ರಾಮನಗರ: ಪ್ರಸಿದ್ಧ ಶಕ್ತಿದೇವತೆ ಕಬ್ಟಾಳಮ್ಮ ಜಿಲ್ಲೆಯ ಶ್ರೀಮಂತ ದೇವತೆ ಎನಿಸಿದ್ದು, ಕಬ್ಟಾಳಮ್ಮನ ಖಜಾ ನೆಯ ಸಂಪತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜಿಲ್ಲೆ ಯ ಇತರ ಎ ದರ್ಜೆ ಮುಜರಾಯಿ ದೇಗುಲಗಳಿಗೆ ಹೋಲಿಕೆ ಮಾಡಿದರೆ ಕಬ್ಟಾಳಮ್ಮನೇ ಟಾಫ್.
ಹೌದು.., ಮುಜರಾಯಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಮ ನಗರ ಜಿಲ್ಲೆಯ 7 ದೇವಾ ಲಯಗಳನ್ನು ಎ ದರ್ಜೆ ದೇವಾಲಯ ಎಂತಲೂ, 5 ದೇವಾಲಯಗಳನ್ನು ಬಿ ದರ್ಜೆ ದೇವಾ ಲಯಗಳು ಎಂತ ಲೂ ವಾರ್ಷಿಕ ಆದಾ ಯದ ಮೇಲೆ ಘೋಷಣೆ ಮಾಡ ಲಾಗಿದೆ. ಜಿಲ್ಲೆಯ ಅಷ್ಟೂ ಎ ದರ್ಜೆ ದೇವಾ ಲಯಗಳ ಪೈಕಿ ಕಬ್ಟಾಳ ಮ್ಮನ ಆದಾಯವೇ ಅತಿಹೆಚ್ಚು.
5.63 ಕೋಟಿ ರೂ. ಆದಾಯ: 2022-23ನೇ ಸಾಲಿ ನಲ್ಲಿ ಕಬ್ಟಾಳಮ್ಮ ದೇವಾ ಲಯದ ಆದಾಯ 5.23 ಕೋಟಿ ರೂ. ತಲುಪಿದ್ದು ಇದು ಇದುವರೆಗೆ ದೊರೆತಿರುವ ಆದಾಯ ದಲ್ಲೇ ಅತಿ ಹೆಚ್ಚಿನ ಆದಾಯವೆನಿಸಿದೆ. ಕೇವಲ ಸುತ್ತ ಮುತ್ತಲ ಜಿಲ್ಲೆಗಳು ಮಾತ್ರವಲ್ಲದೆ ದಕ್ಷಿಣ ಭಾರತದ ಹಲವು ಭಾಗಗಳಿಂದ ಕಬ್ಟಾಳಮ್ಮ ದೇವಿಯ ದರ್ಶನ ಕ್ಕಾಗಿ ಭಕ್ತರು ಆಗಮಿಸು ತ್ತಾರೆ. ಸಾಧಾರಣ ದಿನಗಳಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಆಗಮಿಸುತ್ತಿದ್ದು, ಮಂಗಳವಾರ, ಭಾನುವಾರ ಮತ್ತು ಅಮಾವಾಸ್ಯೆ ಹಾಗೂ ಪೌರ್ಣ ಮಿಯ ದಿನದಂದು ಕಬ್ಟಾಳಮ್ಮನ ದೇÊ ಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಸಾಕಷ್ಟಿ ರುತ್ತದೆ. ಕೆಲ ವಿಶೇಷ ಸಂದರ್ಭದಲ್ಲಿ 50 ಸಾವಿರದಷ್ಟು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಗೆ ಪೂಜೆ ಹರಕೆ ಸಲ್ಲಿಸುವುದು ವಾಡಿಕೆ. ಹೀಗಾಗಿ ದೇವಿಯ ಖಜಾನೆಗೆ ಹರಿದು ಬರುವ ಆದಾಯವೂ ಹೆಚ್ಚುತ್ತಿದೆ. ಕೋವಿಡ್‌ಗಿಂತ ಮೊದಲು ವಾರ್ಷಿಕ ಆದಾಯ 3.50 ಕೋಟಿ ರೂ. ಇತ್ತು. ಇದೀಗ ಒಮ್ಮೆಲೆ 5.63 ಕೋಟಿ ರೂ.