Advertisement

Urwa Mariyamma Temple; “ಮನೆ, ಮನದಲ್ಲಿ ನಿರ್ಮಲ ಭಕ್ತಿಯಿಂದ ಸಾಕ್ಷಾತ್ಕಾರ’

11:48 PM Feb 14, 2024 | Team Udayavani |

ಮಂಗಳೂರು: ದೇವರ ಮೇಲೆ ನಿಸ್ವಾರ್ಥ ಭಕ್ತಿ ಇದ್ದಾಗ ದೇವರು ಒಲಿಯುತ್ತಾನೆ. ಇದಕ್ಕೆ ನಿರ್ಮಲ ಭಕ್ತಿ ಇರಬೇಕು. ಮನೆ-ಮನದಲ್ಲಿ ನಿರ್ಮಲ ಭಕ್ತಿಯಿಂದ ಜೀವನದಲ್ಲಿ ಸಾಕ್ಷಾತ್ಕಾರ ಪಡೆಯಲು ಸಾಧ್ಯ ಎಂದು ನರಸೀಪುರ ಅಂಬಿಗರ ಚೌಡಯ್ಯ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಭೀಷ್ಮ ಮಹಾಸ್ವಾಮಿ ಹೇಳಿದರು.

Advertisement

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ನಾಲ್ಕನೇ ದಿನವಾದ ಬುಧವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.

ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್‌ ಮಾತನಾಡಿ, ದೇವರ ಸೇವೆ ಮಾಡುವ ಮೂಲಕ ನಮ್ಮೊಳಗೆ ಚೈತನ್ಯ ಕಾಣಲು ಸಾಧ್ಯ. ಕರಾವಳಿ ಭಾಗದಲ್ಲಿ ಬೆಸೆದುಕೊಂಡಿರುವ ಎಲ್ಲ ದೇವಾಲಯದ ಮುಖೇನ ನಾವು ನಮ್ಮ ಒಗ್ಗಟ್ಟನ್ನು ಕಂಡುಕೊಳ್ಳಬೇಕಿದೆ. ಭಕ್ತ ಜನರ ನಿಸ್ವಾರ್ಥ ಸೇವೆಯ ಪರಿಣಾಮವಾಗಿ ಉರ್ವ ಸಹಿತ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಸಾಕಾರವಾಗಿದೆ ಎಂದರು.

ಉದ್ಯಮಿ ಸಂತೋಷ್‌ ಸುವರ್ಣ ಕೋಡಿಕಲ್‌, ಉಚ್ಚಿಲ ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಷ್‌ಚಂದ್ರ ಕಾಂಚನ್‌, ಉದ್ಯಮಿ ಮೋಹನ್‌ ಬೆಂಗ್ರೆ, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಗುಣಕರ್‌ ಕೆ. ಬೆಂಗಳೂರು, ಚಿಲಿಂಬಿ ಶ್ರೀ ಸಾಯಿಬಾಬ ಮಂದಿರದ ಅಧ್ಯಕ್ಷ ವಿಶ್ವಾಸ್‌ಕುಮಾರ್‌ ದಾಸ್‌, ಬಿಲ್ಲವ ಸಂಘ ಉರ್ವ ಅಧ್ಯಕ್ಷ ಬಿ. ಹರಿಪ್ರಸಾದ್‌, ಕಚ್ಚಾರು ಶ್ರೀ ಮಾಲ್ತಿàದೇವಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು, ಕನ್ನಡ ಮೊಯ್ಲಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭುಜಂಗ ಶ್ರೀಯಾನ್‌, ಕೆನರಾ ಜುವೆಲರ್ನ ಧನಂಜಯ ಪಾಲ್ಕೆ, ಕುಲಾಲ ಸಂಘ ಉರ್ವದ ಅಧ್ಯಕ್ಷ ಆನಂದ ಪಿ., ಉದ್ಯಮಿ ಪ್ರದೀಪ್‌ ಪಾಲೇಮಾರ್‌, ಪಾಲಿಕೆ ಸದಸ್ಯರಾದ ಜಗದೀಶ್‌ ಶೆಟ್ಟಿ, ಸಂಧ್ಯಾ ಆಚಾರ್‌, ಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್‌, ಅಧ್ಯಕ್ಷ ಅನಿಲ್‌ ಕುಮಾರ್‌ ಕರ್ಕೇರ ಬೊಕ್ಕಪಟ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್‌ ಕೋಡಿಕಲ್‌, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್‌ ಸುವರ್ಣ ಕುದ್ರೋಳಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಗೌತಮ್‌ ಸಾಲ್ಯಾನ್‌ ಕೋಡಿಕಲ್‌ ಉಪಸ್ಥಿತರಿದ್ದರು. ಯಶವಂತ ಬೋಳೂರು, ಅನುರಾಗ್‌ ನಿರೂಪಿಸಿದರು.

Advertisement

ಇಂದು ಬ್ರಹ್ಮಕಲಶಾಭಿಷೇಕ
ಫೆ. 15ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪ್ರಾತಃಕಾಲ 2ರಿಂದ ಸಹಸ್ರಕಲಶ ಸಹಿತ ಬ್ರಹ್ಮಕಲಶ ಪೂರಣಂ, ಗೋಪೂಜೆ, 5.15ರಿಂದ ಪಂಚಗವ್ಯ-ಪುಣ್ಯಾಹಃ- ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ಆರಂಭಗೊಳ್ಳಲಿದೆ. ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕುಂಭಾಭಿಷೇಕ, ವಿಶೇಷ ಮಂತ್ರನ್ಯಾಸಗಳು, ಪರಿವಾರ ದೇವರುಗಳಿಗೆ ವಿಶೇಷ ಕಲಶಾಭಿಷೇಕಗಳು, ವಿಶೇಷ ಸಾನ್ನಿಧ್ಯ ಪ್ರಾರ್ಥನೆ, ಮಧ್ಯಾಹ್ನ 12.30ರಿಂದ ಮಹಾಪೂಜೆ ನೆರವೇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next