುದು ಅಪರಾಧ. ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟನಡೆಯುತ್ತಿರುವ ವಿಷಯಇಲಾಖೆ ಗಮನಕ್ಕೂ ಬಂದಿದೆ. ದೂರುಗಳುಬಂದಕಡೆ ಭೇಟಿನೀಡಿಕೆಲಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಮುಂದೆಯೂ ದೂರು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಎಸ್‌ಐ, ಅಬಕಾರಿ ಇಲಾಖೆ, ತಿಪಟೂರು

 

ಬಿ.ರಂಗಸ್ವಾಮಿ, ತಿಪಟೂರು

Advertisement

Udayavani is now on Telegram. Click here to join our channel and stay updated with the latest news.

Next