Advertisement
ಮುಂಜಾನೆ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಕಾಶೀ ಮಠಾಧೀಶರು ಮಹಾ ಪ್ರಾರ್ಥನೆ ನಡೆದ ಅನಂತರ ವಿವಿಧ ದ್ರವ್ಯಗಳು ಹಾಗೂ ಪಂಚಾಮೃತ ಹಾಗೂ ಸೀಯಾಳ ಅಭಿಷೇಕದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಿ, ಮಂಗಳಾರತಿ ಮಾಡಿ ಬಳಿಕ ಆಶೀರ್ವಚನವಿತ್ತರು. ಬಳಿಕ ಶ್ರೀಗಳನ್ನು ಕೋಟೇಶ್ವರದ ಮೊಕ್ಕಾಂಗೆ ಬೀಳ್ಕೊಡಲಾಯಿತು.
ದೇವಸ್ಥಾನದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಿರಂತರ ವಿವಿಧ ದ್ರವ್ಯಗಳು ಹಾಗೂ ಭಕ್ತರಿಂದ ಸಮರ್ಪಿತವಾದ ಲಕ್ಷಾಂತರ ಸೀಯಾಳಗಳ ಅಭಿಷೇಕ ನಡೆಯಿತು. ರಾತ್ರಿ ವಿವಿಧ ಉತ್ಸವ, ಮಹಾಪೂಜೆ ಹಾಗೂ ಭಕ್ತರಿಗೆ ದೇವ ದರ್ಶನದಲ್ಲಿ ಅಭಯ ಪ್ರಸಾದ, ಮಹಾ ಪೂಜೆ, ಭೂರಿ ಭೋಜನ ನಡೆದ ಅನಂತರ ಮಹಾ ರಥೋತ್ಸವ ನಡೆಯಿತು.
Related Articles
Advertisement