ನಿರ್ಮಾಪಕಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ಹೊಸ ಚಿತ್ರಕ್ಕೆ “ರಾಣ’ ಎಂದು ಟೈಟಲ್ ಇಡಲಾಗಿದೆ. ಜುಲೈ1ರಂದು “ರಾಣ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಪರಿಚಯಿಸಿದೆ.
“ಪೊಗರು’ ಚಿತ್ರದ ಬಳಿಕ ನಂದಕಿಶೋರ್, “ರಾಣ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಚಿತ್ರದಲ್ಲಿ ನಾಯಕ ಶ್ರೇಯಸ್‌ಗೆ ಜೋಡಿಯಾಗಿ ರೇಶ್ಮಾ ನಾಣಯ್ಯ ತೆರೆ ಹಂಚಿಕೊಳ್ಳುತ್ತಿದ್ದಾರೆ. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರ ಹೊಂದಿರುವ “ರಾಣ’ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ರೆಡಿಯಾಗಿರುವ ಸಿನಿಮಾಗಳು ರಿಲೀಸ್ ಆಗಲಿ, ನಂತರ ಚಿತ್ರೀಕರಣ..: ದರ್ಶನ್ Exclusive ಮಾತುಕತೆ
“ರಾಣ’ ಚಿತ್ರದ ಹಾಡುಗಳಿಗೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನವಿದೆ. ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ.
ಅಂದಹಾಗೆ, ಈಗಾಗಲೇ “ರಾಣ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಜುಲೈ7ರಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ತಿಂಗಳಾಂತ್ಯಕ್ಕೆ “ರಾಣ’ ಚಿತ್ರೀಕರಣ ಪ್ರಾರಂಭಿಸುವ ಯೋಚನೆಯಲ್ಲಿದೆ ಚಿತ್ರತಂಡ.
ಅಂದಹಾಗೆ, ಈ ಹಿಂದೆ “ರಾಣ’ ಟೈಟಲ್ ನಡಿ ಯಶ್ ಸಿನಿಮಾ ಮಾಡಲಿದ್ದಾರೆಂಬ ಸುದ್ದಿ ಹರಿದಾಡಿತ್ತು.