ಶ್ರೀರಂಗಪಟ್ಟಣ : ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಾವೇರಿ ನದಿ ತಟದಲ್ಲಿ ಸಾಂಕೇತಿಕವಾಗಿ ಪಿಂಡ ಪ್ರದಾನ ಮಾಡಿ ವಿಶಿಷ್ಟ ರೀತಿ ಪ್ರತಿಭಟನೆ ಮೂಲಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಕಾವೇರಿ ನದಿ ತೀರದಲ್ಲಿ ಜಮಾಯಿಸಿ ಕನ್ನಡ ಬಾವುಟ ಹಿಡಿದು ರೋಹಿತ್ ಚಕ್ರತೀರ್ಥ ವಿರುದ್ದ ಧಿಕ್ಕಾರ ಕೂಗಿದ್ದಾರೆ.
ರೋಹಿತ್ ಚಕ್ರತೀರ್ಥ ಭಾವಚಿತ್ರ ಇರಿಸಿ ಪಿಂಡ ಇಟ್ಟು ಪೂಜೆ ಸಲ್ಲಿಸಿ, ನದಿಗೆ ಇಳಿದು ತಿಲ ತರ್ಪಣ ಅರ್ಪಿಸಿ ಪಿಂಡ ಪ್ರದಾನ ಮಾಡಿದರು. ಕನ್ನಡ ನಾಡು ನುಡಿ,ಸಾಹಿತಿಗಳಿಗೆ ಅವಮಾನ ಹಿನ್ನೆಲೆಯಲ್ಲಿ ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಗದೀಶ, ನಾರಾಯಣಗೌಡ,ಕುಮಾರ್,ವಿಶ್ವಾಸ್,ರಾಬಿನ್,ಕೂಡಲಕುಪ್ಪೆ ಕುಮಾರ್ ,ರವಿ ಮತ್ತಿತರರು ಭಾಗಿಯಾಗಿದ್ದರು.