Advertisement

ದಿಂಗಾಲೇಶ್ವರ ಶ್ರೀಗೆ ನಾಮಪತ್ರ ವಾಪಾಸ್ ಪಡೆದು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ: ಸಿಎಂ

02:38 PM Apr 22, 2024 | Team Udayavani |

ಶಿವಮೊಗ್ಗ: ಫಕ್ಕಿರೇಶ್ವರ ಮಠ ಜಾತ್ಯತೀತ ಮಠ. ಹೀಗಾಗಿ ಲೋಕಸಭೆಗೆ ನಾಮಪತ್ರ ಸಲ್ಲಿಸಿರುವ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ನಾಮಪತ್ರ ವಾಪಾಸು ತೆಗೆದುಕೊಂಡು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರ ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವು. ನಾವು ಮೆಮೋರೆಂಡಮ್ ಕೊಟ್ಟು 7 ತಿಂಗಳುಯಾಯ್ತು. ವರದಿ ಕೊಟ್ಟ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕಿದೆ. ಅಕ್ಟೋಬರ್ ಕೊನೆ ವಾರದಲ್ಲಿ ವರದಿ ಕೊಟ್ಟಿದ್ದೇವೆ. ರಾಜ್ಯದ ನಮ್ಮ ಖಜಾನೆಯಿಂದ ರೈತರಿಗೆ ಎರಡು ಸಾವಿರ ಪರಿಹಾರ ಕೊಟ್ಟಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಖಾಲಿ ಚೊಂಬು ಕೊಟ್ಟಿದ್ದಾರೆ: ಪ್ರಧಾನಮಂತ್ರಿ ಆಗಿ ಇಷ್ಟು ಕೆಳಮಟ್ಟಕ್ಕೆ ಮಾತನಾಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮಾತನಾಡಿದ್ದಾರೆ. ಎಲ್ಲಾ ಸಮುದಾಯಕ್ಕೆ ಅವರು ಪ್ರಧಾನಮಂತ್ರಿ. ಸಮಾನವಾಗಿ ಆಸ್ತಿ ಹಂಚಿಕೆ ಆಗಬೇಕು. ಅಧಿಕಾರ ಸಂಪತ್ತು‌ ಸಮಾನ ಹಂಚಿಕೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶದಲ್ಲಿ ಅಧಿಕಾರ ಹಂಚಿಕೆ ಆಗಬೇಕು. ಒಬ್ಬರ ಕೈಯಲ್ಲಿ ಸಂಪತ್ತು ಇರಬಾರದು. ನಿಮ್ಮ ಕೈಗೆ ಏನು ಕೊಟ್ಟರು ಅಂದರೆ ಖಾಲಿ ಚೊಂಬು‌ ಅಂತಾರೆ ಎಂದು ಹಳ್ಳಿಯಲ್ಲಿ ಗಾದೆ ಇದೆ. ಈ ದೇಶದ ಪ್ರಧಾನಿ‌ ನಮ್ಮ ಪರಿಹಾರದ ಹಣ ಕೊಡಲಿಲ್ಲ. ಕಪ್ಪು ಹಣ ತಂದು 15 ಲಕ್ಷ ಹಾಕುತ್ತೇವೆಂದರು, ಆದರೆ ಮಾಡಿದ್ರಾ? ಉದ್ಯೋಗ ಕೊಡುತ್ತೇವೆಂದರು, ಕೊಟ್ರಾ? ಖಾಲಿ ಚೊಂಬು ಚಿಪ್ಪು ಕೊಟ್ಟಿದ್ದಾರೆ ಅದಕ್ಕೆ ಜಾಹೀರಾತು ‌ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯ ಡೇಂಜರ್ ಜಾಹೀರಾತಿಗೆ ಪ್ರತಿಕ್ರಿಯೆ ನೀಡಿ, ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಟ್ಟಿದ್ದೇವೆ. ಬಸ್ ನಲ್ಲಿ ಉಚಿತ ಕರೆದುಕೊಂಡು ಹೋಗಿದ್ದೇವೆ ಇದು ಡೇಂಜರಾ? ಸಮಾಜ ಒಡೆಯುವುದು ಡೇಂಜರ್. ನಾವು ಡೇಂಜರ್ ಅಲ್ಲ ಈ ದೇಶಕ್ಕೆ ಬಿಜೆಪಿ ಡೇಂಜರ್ ಎಂದರು.

ಬಿಜೆಪಿಯಲ್ಲಿ ಯಾರು ಶ್ರೀಮಂತರಿಲ್ವಾ ಯಾರನ್ನು ಏಕೆ ರೇಡ್ ಮಾಡಲ್ಲ. ಯಡಿಯೂರಪ್ಪ, ವಿಜಯೇಂದ್ರ‌ ಭ್ರಷ್ಟಾಚಾರ ಮಾಡಿಲ್ವ? ಅಶೋಕ್, ಶೋಭಾ ಕರಂದ್ಲಾಜೆ ಭ್ರಷ್ಟಾಚಾರ ಮಾಡಿಲ್ವ. ಅವರ ಮೇಲೆ ರೇಡ್ ಮಾಡಲಿ. ನಮ್ಮವರ ಮೇಲೆಯೂ ಕಾನೂನು ಪ್ರಕಾರ ರೇಡ್ ಮಾಡಲಿ. ಯಾರು ಟ್ಯಾಕ್ಸ್‌ ಕಟ್ಟಿಲ್ಲ, ಕಾನೂನು ಪ್ರಕಾರ ಆಸ್ತಿ ಸಂಪಾದನೆ ಮಾಡಿಲ್ಲ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಈಶ್ವರಪ್ಪ ಬಗ್ಗೆ ಮಾತನಾಡಲ್ಲ, ಅವನ ಬ್ರೈನ್ ಮೆದುಳಿಗೆ ಲಿಂಕ್ ಇಲ್ಲ ಎಂದ ಅವರು, ಯಡಿಯೂರಪ್ಪ ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂದಿದ್ದರು ಏನಾಯ್ತು? ಯಡಿಯೂರಪ್ಪ ಯಾವಾಗ ಶಾಸ್ತ್ರ ಹೇಳುವುದು ಕಲಿತರು ಎಂದು ವ್ಯಂಗ್ಯವಾಡಿದರು.

ನಮ್ಮ ಕಾಲದಲ್ಲಿ ಅಪರಾಧ ಸಂಖ್ಯೆ ಕಡಿಮೆಯಾಗಿದೆ. ಬಿಜೆಪಿ ಆಡಳಿತದಲ್ಲಿ ಹೆಚ್ಚು ಕ್ರೈಮ್ ಆಗಿದೆ. ನಮ್ಮ ಕಾಲದಲ್ಲಿ 1390 ಪ್ರಕರಣ ಆಗಿದೆ. ನಮ್ಮ ಕಾಲದಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ. ತ್ವರಿತವಾಗಿ ಶಿಕ್ಷೆ ಕೊಡಬೇಕು ಅಂತ ವಿಶೇಷ ಕೋರ್ಟ್ ಗೆ ವಹಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next