Advertisement

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಅಂತರ್ಜಾಲ ಚಾನೆಲ್‌

01:35 AM Jun 18, 2020 | Sriram |

ಬೆಳ್ತಂಗಡಿ: ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯಿಂದ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಆರ್ಥಿಕ, ಸಾಮಾಜಿಕ ಹಾಗೂ ವೈಯಕ್ತಿಕ ಸಶಕ್ತೀರಣ ಹೊಂದಲು ನಿರಂತರವಾಗಿ ಅಗತ್ಯ ಮಾಹಿತಿ ಒದಗಿಸುತ್ತಾ ಬಂದಿದೆ. ಇದೀಗ ವಿನೂತನ ಪ್ರಯತ್ನದಲ್ಲಿ ತೊಡಗಿದ್ದು, ಶ್ರದ್ಧಾ ಅಮಿತ್‌ ಅವರ ಮಾರ್ಗದರ್ಶನದಲ್ಲಿ ಅಂತರ್ಜಾಲ ಚಾನೆಲ್‌ ಅನ್ನು ಮಂಗಳವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

Advertisement

ಈ ಚಾನೆಲ್‌ ಮೂಲಕ ಗ್ರಾಮೀಣ ಭಾಗದ ಮಹಿಳೆಯರ ದೈನಂದಿನ ಜೀವನಕ್ಕೆ ಪೂರಕ ಮಾಹಿತಿ ಕ್ರೋಡೀಕರಣ ಮಾಡಲಾಗುತ್ತದೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ತಮಗೆ ಉಪ ಯೋಗಕ್ಕೆ ಬರುವ ವಿಚಾರಗಳನ್ನು ತಿಳಿದು ಕೊಳ್ಳಬಹುದು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಇರುವ ಮಾಹಿತಿ ಸಂಪನ್ಮೂಲಗಳನ್ನು ಸದಸ್ಯರಿಗೆ ತಲುಪಿಸುವ ಉದ್ದೇಶವನ್ನೂ ಹೊಂದಲಾಗಿದೆ. ಚಾನೆಲ್‌ ಉದ್ಘಾಟನೆ ಸಂದರ್ಭ ಹೇಮಾವತಿ ವೀ. ಹೆಗ್ಗಡೆ, ಶ್ರದ್ಧಾ ಅಮಿತ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಏನೇನು ಇರಲಿವೆ?
ಆಪ್ತ ಸಮಾಲೋಚನೆ, ಮಕ್ಕಳ ಮಾನಸಿಕ ಬೆಳವಣಿಗೆಗಳು ಇತ್ಯಾದಿ ವಿಚಾರಗಳ ಕುರಿತು ಮಾಹಿತಿ, ಕೈ ತೋಟ ರಚನೆ, ಟೆರೆಸ್‌ ಗಾರ್ಡನ್‌, ಮನೆ ತ್ಯಾಜ್ಯಗಳಿಂದ ಗೊಬ್ಬರ ತಯಾರಿ, ಮನೆ ನಿರ್ವಹಣೆ ಕುರಿತು ಮಾಹಿತಿ, ಯೋಗಾಸನಗಳ ಕುರಿತು ಕಿರು ಚಿತ್ರ, ಕೋವೀಡ್‌-19 ಸಂದರ್ಭ ಸ್ವತ್ಛತೆ ನಿರ್ವಹಣೆ, ಅಂತರ ಕಾಯ್ದುಕೊಳ್ಳುವಿಕೆ- ಮಹತ್ವ, ಸರಕಾರಿ ಯೋಜನೆಗಳನ್ನು ಪಡೆದು ಕೊಳ್ಳುವ ಕುರಿತು ಮಾಹಿತಿ, ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಮಾಹಿತಿ, ಮಕ್ಕಳಿಗಾಗಿ ಸುಭಾಷಿತ, ಮೌಲ್ಯಾಧಾರಿತ ಕಥೆಗಳು, ಮಹಿಳೆ ಯರು ಓದಬಹುದಾದ ಪುಸ್ತಕಗಳ ಕುರಿತು ಮಾಹಿತಿ ಈ ಚಾನೆಲ್‌ನಲ್ಲಿ ಪ್ರಸ್ತುತಪಡಿಸಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next