Advertisement

ಶ್ರೀ ಕ್ಷೇತ್ರ ಘನ್ಸೋಲಿ ಮೂಕಾಂಬಿಕಾ ದೇವಾಲಯದ ವಾರ್ಷಿಕ ಮಹೋತ್ಸವ

03:46 PM Feb 09, 2018 | |

ನವಿ ಮುಂಬಯಿ: ಶ್ರೀ ಕ್ಷೇತ್ರ ಘನ್ಸೋಲಿ ಮೂಕಾಂಬಿಕಾ ದೇವಾಲಯದ 15ನೇ  ವಾರ್ಷಿಕ ಮಹೋತ್ಸವವು ಫೆ. 6ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಚಾಲನೆ ಗೊಂಡಿದೆ.

Advertisement

ಫೆ. 10ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯ ಕ್ರಮ ಗಳೊಂದಿಗೆ ಜರಗಲಿದೆ.

ಫೆ. 6 ರಂದು ಸಂಜೆ 6 ರಿಂದ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ರಾತ್ರಿ ಪೂಜೆ, ಫೆ. 7 ರಂದು ಬೆಳಗ್ಗೆ 7 ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ತೋರಣ ಮುಹೂರ್ತ, ಶ್ರೀ ದೇವಿಗೆ ನವಕ ಪ್ರಧಾನ ಕಲಶಾಭಿಷೇಕ, ನವಗ್ರಹಯಾಗ, ದ್ವಾದಶ ನಾಳಿಕೇರ, ಅಷ್ಟದ್ರವ್ಯ ಮಹಾ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಸಂಜೆ 5 ರಿಂದ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಉತ್ಸವ ಬಲಿ, ಅನ್ನಪ್ರಸಾದ ನಡೆಯಿತು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ವಿದ್ವಾನ್‌ ರಾಮಚಂದ್ರ ಬಾಯಾರಿ ಕಾರ್ಕಳ ಇವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಗುರು ಪ್ರಸಾದ್‌ ಭಟ್‌, ಹರೀಶ್‌ ತಂತ್ರಿ, ನಾಗರಾಜ್‌ ಭಟ್‌,  ಶಶಾಂಕ್‌ ಭಟ್‌, ಶ್ಯಾಮ್‌ ಭಟ್‌ ಮೊದಲಾದವರು ಸಹಕಾರದಲ್ಲಿ ಜರಗಿತು. 

ಕುಂಟಾಡಿ ಸುರೇಶ್‌ ಭಟ್‌ ಇವರಿಂದ ಉತ್ಸವ ಬಲಿ ನಡೆಯಿತು. ಚೆಂಡೆಯಲ್ಲಿ ತುಕರಾಮ್‌ ದೇವಾಡಿಗ ಮತ್ತು ವಾದ್ಯದಲ್ಲಿ ದಿನೇಶ್‌ ಕೋಟ್ಯಾನ್‌ ಬಳಗದವರು ಸಹಕರಿಸಿದರು.

Advertisement

ದೇವಾಲಯ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ  ಕಾರ್ಯಕ್ರಮಕ್ಕೆ   ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್‌ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ  ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಸಮಿತಿಯ ಸರ್ವ ಸದಸ್ಯರು,  ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಮಂಡಳ, ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಹಕರಿಸಿದರು. 

ಉತ್ಸವದುದ್ದಕ್ಕೂ  ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತೀ ವೈಭವದಿಂದ ನಡೆಯಲಿದ್ದು, ತುಳು-ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಫೆ. 8ರಂದು ಬೆಳಗ್ಗೆ 7ರಿಂದ ಶ್ರೀ ದೇವಿಗೆ ನವಕ ಪ್ರಧಾನ ಕಲಶಾಭಿಷೇಕ, ಗಣಪತಿ ದೇವರಿಗೆ ನವಕ ಪ್ರಧಾನ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಮಹಾಪೂಜೆ, ಅನ್ನದಾನ, ಸಂಜೆ 5 ರಿಂದ ಗಣಪತಿ ದೇವರಿಗೆ ರಂಗಪೂಜೆ, ಮಹಾಪೂಜೆ, ಉತ್ಸವ ಬಲಿ, ಅನ್ನಪ್ರಸಾದ, ಮಹಾಭೂತ ಬಲಿ, ಕವಾಟ ಬಂಧನ ಜರಗಲಿದೆ. ಫೆ. 9 ರಂದು ಸೂರ್ಯೋದಯಕ್ಕೆ ಕವಾಟ ಉದ್ಘಾಟನೆ, ತೈಲಭ್ಯಂಗ, ಪಂಚಾಮೃತ ಅಭಿಷೇಕ, ದೇವಿಗೆ 49 ಕಲಶಾಭಿಷೇಕ, ಸಹಸ್ರ ನಾಮಾರ್ಚನೆ ಪೂರ್ವಕ ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ಮಧ್ಯಾಹ್ನ 1 ರಿಂದ ಮಹಾ ಅನ್ನಸಂತರ್ಪಣೆ, ಅಪರಾಹ್ನ  4 ರಿಂದ ಭಕ್ತಿ ಪ್ರವಚನ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಯಿಂದ ಅರಸಿನ ಕುಂಕುಮ, ಸಂಜೆ 5 ರಿಂದ ಸಂಕೀರ್ತನೆ, ಮಹಾಪೂಜೆ, ಮಹಾರಂಗ ಪೂಜೆ, ಉತ್ಸವ ಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ಜಲಕದ ಬಲಿ, ಅನ್ನಪ್ರಸಾದ ಹಾಗೂ ಫೆ. 10 ರಂದು ಬೆಳಗ್ಗೆ 6 ರಿಂದ ಮಹಾಸಂಪ್ರೋಕ್ಷಣೆ,  ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಮಹಾ ಮಮಂತ್ರಾಕ್ಷತೆ, ಅನ್ನಪ್ರಸಾದ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next