ದೇವಂ ನಾರಾಯಣಂ ನತ್ವಾ ಸರ್ವದೋಷ ವಿವರ್ಜಿತಂ|
ಪರಿಪೂರ್ಣಂ ಗುರೂಂಚ್ಛಾಪಿ ಗೀತಾರ್ಥಂ ವಕ್ಷಾಮಿ ಲೇಶತಃ||
ಭಗವದ್ಗೀತೆಗೆ ಭಾಷ್ಯವನ್ನು ಬರೆಯುವಾಗ ಶ್ರೀಮಧ್ವಾಚಾರ್ಯರು ಮಂಗಲಶ್ಲೋಕದಲ್ಲಿ ಮೊದಲಾಗಿ ದೇವನಿಗೂ, ಗುರುಗಳಿಗೂ ನಮಸ್ಕಾರ ಮಾಡಿದ್ದಾರೆ.
ನಾರಾಯಣನಿಗೆ ದೇವಂ ಎಂದು ಮೊದಲು ವಿಶೇಷಣವನ್ನು ನೀಡಲೂ ಕಾರಣವಿದೆ. ಭಗವಂತನು ಲೀಲಾ ರೂಪದಲ್ಲಿ ಜಗತ್ತನ್ನು ಕ್ರೀಡಾತ್ಮಕವಾಗಿ ನಡೆಸುತ್ತಿದ್ದಾನೆ ಎಂದು ವರ್ಣಿಸುತ್ತಾರೆ. ಲೀಲಾ ರೂಪವು ಆನಂದೋದ್ರೇಕದ ಲಕ್ಷಣ. ಇದರಿಂದ ಗುಣಪೂರ್ಣತ್ವವನ್ನು ಗುರುತಿಸಲಾಗುತ್ತದೆ. ಪರಿಪೂರ್ಣನಾದವನಿಗೆ ಮಾತ್ರ ಆನಂದೋದ್ರೇಕ ಸಾಧ್ಯ. ಲೀಲಾ ಎನ್ನುವುದು ಆನಂದದ ಮೂಲ. ಎಲ್ಲಿ ಗುಣಪರಿಪೂರ್ಣತೆ ಇರುತ್ತದೋ ಅಲ್ಲಿ ಆನಂದವಿರುತ್ತದೆ. ಇದೊಂದೇ ಶಬ್ದದಲ್ಲಿ ಭಗವಂತನ ಸಂಪೂರ್ಣ ಸ್ವರೂಪವನ್ನು ಸೆರೆ ಹಿಡಿಯಲು ಸಾಧ್ಯವಿದೆ ಎಂಬ ಕಾರಣಕ್ಕೆ “ದೇವಂ’ ಶಬ್ದವನ್ನು ಬಳಸಲಾಗಿದೆ.
ಸಾಮಾನ್ಯವಾಗಿ ಎಲ್ಲ ಗ್ರಂಥಗಳಲ್ಲಿ ನಾರಾಯಣ ಶಬ್ದವನ್ನು ವಿಶೇಷವಾಗಿ ಮೊದಲು ಚಿಂತನೆ ನಡೆಸುತ್ತಾರೆ. ಭಗವಂತನ ಸ್ವರೂಪವನ್ನು ಸಂಪೂರ್ಣವಾಗಿ ತಿಳಿಸುವ ನಾಮ ಇದು. ನಾರಾ ಎಂದರೆ ಗುಣ. ಗುಣಗಳಿಗೆ ಅಯನ ಎಂದು ಇದರರ್ಥ. ಭಗವಂತನ ಎರಡು ಪ್ರಧಾನ ಗುಣಗಳೆಂದರೆ ಗುಣಪರಿಪೂರ್ಣತ್ವ ಮತ್ತು ನಿರ್ದೋಷತ್ವ. ಇವೆರಡೂ ಭಗವಂತನ ಸ್ವರೂಪದರ್ಶನವನ್ನು ಮಾಡಿಸುತ್ತದೆ.
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811