Advertisement
ಅ.26 ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಉಪಸಮಿತಿ ಅಸೋಸಿ ಯೇಶನ್‌ನ ಸ್ಥಳೀಯ ಸಮಿತಿಗಳಿಗೆ ಆಯೋಜಿಸಿರುವ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾ ಧ್ಯಕ್ಷ ಶಂಕರ ಡಿ. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತ ನಾಡಿ, ನಾಟಕದ ಎಲ್ಲಾ ದಿನಗಳಲ್ಲೂ ಈ ಸಭಾಗೃಹದ ತುಂಬಿ ತುಳುಕಲಿದೆ. ಆದ್ದರಿಂದ ನಾವು ಬಿಲ್ಲವರು ಅತಿಥಿ-ಬಂಧುಗಳಿಗೆ ಸ್ಥಳಾವಕಾಶ ಕೊಡ ಬೇಕು. ಆ ಮೂಲಕ ನಾವು ಶಿಸ್ತಿಗೆ ಪ್ರೇರಕರಾಗಬೇಕು.
ಗೌರವ ಅತಿಥಿಯಾಗಿ ಪಾಲ್ಗೊಂಡ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಮಹಾನಗರದಲ್ಲಿನ ಸಂಘ-ಸಂಸ್ಥೆಗಳಲ್ಲಿ ನಾಯಕತ್ವ, ಸಾಂಘಿಕ ಶಕ್ತಿ ಮತ್ತು ಒಳ್ಳೆ ಜನರ ಒಗ್ಗೂಡುವಿಕೆಯೇ ಬಿಲ್ಲವರ ಅಸೋಸಿಯೇಶನ್‌ನ ಆಸ್ತಿಯಾಗಿದೆ. ಕಲೆ-ಸಂಸ್ಕೃತಿಯನ್ನು ಸದಾ ಎತ್ತಿ ಹಿಡಿದ ಸಂಸ್ಥೆ. ನಾಟಕದಿಂದ ಸಂಸ್ಕೃತಿಯ ಮೂಲ ತಿಳಿಯುತ್ತದೆ. ಆದ್ದರಿಂದ ಬಿಲ್ಲವರು ಭವಿಷ್ಯತ್ತಿನಲಿ ವ್ಯಾಪ್ತಿ ಮೀರಿ ಎಲ್ಲಾ ಕಲಾವಿದರಿಗೆ ಸ್ಪರ್ಧೆಯನ್ನು ನಡೆಸಿ, ಕಲಾವಿದರಿಗೂ ಒಂದೇ ಜಾತಿ ಎನ್ನುವುದನ್ನು ಸಾರಲಿ ಎಂದು ನುಡಿದರು. ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಎಲ್. ವಿ. ಅಮೀನ್ ಮತ್ತು ಗಂಗಾಧರ್ ಜೆ. ಪೂಜಾರಿ, ಸಮಾಜ ಸೇವಕ, ಉದ್ಯಮಿಗಳಾದ ರಾಮಚಂದ್ರ ಎಂ. ಗಾಣಿಗ, ಸುರೇಶ್ ಆರ್. ಕಾಂಚನ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಣ್ಯರು ರಂಗಕರ್ಮಿಗಳಾದ ಲಕ್ಷ್ಮಣ ಕಾಂಚನ್, ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಅಶೋಕ್‌ಕುಮಾರ್ ಕೊಡ್ಯಡ್ಕ ಅವರಿಗೆ ವೀಳ್ಯದೆಲೆ, ಅಡಿಕೆ, ಹಿಂಗಾರ, ಶ್ರೀಫಲ, ಸ್ಮರಣಿಕೆ, ಸಮ್ಮಾನ ಪತ್ರ, ಫಲಪುಷ್ಪಗಳನ್ನಿತ್ತು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, “ರಂಗ ಗೌರವ’ ಪ್ರದಾನಿಸಿ ಅಭಿನಂದಿಸಿ ಶುಭಹಾರೈಸಿದರು.
