Advertisement
ಪಾಕಿಸ್ಥಾನ-ಅಫ್ಘಾನಿಸ್ಥಾನ ನಡುವಿನ ಮೊದಲ ಏಕದಿನ ಪಂದ್ಯ ಮುಗಿದ ಬಳಿಕ ಐಸಿಸಿ ನೂತನ ರ್‍ಯಾಂಕಿಂಗ್ ಯಾದಿಯನ್ನು ಬಿಡುಗಡೆ ಮಾಡಿತು. ಶುಭಮನ್ ಗಿಲ್ 743 ರೇಟಿಂಗ್ ಅಂಕಗಳನ್ನು ಹೊಂದಿದ್ದು, ಭಾರತದ ಅಗ್ರಮಾನ್ಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕಿಸ್ಥಾನದ ಇಮಾಮ್ ಉಲ್ ಹಕ್ ಕೂಡ ಒಂದು ಸ್ಥಾನ ಮೇಲೇರಿ ಮೂರಕ್ಕೆ ಬಂದು ನಿಂತಿದ್ದಾರೆ.
Related Articles
ತಂಡಕ್ಕೆ ಮರಳಿ ಐರ್ಲೆಂಡ್ ಟಿ20 ಸರಣಿಯಲ್ಲಿ ನಾಯಕತ್ವ ವಹಿಸಿರುವ ಜಸ್‌ಪ್ರೀತ್ ಬುಮ್ರಾ ಮತ್ತು ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಅವರದು ಭರ್ಜರಿ ನೆಗೆತ. ಬುಮ್ರಾ 7 ಮೆಟ್ಟಿಲು ಮೇಲೇರಿದ್ದು, 84ನೇ ಸ್ಥಾನಿಯಾಗಿದ್ದಾರೆ. ಬಿಷ್ಣೋಯಿ ಅವರದು 17 ಸ್ಥಾನಗಳ ನೆಗೆತ. ಅವರಿಗೀಗ 65ನೇ ಸ್ಥಾನ.
Advertisement
ಐರ್ಲೆಂಡ್ ಎದುರಿನ ದ್ವಿತೀಯ ಪಂದ್ಯ ದಲ್ಲಿ 58 ರನ್ ಬಾರಿಸಿದ ರುತುರಾಜ್ ಗಾಯಕ್ವಾಡ್ ಒಮ್ಮೆಲೇ 143 ಸ್ಥಾನ ಮೇಲೇರಿ 87ನೇ ರ್‍ಯಾಂಕಿಂಗ್ ಪಡೆದಿ ದ್ದಾರೆ. ಐರ್ಲೆಂಡ್ ಸರಣಿಯಲ್ಲಿ ಆಡ ದಿದ್ದರೂ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ (889). ಸೂರ್ಯ ಹೊರತುಪಡಿಸಿ ಭಾರತ ದವರ್ಯಾರೂ ಅಗ್ರ ಹತ್ತರ ಯಾದಿಯಲ್ಲಿಲ್ಲ.
ಬೌಲಿಂಗ್ ವಿಭಾಗದ ಟಾಪ್-10 ಯಾದಿಯಲ್ಲಿ ಭಾರತೀಯರ್ಯಾರೂ ಸ್ಥಾನ ಸಂಪಾದಿಸಿಲ್ಲ. ಆಲ್‌ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ದ್ವಿತೀಯ ಸ್ಥಾನಿಯಾಗಿದ್ದಾರೆ.