ಗಂಗಾವತಿ: ಈ ಬಾರಿ ಗಂಗಾವತಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್. ಆರ್ .ಶ್ರೀನಾಥ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಬಿ ಫಾರಂ ನಿಗಿಯಾಗಿದ್ದು ಹೆಚ್. ಆರ್. ಶ್ರೀನಾಥ್ ಅವರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದು ಒಂದೆರಡು ದಿನಗಳಲ್ಲಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರು ಶನಿವಾರ ರಾತ್ರಿ ಮಾಜಿ ಸಂಸದ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಜಿ ರಾಮುಲು ನಿವಾಸಕ್ಕೆ ಭೇಟಿ ನೀಡಿ ರಹಸ್ಯವಾಗಿ ಹೆಚ್.ಜಿ.ರಾಮುಲು ಹಾಗೂ ಎಚ್. ಆರ್ .ಶ್ರೀನಾಥ್ ಅವರೊಂದಿಗೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಶ್ರೀ ನಾಥ ಅವರನ್ನು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ ಮಧ್ಯಸ್ಥಿಕೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿತ್ತು ಅಂದಿನಿಂದ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ್ ನಾಗಪ್ಪ ಸೇರಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಹೆ ಚ್ಆರ್ ಶ್ರೀನಾಥ್ ಶತಾಯಗತಾಯ ಪ್ರಯತ್ನ ನಡೆಸಿದ್ದರು. ಎರಡನೆಯ ಕಾಂಗ್ರೆಸ್ ಪಟ್ಟಿಯಲ್ಲಿ ಇಕ್ಬಾಲ್ ಅನ್ಸಾರಿ ಅವರ ಹೆಸರು ಘೋಷಣೆಯಾಗಿದ್ದು ಇದರಿಂದ ಹೆಚ್.ಆರ್. ಶ್ರೀನಾಥ್ ಆಕ್ರೋಶಗೊಂಡಿದ್ದಾರೆ.
ತಮಗೆ ಟಿಕೆಟ್ ಸಿಗದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಸೋಲು ಖಚಿತ. ತಾವು ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು ನಮ್ಮ ತಂದೆ ರಾಮುಲು ಅವರು ಇಂದಿರಾಗಾಂಧಿಯವರ ಒಡನಾಡಿಯಾಗಿದ್ದಾರೆ. ನಮಗೆ ಟಿಕೆಟ್ ನೀಡುವಂತೆ ಎಲ್ಲಾ ಸಮಾಜದವರು ಕಾಂಗ್ರೆಸ್ ಮುಖಂಡರನ್ನು ಮತ್ತು ಸಿದ್ದರಾಮಯ್ಯನವರನ್ನು ಮನವಿ ಮಾಡಿದ್ದಾರೆ.
ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ನೀಡಿದ್ದು ಪ್ತಸ್ತುತ ಇಂದಿರಾ ಕಾಂಗ್ರೆಸ್ ಇಲ್ಲಾ ಸಿದ್ದರಾಮಯ್ಯ ಕಾಂಗ್ರೆಸ್ . ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೆ ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಖಚಿತ. ಆದ್ದರಿಂದ ರಾಯಚೂರಿನಲ್ಲಿ ಅಲ್ಪಸಂಖ್ಯಾತರಿಗೆ ನೀಡಿ ಗಂಗಾವತಿಯಲ್ಲಿ ನನಗೆ ಟಿಕೆಟ್ ನೀಡುವಂತೆ ಎಚ್. ಆರ್ .ಶ್ರೀನಾಥ್ ಕಾಂಗ್ರೆಸ್ ಮುಖಂಡರು ಮತ್ತು ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದರು.
ಸೌಜನ್ಯದ ಭೇಟಿ
ಹೆಚ್.ಜಿ.ರಾಮುಲು ಹಾಗೂ ಹೆಚ್.ಆರ್.ಶ್ರೀನಾಥ್ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮುಲು ಹಾಗೂ ಹೆಚ್.ಆರ್.ಶ್ರೀನಾಥ್ ಅವರು ತಮ್ಮ ಕುಟುಂಬದ ಆತ್ಮೀಯರಾಗಿದ್ದು ಅವರನ್ನು ರಾಜಕೀಯ ವಿಚಾರವಾಗಿ ಭೇಟಿಯಾಗಿಲ್ಲ.ರಾಮುಲು ಹಿರಿಯ ರಾಜಕಾರಣಿ ಸಲಹೆ ಸೂಚನೆ ನೀಡುತ್ತಾರೆ ಅವರನ್ನು ನನ್ನನ್ನು ಸೇರಿ ಎಲ್ಲಾ ವಿರೋಧ ಪಕ್ಷದ ನಾಯಕರು ಭೇಟಿ ಮಾಡಿ ಸಲಹೆ ಸೂಚನೆ ಕೇಳುವುದು ವಾಡಿಕೆ ಎಂದರು.