Advertisement
ಪತ್ರಿಕೆಯ ಪ್ರಾರಂಭದ ಹೊತ್ತಿಗೇ ಸ್ಥಾಪಕರಾದ ಶ್ರೀಸುಗುಣೇಂದ್ರತೀರ್ಥರು ಧಾರ್ಮಿಕ, ಸಾಮಾಜಿಕ ವಿಚಾರಗಳ ಬಗೆಗೆ ಬರೆಯಲು ಆರಂಭಿಸಿದರು, ಹೀಗಾಗಿ ಸನ್ಯಾಸಾಶ್ರಮದ 50ರ ಸಂಭ್ರಮದಲ್ಲಿರುವ ಇವರ ಲೇಖನಿ ವ್ಯವಸಾಯಕ್ಕೆ 40ರ ಸಂಭ್ರಮ. ನಿರಂತರಸರಣಿಗಳೂ ಬರುತ್ತಿವೆ. ನೀಡಿದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಹೊರಬಂದಿವೆ.
(ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥರ ಕುರಿತು), “ಸುವಾಣಿ’ (ಸ್ವಾಮೀಜಿಯವರ ಉಪನ್ಯಾಸ ಸಾರಸಂಗ್ರಹ), “ಧಾರ್ಮಿಕ ಪ್ರಶ್ನೆ- ಮಾರ್ಮಿಕ ಉತ್ತರ’ (ಜಿಜ್ಞಾಸುಗಳ ಜತೆ ಪ್ರಶ್ನೋತ್ತರ), “ಸುಧಾ ಸುವಚನ’ (ಸ್ವಾಮೀಜಿಯವರ ಸಂದೇಶಗಳ ಲೇಖನಗಳು) ಇತ್ಯಾದಿ ಕೃತಿಗಳನ್ನು ಪ್ರಕಟವಾಗಿವೆ. ಗೀತಾಧ್ಯಾಯ ಭಾವಪರಿಚಯ ಮತ್ತು ರಾಮಾಯಣ ರಹಸ್ಯ ಸ್ವಾರಸ್ಯ ಕೃತಿಗಳನ್ನು ಡಾ| ಉಷಾ ಚಡಗ ಅವರು ಇಂಗ್ಲೀಷ್‌ಗೆ ಭಾಷಾಂತರಿಸಿದ್ದಾರೆ. ಒಂದೇ ಕಡೆ ಸಹೋದರ ಸಾಮಿಗಳ ವೃಂದಾವನ
Related Articles
Advertisement
ಶ್ರೀಮಧ್ವಾಚಾರ್ಯರ ತಮ್ಮ ಶ್ರೀವಿಷ್ಣುತೀರ್ಥರ ಬಳಿಕ ನಮಗೆ ಕಂಡುಬರುವುದು ಶ್ರೀವಾದಿರಾಜಸ್ವಾಮಿಗಳ ತಮ್ಮ ಶ್ರೀಸುರೋತ್ತಮತೀರ್ಥರು. ವಿಷ್ಣುತೀರ್ಥರನ್ನು ಶ್ರೀಸುಬ್ರಹ್ಮಣ್ಯ ಮಠಕ್ಕೆ ಮಧ್ವಾಚಾರ್ಯರು ನೇಮಿಸಿದ ಬಳಿಕ ಶ್ರೀಸೋದೆ ಮಠಕ್ಕೂ ಆದ್ಯ ಯತಿಗಳನ್ನಾಗಿ ನೇಮಿಸಿದರು.
ಅಧಿಪತಿಗಳಾಗಿದ್ದರು. ವಾದಿರಾಜರದು ಶಿರಸಿ ಸಮೀಪದ ಸೋಂದಾ ಮಠದಲ್ಲಿ ಮೂಲ ವೃಂದಾವನವಿದ್ದರೆ ಶ್ರೀಸುರೋತ್ತಮ ತೀರ್ಥರದು ಬಾರಕೂರಿನ ಭಂಡಾರಕೇರಿ ಮಠದಲ್ಲಿದೆ. ಉಡುಪಿ ತಾಲೂಕು ಇನ್ನಂಜೆ ಸಮೀಪದ ಉಂಡಾರಿನ ಸೋದೆಮಠದಲ್ಲಿ ಶ್ರೀವಿಶ್ವನಿಧಿತೀರ್ಥರು ಮತ್ತು ಶ್ರೀವಿಶ್ವಾಧೀಶ್ವರತೀರ್ಥರ ವೃಂದಾವನವಿದ್ದು ಇವರು ಸೋದರರು ಎಂಬ ಪ್ರತೀತಿ ಇದೆ. ಇವರು ಪರಂಪರೆಯಲ್ಲಿ ಅನುಕ್ರಮವಾಗಿ 29 ಮತ್ತು 30ನೆಯವರು.