Advertisement

ಶ್ರುತಿ ಹರಿಹರನ್‌ ಹೊಸ ಇನ್ನಿಂಗ್ಸ್‌

01:06 PM Sep 08, 2021 | Team Udayavani |

ಸ್ಯಾಂಡಲ್‌ವುಡ್‌ನ‌ಲ್ಲಿ ಜೋರಾಗಿ ಸೌಂಡ್‌ ಮಾಡಿದ್ದ “ಮಿಟೂ’ ಪ್ರಕರಣದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಶ್ರುತಿ ಹರಿಹರನ್‌, ಅದಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ ಅದರ ಪಾಲನೆ-ಪೋಷಣೆ ಅಂಥ ಕೌಟುಂಬಿಕ ಜೀವನದಲ್ಲಿ ಬಿಝಿಯಾಗಿದ್ದರು.

Advertisement

ಇನ್ನು ಫ್ಯಾಮಿಲಿ ಲೈಫ್ನಲ್ಲಿ ಎಂಗೇಜ್‌ ಆಗುತ್ತಿದ್ದಂತೆ, ಶ್ರುತಿ ಹರಿಹರನ್‌ ಮತ್ತೆ ಚಿತ್ರರಂಗದಲ್ಲಿ ಬರುವುದಿಲ್ಲ, ಪಾತ್ರಗಳಿಗೆ ಬಣ್ಣ ಹಚ್ಚುವುದು ಅನುಮಾನ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬಂದಿದ್ದವು. ಇವೆಲ್ಲದರ ನಡುವೆಯೇ ನಟಿ ಶ್ರುತಿಹರಿಹರನ್‌ ಸದ್ದಿಲ್ಲದೆ ಮತ್ತೆ ಚಿತ್ರರಂಗಕ್ಕೆ ಮರಳುವ ಸಿದ್ಧತೆಯಲ್ಲಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ಕೇಸಿನಲ್ಲಿ ಎಷ್ಟೇ ಪ್ರಭಾವಿಯಾದರೂ ಕಠಿಣ ಕ್ರಮ‌ ಖಚಿತ : ಅರಗ ಜ್ಞಾನೇಂದ್ರ

ಹೌದು, ಡಾಲಿ ಧನಂಜಯ್‌ ನಾಯಕನಾಗಿ ಅಭಿನಯಿಸುತ್ತಿರುವ “ಹೆಡ್‌ಆ್ಯಂಡ್‌ಬುಷ್‌’ ಚಿತ್ರದಲ್ಲಿ ಶ್ರುತಿಹರಿಹರನ್‌ ಕೂಡ ಪ್ರಮುಖ ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ.ಇತ್ತೀಚೆಗಷ್ಟೇಚಿತ್ರತಂಡಅಧಿಕೃತವಾಗಿಶ್ರುತಿ ಹರಿಹರನ್‌ ಚಿತ್ರದಲ್ಲಿ ‌ ಅಭಿನಯಿಸುತ್ತಿರುವ ಸುದ್ದಿಯನ್ನು ಖಚಿತಪಡಿಸಿದ್ದು, ಚಿತ್ರದ‌ಲ್ಲಿ ಅವರ ಪಾತ್ರದಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಒಟ್ಟಾರೆ ಶ್ರುತಿಹರಿಹರನ್‌ ರೀ-ಎಂಟ್ರಿ ಚಿತ್ರರಂಗ ‌ ಮತ್ತು ಸಿನಿಪ್ರಿಯರಲ್ಲಿ ಒಂದಷ್ಟು ‌ ಕುತೂಹಲ, ನಿರೀಕ್ಷೆ ಮುಡಿಸಿದ್ದು, ಚಿತ್ರ ರಿಲೀಸ್‌ ಆದ ಮೇಲಷ್ಟೇ ಅದೆಲ್ಲದಕ್ಕೂ ‌ ತೆರೆ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next