Advertisement

ಸೊಲ್ಲಾಪುರ: ಪಂಢರಪುರ ವಿಠ್ಠಲನ ದರ್ಶನಕ್ಕೆ ಭಕ್ತಸಾಗರ

11:17 PM Jul 10, 2022 | Team Udayavani |

ಸೊಲ್ಲಾಪುರ: ಆಷಾಢ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಸಹಿತ ದೇಶದ ಮೂಲೆ ಮೂಲೆಯಿಂದ ಬಂದಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ವಾರಕರಿಗಳು (ಭಕ್ತರು) ರವಿವಾರ ಪಂಢರಪುರ ವಿಠ್ಠಲನ ದರ್ಶನ ಪಡೆದರು.

Advertisement

ರವಿವಾರ ಬೆಳಗ್ಗೆ 2.30ಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಅವರು ಪತ್ನಿ ಲತಾ ಶಿಂಧೆ ಅವರೊಂದಿಗೆ ಸರಕಾರಿ ಮಹಾಪೂಜೆ ನಡೆಸುವ ಅವಕಾಶವು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮುರಳಿ ಭಗವಾನ್‌ ನವಲೆ ಹಾಗೂ ಅವರ ಪತ್ನಿ ಜೀಜಾಬಾಯಿ ಮುರಳಿ ನವಲೆ ಅವರಿಗೆ ಲಭಿಸಿದೆ.

ಪಂಢರಪುರ ಜಾತ್ರೆಗೆ 15 ದಿನ ಗಳಿಂದ ಆಳಂದಿಯಿಂದ ಹೊರಟ್ಟಿದ್ದ ಸಂತ ಜ್ಞಾನೇಶ್ವರ ಮಹಾರಾಜ, ಶೇಗಾಂವ ಸಂತ ಗಜಾನನ ಮಹಾರಾಜ, ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ರವಿವಾರ ಬೆಳಗ್ಗೆ ಪಂಢರಪುರಕ್ಕೆ ಆಗಮಿಸಿತ್ತು.

ಬಳಿಕ ಮಾತನಾಡಿದ ಸಿಎಂ ಏಕನಾಥ ಶಿಂಧೆ, ಇವತ್ತಿನ ಆಷಾಢ ಏಕಾದಶಿ ನನಗೆ ಅತ್ಯಂತ ಮಹತ್ವದ ದಿನ. ರಾಜ್ಯದ ಜನರಿಗಾಗಿ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ. ಕೊರೊನಾದಿಂದಾಗಿ ಎರಡು ವರ್ಷ ಆಷಾಢ ಏಕಾದಶಿ ಆಚರಿಸಲಾಗಿಲ್ಲ. ಆದ್ದರಿಂದ ಪ್ರಸಕ್ತ ವರ್ಷ 10 ಲಕ್ಷಕ್ಕೂ ಅಧಿ ಕ ವಾರಕರಿಗಳು ವಿಠ್ಠಲನ ದರ್ಶನ ಪಡೆದಿದ್ದಾರೆ ಎಂದರು.

ಸಿಎಂ ನಾಲ್ಕು ತಲೆಮಾರು ಪೂಜೆಯಲ್ಲಿ ಭಾಗಿ
ವಿಠ್ಠಲನ ಅಧಿಕೃತ ಮಹಾಪೂಜೆಗೆ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮ ಇಡೀ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು. ಅವರ ತಂದೆ ಸಂಭಾಜಿ, ಏಕನಾಥ ಶಿಂಧೆ ಪತ್ನಿ ಲತಾ, ಪುತ್ರ ಶ್ರೀಕಾಂತ ಹಾಗೂ ಮೊಮ್ಮಗ ಇದ್ದರು.

Advertisement

ಸಂತರ ಕಾರು ಪಲ್ಟಿ: ಇಬ್ಬರ ಸಾವು
ಬೆಳಗಾವಿ: ಆಷಾಢ ಏಕಾದಶಿ ನಿಮಿತ್ತ ಮಹಾರಾಷ್ಟ್ರದ ಪಂಢರಪುರ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಬೆಳಗಾವಿಯ ಸಂತರ (ವಾರಕರಿ) ಕಾರು ಸೊಲ್ಲಾಪುರದ ಸಾಂಗೋಲ ಬಳಿ ರವಿವಾರ ಬೆಳಗ್ಗಿನ ಜಾವ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ನಗರದ ಬಾಂಧುರ ಗಲ್ಲಿ ನಿವಾಸಿಗಳಾದ ರಾಜು ಶಿಂಧೋಲ್ಕರ (45) ಹಾಗೂ ಪರಶುರಾಮ ಸಂಭಾಜಿ ಜಂಗ್ರುಚೆ (50) ಮೃತಪಟ್ಟವರು. ಅನಗೋಳ ನಿವಾಸಿಗಳಾದ ಗೀತೇಶ ಕೋಕಿತಕರ(28), ಅಭಿಜಿತ ಹುಂದರೆ (26) ಹಾಗೂ ಕಾರು ಚಾಲಕ ರಾಜು ಕೃಷ್ಣ ಮಜುಕರ (26) ಗಾಯಗೊಂಡಿದ್ದು, ಅವರನ್ನು ಪಂಢರಪುರದ ಲೈಫ್‌ಲೈನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next