Advertisement
ವೇದವರ್ಧನತೀರ್ಥರಿಗೆ 18 ವರ್ಷ ತುಂಬಿದೆ ಎನ್ನುವ ಘೋಷಣೆಯ 18 ಎಂದು ಬರೆಯಲಾದ ಹೂವಿನ ಫಲಕವನ್ನು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮುಟ್ಟಿ ಅಧಿಕೃತಗೊಳಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಸಂತನಂತೆ ಬದುವವನಿಗೆ ಸಂಕಟವಿರದು. ಸನ್ಯಾಸ ತ್ಯಾಗದ ಸಂಕೇತ. ಅಂತಹ ಪವಿತ್ರವಾದ ಸನ್ಯಾಸದ ಮೂಲಕ ಕೀರ್ತಿ ಪಾತ್ರರಾಗಿರಿ ಎಂದು ಹಾರೈಸಿದರು. ಶಾಸಕ ಗುರುರಾಜ ಗಂಟಿಹೊಳೆ ಅವರು, ಹಿಂದೂ ಸಮಾಜದ ರಕ್ಷಣೆ ಮತ್ತು ಮಾರ್ಗದರ್ಶನ ನೀಡುತ್ತಾ ಬಂದವರು ಸೈನಿಕರು ಮತ್ತು ಸಂತರು. ಇವರಿಬ್ಬರ ಬದುಕು ಸಮಾಜಕ್ಕೆ. ಅಂತಹ ಕಾರ್ಯ ನಡೆಯಲಿ, ತನ್ಮೂಲಕ ಲೋಕ ಕಲ್ಯಾಣವಾಗಲಿ ಎಂದು ಹಾರೈಸಿದರು.
Related Articles
Advertisement
ಪ್ರಮುಖರಾದ ಪುರುಷೋತ್ತಮ ಪಿ. ಶೆಟ್ಟಿ, ಮನೋಹರ ಎಸ್. ಶೆಟ್ಟಿ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಭುವನಾಭಿರಾಮ ಉಡುಪ, ಡಾ| ತಲ್ಲೂರು ಶಿವರಾಮ ಶೆಟ್ಟಿ, ರಂಜನ ಕಲ್ಕೂರ, ರಘುರಾಮ ಆಚಾರ್ಯ, ವೆಂಕಟರಮಣ ಮುಚ್ಚಿಂತ್ತಾಯ, ಗಿರೀಶ್ ಅಂಚನ್, ಅಮೃತಾ ಕೃಷ್ಣಮೂರ್ತಿ, ಬಾಲಕೃಷ್ಣ ಶೆಟ್ಟಿ, ಅದಮಾರು ಮಠದ ಗೋವಿಂದರಾಜ್, ಶೀರೂರು ಮಠದ ದಿವಾನರಾದ ಉದಯ ಸರಳತ್ತಾಯ ಉಪಸ್ಥಿತರಿದ್ದರು.
ವಾಸುದೇವ ರಂಗ ಭಟ್ಟರ ಸಾರಥ್ಯದಲ್ಲಿ ಪಾದುಕಾ ಪ್ರದಾನ ಮತ್ತು ಪಂಚವಟಿ ತಾಳಮದ್ದಳೆ ಪ್ರಸ್ತುತಗೊಂಡಿತು. ಶಾಸಕ ಯಶ್‌ಪಾಲ್ ಎ. ಸುವರ್ಣ ಸ್ವಾಗತಿಸಿದರು. ಹಿಂಜಾವೇ ಪ್ರಮುಖ ಶ್ರೀಕಾಂತ ಶೆಟ್ಟಿ ಪ್ರಸ್ತಾವನೆಗೈದರು. ಕಬ್ಬಿನಾಲೆ ಅಶ್ವತ್ಥ ಭಾರದ್ವಾಜ್ ನಿರೂಪಿಸಿದರು.
ಧರ್ಮದ ರಕ್ಷಣೆಗೆ ಮಠ,ಸಮಾಜ ಒಟ್ಟಾಗಬೇಕುಶ್ರೀ ವೇದವರ್ಧನತೀರ್ಥರು ಮಾತನಾಡಿ, “ಜನಸೇವೆಯೇ ಜನಾರ್ದನ ಸೇವೆ’ ಎನ್ನುವ ಧ್ಯೇಯದೊಂದಿಗೆ ಸಮಾಜ ಸೇವೆಯನ್ನೇ ಗುರಿಯನ್ನಾಗಿಸಿ ಬದುಕಬೇಕಾದ ಹೊಣೆಗಾರಿಕೆ ಸಂತರಿಗಿದೆ. ಮಧ್ವಾಚಾರ್ಯರು, ವಾದಿರಾಜರು ಇದನ್ನೇ ಸಾರಿದ್ದರು. ಈ ನೆಲೆಯಲ್ಲಿ ಮಠ ಮತ್ತು ಸಮಾಜ ಒಂದಾಗಿ ಕೆಲಸ ಮಾಡಬೇಕಾಗಿದೆ. ಭಕ್ತರಿಂದ ಬಂದ ಸಂಪತ್ತನ್ನು ದೇವರಿಗೆ ಸಮರ್ಪಿಸಿ ಮತ್ತೆ ಪ್ರಸಾದ ರೂಪವಾಗಿ ಸಮಾಜ ಸೇವಾ ಕಾರ್ಯಕ್ಕೆ ಬಳಸಬೇಕಾಗಿದೆ. ಸಜ್ಜನರಿಗೆ ಪರಮಾತ್ಮನ ದಯೆ ಇದ್ದೇ ಇರುತ್ತದೆ. ಸನಾತನ ಹಿಂದೂ ಧರ್ಮದ ಸಂರಕ್ಷಣೆಗೆ ಮಠ ಮತ್ತು ಸಮಾಜ ಒಟ್ಟಾಗಬೇಕಾಗಿದೆ ಎಂದರು. ಸಮಾಜಮುಖಿ ಕಾರ್ಯಗಳಿಗೆ ಚಾಲನೆ
ಶೀರೂರು ಮಠದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯ ನಡೆಯಲಿದೆ ಎನ್ನುವ ನೆಲೆಯಲ್ಲಿ ಸುಧಾಕರ ಅವರಿಗೆ ಮನೆ ಕಟ್ಟಲು ಅನುಕೂಲವಾಗುವಂತೆ 50 ಸಾವಿರ ರೂ. ಸಹಾಯ ಧನದ ಚೆಕ್ ಅನ್ನು ಶೀರೂರು ಶ್ರೀಪಾದರು ನೀಡಿ ಹರಸಿದರು.