Advertisement

ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಗೆ ದುಡ್ಡಿನ ಸಮಸ್ಯೆಯಾಗಿದೆಯಂತೆ!

10:44 AM May 11, 2021 | Team Udayavani |

ನವದೆಹಲಿ : ಭಾರತೀಯ ಸಿನಿಮಾರಂಗದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರಂತೆ. ಖ್ಯಾತ ನಟನ ಮಗಳಾಗಿ ಆರ್ಥಿಕ ಸಂಕಷ್ಟನಾ? ಎಂಬ ಪ್ರಶ್ನೆ ನಿಮಗೆ ಮೂಡಬಹುದು.  ಶೃತಿ ಹಣಕಾಸಿನ ಸಮಸ್ಯೆಯಲ್ಲಿದ್ದು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ  ಇದೆ ಎಂದು ಶೃತಿ ಹಾಸನ್ ಹೇಳಿಕೊಂಡಿದ್ದಾರೆ.

Advertisement

ನಾನು ಮರೆಮಾಚಲು ಸಾಧ್ಯವಿಲ್ಲ. ನನಗೆ ಕೋವಿಡ್ ರೋಗ ಮುಗಿಯುವವರೆಗೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆರೋಗ್ಯದ ಬಗ್ಗೆ ಭಯದ ನಡುವೆಯೂ ಚಿತ್ರೀಕರಣ ಮಾಡುವುದು ಕಠಿಣವಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲಸ  ಶೂಟಿಂಗ್  ಆರಂಭ ಮಾಡುವುದು ಮುಖ್ಯವಾಗಿದೆ ಎಂದಿದ್ದಾರೆ.

ನಾನು ಕೆಲಸಕ್ಕೆ ಹೋಗಲೇ ಬೇಕಾಗಿದೆ. ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಶೃತಿ ಹೇಳಿದ್ದಾರೆ.  ಶೂಟಿಂಗ್ ಪ್ರಾರಂಭವಾಗುತ್ತಿದ್ದಂತೆ ನಾನು ಭಾಗಿಯಾಗುತ್ತೇನೆ. ನನ್ನ ಎಲ್ಲಾ ವೃತ್ತಿಪರ ಬದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಶೃತಿಹಾಸನ್  ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.