ಗೆ ಜಿಗಿದಿದ್ದು, ಈ ಸಾಲಿನಲ್ಲಿ ಇನ್ನೂ ಹೆಚ್ಚಾ ಗಲಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಕೆಂಗಲ್ ಆಂಜನೇಯನೂ ಕೋಟ್ಯಧಿಪತಿ: ಕಬ್ಟಾಳ ಮ್ಮನನ್ನು ಹೊರತು ಪಡಿಸಿದರೆ ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿ ಕೋಟಿ ಆದಾಯ ಗಳಿಸಿರುವ ದೇವರು. ವ್ಯಾಸತೀರ್ಥರಿಂದ ಪ್ರತಿಷ್ಠಾಪ ನೆಗೊಂಡಿ ರುವ ಕೆಂಗಲ್ ಆಂಜನೇಯಸ್ವಾಮಿ ದೇವಾ ಲಯಕ್ಕೆ ಅಪಾರ ಭಕ್ತರಿದ್ದು, ಮಾಜಿ ಸಿಎಂ ಕೆಂಗಲ್ ಹನು ಮಂತಯ್ಯ ಅವರ ಕುಲದೇವತೆ ಯಾಗಿರುವ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಆದಾಯ 2022-23ನೇ ಸಾಲಿನಲ್ಲಿ 1.17 ಕೋಟಿ ರೂ. ಆಗಿದೆ.
ಮಾಗಡಿ ರಂಗನಾಥನ ಆದಾಯ 90 ಲಕ್ಷರೂ.: ಜಿಲ್ಲೆಯ ಪ್ರಸಿದ್ಧ ದೇವಾಲಯ ಎನಿಸಿರುವ ಮಾಗಡಿ ರಂಗನಾಥಸ್ವಾಮಿ ದೇವಾಲಯಕ್ಕೆ 90.31 ಲಕ್ಷರೂ. ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಅಪ್ರಮೇಯಸ್ವಾಮಿ ದೇವಾಲಯಕ್ಕೆ 62.53 ಲಕ್ಷರೂ., ಸಾವನದುರ್ಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ87.69 ಲಕ್ಷ ರೂ., ರಾಮನಗರದ ರೇವಣ್ಣ ಸಿದ್ದೇಶ್ವರ ಬೆಟ್ಟ(ಎಸ್‌ಆರ್‌ಎಸ್ ಬೆಟ್ಟ) 49.25 ಲಕ್ಷ ರೂ. ಆದಾಯವನ್ನು 2022-23ನೇ ಸಾಲಿನಲ್ಲಿ ಗಳಿಸಿವೆ.
ಸಂಪತ್ತಿನಲ್ಲೂ ಚಿಕ್ಕದಾದ ಕಲ್ಲಹಳ್ಳಿ ಚಿಕ್ಕತಿರುಪತಿ: ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಶ್ರೀವೆಂಕಟೇಶ್ವರ ದೇವಾಲಯವನ್ನು ಚಿಕ್ಕತಿರುಪತಿ ಎಂದು ಈಭಾಗದಲ್ಲಿ ಕರೆಯಲಾಗುತ್ತದೆ. ಈ ಹಿಂದೆ 25 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಗಳಿ ಸುವ ಮೂಲಕ ಎ ದರ್ಜೆ ದೇವಾಲಯ ಎನಿಸಿಕೊಂಡಿದ್ದ ಕಲ್ಲಹಳ್ಳಿ ಶ್ರೀವೆಂಕಟೇಶ್ವರ ದೇವಾ ಲಯಕ್ಕೆ 2022-23ನೇ ಸಾಲಿನಲ್ಲಿ ಆದಾಯ ಕುಸಿದಿದ್ದು ಕೇವಲ 14.95 ಲಕ್ಷ ರೂ. ಆದಾಯ ಬಂದಿದೆ.
-ಸು.ನಾ.ನಂದಕುಮಾರ್