Related Articles
ಅಸೋಸಿಯೇಶನ್‌ನ ಪದಾಧಿಕಾರಿಗಳು ಉಪಸ್ಥಿತ ಪ್ರಾಯೋಜಕರು, ನಾಟಕಕಾರರು, ನಿರ್ದೇಶಕರು, ಕಲಾವಿದರನ್ನು ಗೌರವಿಸಿದರು. ಪದ್ಮನಾಭ ಸಸಿಹಿತ್ಲು ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಹರೀಶ್ ಜಿ. ಅಮೀನ್, ಶ್ರೀನಿವಾಸ ಆರ್. ಕರ್ಕೇರ, ಸಾಂಸ್ಕೃತಿಕ ಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಅತಿಥಿಗಳನ್ನು ಗೌರವಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Advertisement
ಪ್ರಥಮ ದಿನ ಎನ್. ಎಂ. ಸನಿಲ್, ಉಮೇಶ್ ಪೂಜಾರಿ ಕೊಪ್ಪ ಮತ್ತು ತೋನ್ಸೆ ಸಂಜೀವ ಪೂಜಾರಿ ಪ್ರಾಯೋಜಕತ್ವದಲ್ಲಿ ಚೆಂಬೂರು ಸ್ಥಳೀಯ ಸಮಿತಿಯಿಂದ ರವಿ ಕುಮಾರ್ ಕಡೆಕಾರ್ ಕಥೆ, ಸಂಭಾಷಣೆಯ, ಸತೀಶ್ ಎರ್ಮಾಳ್ ನಿರ್ದೇಶಿಸಿದ “ಕನಕನ ಕನ’, ಸ್ವರ್ಗಿàಯ ಎಂ. ಅಪ್ಪಣ್ಣ ಪರಿವಾರ, ಕೃಷ್ಣ ಎಂ. ಪೂಜಾರಿ ನೆರೂಲ್ ಮತ್ತು ಜಗದೀಶ್ ಸಿ. ಕೌಡೂರು ಪ್ರಾಯೋಜಕತ್ವದಲ್ಲಿ ನವಿಮುಂಬಯಿ ಸ್ಥಳೀಯ ಸಮಿತಿಯಿಂದ ಪ್ರಕಾಶ್ ಧರ್ಮನಗರ ರಚಿಸಿ, ಸತೀಶ್ ಎರ್ಮಾಳ್ ಸಂಭಾಷಣೆಗೈದು, ಅನಿಲ್‌ಕುಮಾರ್ ಹೆಗ್ಡೆ ನಿರ್ದೇಶಿಸಿದ “ಏರೆಗ್ಲಾ ಪನೊಡಿc’, ಜಗನ್ನಾಥ್ ವಿ. ಕೋಟ್ಯಾನ್, ರಾಮ ಜಿ. ಸುವರ್ಣ ಮತ್ತು ಗಂಗಾಧರ್ ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ಗೋರೆಗಾಂವ್ ಸ್ಥಳೀಯ ಸಮಿತಿಯಿಂದ ಸಮೀರ್ ಪೆಣRರ್ ರಚನೆಯ, ಲತೇಶ್ ಪೂಜಾರಿ ಸಂಭಾಷಣೆ, ನಿರ್ದೇಶನದ “ಈದಿ’ ನಾಟಕಗಳು ಪ್ರದರ್ಶನಗೊಂಡಿತು.
ಬಿಲ್ಲವ ಸಮಾಜವು ಎಂದಿಗೂ ಜಾತಿಭೇದವಿಲ್ಲದೆ ಪ್ರತಿಭಾನ್ವೇಷಣೆ ಮಾಡುತ್ತಿದೆ. ಎಲ್ಲಾ ವರ್ಗದ ಪ್ರತಿಭೆಗಳಿಗೆ ಅವಕಾಶ ಒದಗಿಸಿ ಪ್ರಕಾಶಿಸುವಂತಿದೆ. ಇದರ ಶ್ರೇಯಸ್ಸು ಕಲಾಭಿಮಾನಿಗಳಿಗೆ ಸಲ್ಲುತ್ತದೆ. ಜಾತಿಭೇದ ಸಲ್ಲದು ಎನ್ನುವ ಗುರುನಾರಾಯಣರ ಸಂದೇಶಕ್ಕೆ ಈ ಸಂಸ್ಥೆ ಬದ್ಧವಾಗಿ ಮುನ್ನಡೆಯುತ್ತಿದೆ.– ಎಲ್. ವಿ. ಅಮೀನ್, ನಿರ್ದೇಶಕರು : ಭಾರತ್ ಬ್ಯಾಂಕ್ ಮುಂಬಯಿ ಬಿಲ್ಲವರ ಈ ಸಂಸ್ಥೆ ಎಲ್ಲಾ ಸಮುದಾಯ, ಸಮಾಜಕ್ಕೂ ಮಾದರಿಯಾಗಿ ನಿಂತಿದೆ. ಎಲ್ಲಾ ಸಮಾಜ ದವರನ್ನೂ ಪ್ರೇರೇಪಿಸುತ್ತಾ ಬಂಧುಗಳನ್ನಾಗಿ ಬೆಸೆಯುತ್ತಿದ್ದಾರೆ. ನಾಟಕೋತ್ಸವ ಮೂಲಕ ಸಮಾಜ, ಕಲಾವಿದರು, ಕಲಾಭಿಮಾನಿಗಳಿಗೆ ಪ್ರೋತ್ಸಾಹ ನೀಡಿ ಸರ್ವರನ್ನೂ ಒಗ್ಗೂಡಿಸುತ್ತಿರುವುದು ಸ್ತುತ್ಯರ್ಹ.
– ಸುರೇಶ್ ಕಾಂಚನ್, ಉದ್ಯಮಿ, ಸಮಾಜ ಸೇವಕರು ಬಿಲ್ಲವರದ್ದು ಮತ್ತು ನಮ್ಮ ದೋಸ್ತಿ ಬಹು ಹಳೆಯದ್ದು. ಆದುದರಿಂದ ನಮ್ಮಲ್ಲಿನ ಮಾನವೀಯತೆಯೇ ದೊಡ್ಡದು. ಅವರ ಪ್ರೋತ್ಸಾಹಕ್ಕೆ ನಾನು ಪ್ರಭಾವಿತನಾ ಗಿದ್ದೇನೆ. ನನ್ನ ಅಣ್ಣ ಸ್ವರ್ಗೀಯ ಆನಂದ ಗಾಣಿಗರೂ ರಾಜ್ಯೋತ್ಸವ ಪುರಸ್ಕೃತ ನಾಟಕ ಕಲಾವಿದ. ನನ್ನ ಪರಿವಾರವೇ ರಂಗಭೂಮಿಯ ಹಿನ್ನೆಲೆಯಿಂದ ಬಂದಿದೆ.
– ರಾಮಚಂದ್ರ ಗಾಣಿಗ , ಉದ್ಯಮಿ, ಸಮಾಜ ಸೇವಕರು ಚಿತ್ರ-ವರದಿ:ರೋನ್ಸ್ ಬಂಟ್ವಾಳ್