Advertisement

ಶುಕ್ರಯಾನ ಭಾರತದ ಚಾರಿತ್ರಿಕ ದಾಖಲೆ

01:04 PM May 02, 2019 | pallavi |

ಧಾರವಾಡ: ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕಾಗಿ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಕಳಿಸುವ ‘ಶುಕ್ರಯಾನ’ ಯೋಜನೆ ಭಾರತದ ಚಾರಿತ್ರಿಕ ದಾಖಲೆಯಾಗಿದೆ. ಈ ಯೋಜನೆ ಕಾರ್ಯಗತವಾಗಲು ಇನ್ನೂ ಕೆಲವು ವರ್ಷಗಳು ಬೇಕು ಎಂದು ಇಸ್ರೋದ ವಿಶ್ರಾಂತ ನಿರ್ದೇಶಕ ಡಾ| ಸಿ.ಜಿ. ಪಾಟೀಲ ಹೇಳಿದರು.

Advertisement

ನಗರದ ಕವಿಸಂನಲ್ಲಿ ‘ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಿಂದ ದೇಶಕ್ಕಾದ ಲಾಭ’ ವಿಷಯ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1975ರಲ್ಲಿ ಭಾರತವು ಪ್ರಥಮ ಬಾರಿಗೆ ‘ಆರ್ಯಭಟ್’ ಹೆಸರಿನ ಉಪಗ್ರಹವನ್ನು ರಷ್ಯಾದ ರಾಕೇಟ್ ಒಂದರ ಮೂಲಕ ಉಡಾವಣೆ ಮಾಡಿತ್ತು. ನಂತರ 1980ರಲ್ಲಿ ‘ರೋಹಿಣಿ’ ಹೆಸರಿನ ಉಪಗ್ರಹವನ್ನು ಭಾರತವು ಸ್ವತಂತ್ರವಾಗಿ ಉಡಾಯಿಸಿ ಚಾರಿತ್ರಿಕ ಪುಟ ಸೇರಿತು. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಇಂದು ಅಮೆರಿಕಾ ಹಾಗೂ ರಷ್ಯಾಗಳಂತಹ ಶಕ್ತಿಶಾಲಿ ದೇಶಗಳ ಅಗ್ರಸಾಲಿಗೆ ಸೇರಿದೆ ಎಂದರು.

ಸಾðಮಜೆಟ್ ರಾಕೇಟ್ ತಂತ್ರಜ್ಞಾನವು ಭಾರತದ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಸಾðಮಜೆಟ್ ವಾತಾವರಣದಲ್ಲಿಯ ಆಮ್ಲಜನಕವನ್ನು ಹೀರಿಕೊಂಡು ಕಾರ್ಯ ನಿರ್ವಹಿಸುವುದರಿಂದ ಕಾರ್ಯಾಚರಣೆಯ ಖರ್ಚು ವೆಚ್ಚದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಅದರಂತೆ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ ಮಾರ್ಕ್‌-3 (ಜಿ.ಎಸ್‌.ಎಲ್.ವಿ) ಎಂಬುದು ಏಷ್ಯಾದ ಒಟ್ಟು 200 ಆನೆಗಳ ತೂಕವನ್ನು ಹೊಂದಿದ್ದು, 640 ಟನ್‌ ಭಾರವಾಗಿದೆ. ಇದನ್ನು ಮಾನವ ಸಹಿತ ಬಾಹ್ಯಾಕಾಶ ಯಾನಕ್ಕಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಇದು ದೇಶೀಯ ಕ್ರಯೋಜೆನಿಕ್‌ ಇಂಜಿನ್‌ ಹೊಂದಿದ್ದು ವಿಶೇಷ. ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ಇತ್ತೀಚೆಗೆ ಸಂಪರ್ಕ ಜಾಲಕ್ಕೂ ಅಳವಡಿಸಿದ್ದರಿಂದ ಅದು ಆರ್ಥಿಕ ಕ್ಷೇತ್ರದಲ್ಲೂ ಅದ್ಭುತ ಪ್ರಗತಿ ಹೊಂದಲು ಕಾರಣವಾಗಿದೆ ಎಂದು ಹೇಳಿದರು.

ಬಿಜಿನೆಸ್‌ ಇಂಡಿಯಾದ ಸಲಹಾ ಸಂಪಾದಕ ಡಾ| ಶಿವಾನಂದ ಕಣವಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘದ ಪರವಾಗಿ ಇಸ್ರೋದ ವಿಶ್ರಾಂತ ನಿರ್ದೇಶಕ ಡಾ| ಸಿ.ಜಿ. ಪಾಟೀಲ ಅವರನ್ನು ಗೌರವಿಸಲಾಯಿತು. ಶಾಂತೇಶ ಗಾಮನಗಟ್ಟಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next