Advertisement
ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವ ಸಮಿತಿ ಹಾಗೂ ಜಿಲ್ಲಾಡಳಿತದ ನಡುವೆ ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಸಮಿತಿಯಿಂದ ರಥಬೀದಿ, ರಾಜಾಂಗಣ, ಶ್ರೀಕಷ್ಣ ಮಠದ ಒಳಗಡೆ ಹೀಗೆ ಸುತ್ತಲೂ ಕೊರೊನಾ ಮುನ್ನೆಚ್ಚರಿಕೆಗೆ ಸಂಬಂಧಿಸಿದ ಸೂಚನ ಫಲಕಗಳನ್ನು ಅಳ ವಡಿಸಲಾಗಿದೆ. ಇದರ ಆಧಾರ ದಲ್ಲಿಯೇ ಸಾರ್ವಜನಿಕರು, ಭಕ್ತರು ನಿಯಮಗಳನ್ನು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದಲೇ ಪಾಲಿಸ ಬೇಕು. 2 ಡೋಸ್ ಹಾಕಿ ಕೊಂಡವರು ಮಾತ್ರ ಉತ್ಸವಕ್ಕೆ ಬರಬೇಕು. ಜ್ವರ, ಶೀತ, ಕೆಮ್ಮು ಮೊದಲಾದ ರೋಗ ಲಕ್ಷಣ ಇರುವವರು ಬರು ವುದು ಬೇಡ ಎಂದು ಸಮಿತಿ ಈಗಾಗಲೇ ಮನವಿ ಮಾಡಿ ಕೊಂಡಿದೆ. ಅದರಂತೆ ಸಾರ್ವಜನಿಕರು ಅನುಸರಿ ಸುವುದು ಅತಿಮುಖ್ಯವಾಗಿದೆ.
ರಥಬೀದಿಯಲ್ಲಿ ಕೊರೊನಾ ಲಸಿಕೆ ಕೇಂದ್ರ ಮತ್ತು ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯಲಾಗಿದೆ. ಮಠಕ್ಕೆ ಬರುವವರು ಲಸಿಕೆ ಪಡೆಯಲು ಅನುಕೂಲ ಆಗುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಈ ವ್ಯವಸ್ಥೆ ಮಾಡ ಲಾಗಿದೆ. ಜತೆಗೆ ತುರ್ತು ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್ ಸಿದ್ಧಪಡಿಸಿಕೊಳ್ಳಲಾಗಿದೆ. ಸರಳ ಪರ್ಯಾಯಕ್ಕೆ ಸಮಿತಿ ಮನವಿ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಸೋಮವಾರ ರಾತ್ರಿ, ಮಂಗಳವಾರ ಬೆಳಗ್ಗೆ ನಡೆಯುವ ಪರ್ಯಾಯ ಪೀಠಾರೋಹಣ ಕಾರ್ಯಕ್ರಮವನ್ನು ಕೊರೊನಾ ಸೋಂಕಿನ ಕಾರಣದಿಂದ ಸರಳ ರೀತಿಯಲ್ಲಿ ಆಚರಿಸಲು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಶಯದಂತೆ ಉತ್ಸವ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
Related Articles
Advertisement
ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ನೇರ ಪ್ರಸಾರದಲ್ಲಿ ವೀಕ್ಷಿಸಬೇಕು. ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ನೂಕುನುಗ್ಗಲು ಮಾಡಬಾರದು. ಪಾಲ್ಗೊಳ್ಳು ವವರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸಮಿತಿ ವಿನಂತಿಸಿದೆ.
ಪರ್ಯಾಯೋತ್ಸವ ಸಮಿತಿಯ ಜತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಸರಳ ರೀತಿಯಲ್ಲಿ ಉತ್ಸವ ನಡೆಯಲಿದೆ. ತಪಾಸಣೆಗೆ ಹೆಚ್ಚುವರಿ ಸಿಬಂದಿ ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಮುನ್ನೆಚ್ಚರಿಕೆ ವಿಚಾರವಾಗಿ ಸಮಿತಿಯೇ ಎಲ್ಲವನ್ನೂ ನೋಡಿಕೊಳ್ಳಲಿದೆ.– ಕೂರ್ಮಾರಾವ್ ಎಂ.,
ಜಿಲ್ಲಾಧಿಕಾರಿ ಉಡುಪಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಂಡಿದ್ದೇವೆ. ಮಠದ ಸುತ್ತಲೂ ಕೊರೊನಾ ನಿಯಮ ಪಾಲನೆಯ ಸೂಚನ ಫಲಕ ಗಳನ್ನು ಅಳವಡಿಸಿದ್ದೇವೆ. ಎರಡು ಲಸಿಕೆ ಪಡೆ ದವರಿಗೆ ಮಾತ್ರ ಪ್ರವೇಶ ಎಂಬ ಸಂದೇಶವನ್ನು ನೀಡಿದ್ದೇವೆ.
– ವಿಷ್ಣು ಪ್ರಸಾದ್ ಪಾಡಿಗಾರ್,
ಪ್ರಧಾನ ಕಾರ್ಯದರ್ಶಿ,
ಶ್ರೀಕೃಷ್ಣ ಪರ್ಯಾಯೋತ್ಸವ ಸಮಿತಿ