ಹಾವೇರಿ: ರಾಜ್ಯದ ಉಪಚುನಾವಣೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯ ಗಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.
ಗೆಲುವು ಸಾಧಿಸುವ ಫೇವರೆಟ್ ಆಗಿದ್ದ ಬಿಜೆಪಿಗೆ ಹಾನಗಲ್ ಕ್ಷೇತ್ರದ ಮತದಾರರು ಶಾಕ್ ನೀಡಿದ್ದಾರೆ. ಕಡೆಯ ಕ್ಷಣದಲ್ಲಿ ಅಚ್ಚರಿಯೆಂಬಂತೆ ಟಿಕೆಟ್ ಪಡೆದಿದ್ದ ಶಿವರಾಜ್ ಸಜ್ಜನರ್ ಕಮಲ ಅರಳಿಸುವಲ್ಲಿ ವಿಫಲರಾಗಿದ್ದಾರೆ. ಸ್ವತಃ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಂಪುಟದ ಸಚಿವರು ಬಂದು ಪ್ರಚಾರ ಮಾಡಿದರೂ ಮತದಾರರು ಮಾನೆ ಕೈ ಹಿಡಿದಿದ್ದಾರೆ.
19 ಸುತ್ತಿನ ಮತ ಎಣಿಕೆಯ ಬಳಿಕ ಕಾಂಗ್ರೆಸ್ ನ ಶ್ರೀನಿವಾಸ ಮಾನೆ 87,113 ಮತಗಳನ್ನು ಪಡೆದರೆ, ಬಿಜೆಪಿಯ ಅಭ್ಯರ್ಥಿಶಿವರಾಜ ಸಜ್ಜನರ 79,515 ಮತಗಳನ್ನಷ್ಟೇ ಪಡೆದರು. ಜೆಡಿಎಸ್ ನ ನಿಯಾಜ್ ಶೇಖ್ ಪಾಲಿಗೆ ಕೇವಲ 921 ಮತಗಳಷ್ಟೇ ಲಭ್ಯವಾಯಿತು. ಸಿಂದಗಿಯಂತೆ ಹಾನಗಲ್ ನಲ್ಲೂ ಜೆಡಿಎಸ್ ಠೇವಣಿ ಕಳೆದುಕೊಂಡಿತು. ಕಾಂಗ್ರೆಸ್ ನ ಮಾನೆ 7,598 ಮತಗಳ ಅಂತರದ ಗೆಲುವು ಸಾಧಿಸಿದರು.
ಇದನ್ನೂ ಓದಿ:JDS ಪಕ್ಷವನ್ನು ಅಲ್ಪಸಂಖ್ಯಾತರರು ನಂಬುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ: ಜಮೀರ್
ಹಾವೇರಿ ನಗರ ಮತ್ತು ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ, ಹರ್ಷೋದ್ಗಾರ, ಜೈಕಾರ ಮೊಳಗುತ್ತಿದೆ.