Advertisement

ಫೀಲ್ಡಿಂಗ್‌ ವೇಳೆ ಭುಜಕ್ಕೆ ಪೆಟ್ಟು : ಸರಣಿಯಿಂದ ಹೊರಬಿದ್ದ ಶ್ರೇಯಸ್‌ ಅಯ್ಯರ್‌

10:25 PM Mar 24, 2021 | Team Udayavani |

ಪುಣೆ : ಮೊದಲ ಏಕದಿನ ಪಂದ್ಯದ ಫೀಲ್ಡಿಂಗ್‌ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡ ಭಾರತದ ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಜತೆಗೆ ಐಪಿಎಲ್‌ ಪಂದ್ಯಾವಳಿಯಲ್ಲೂ ಆಡು ವು ದಿಲ್ಲ ಎಂದು ಬಿಸಿ ಸಿಐ ಮೊದಲ ಹಂತದ ಪಂದ್ಯಗಳಲ್ಲಿ ಆಡುವುದೂ ಅನುಮಾನ ಎನ್ನಲಾಗಿದೆ.

Advertisement

ಇಂಗ್ಲೆಂಡ್‌ ಚೇಸಿಂಗ್‌ ವೇಳೆ ಜಾನಿ ಬೇರ್‌ಸ್ಟೊ ಬಾರಿಸಿದ ಹೊಡೆತವೊಂದನ್ನು ತಡೆಯುವ ಯತ್ನದಲ್ಲಿದ್ದಾಗ ಅಯ್ಯರ್‌ ಅವರ ಎಡ ಭುಜಕ್ಕೆ ಗಂಭೀರ ಏಟು ಬಿದ್ದಿತ್ತು. ಅನಂತರ ಅವರು ಅಂಗಳಕ್ಕೆ ಇಳಿಯಲಿಲ್ಲ.
“ಶ್ರೇಯಸ್‌ ಅಯ್ಯರ್‌ ಭುಜದ ಮೂಳೆಗೆ ಏಟು ಬಿದ್ದಿದೆ. ಕೀಲು ತುಸು ಜಾರಿದೆ. ಚೇತರಿಕೆಗೆ ಎರಡರಿಂದ ಮೂರು ವಾರ ಬೇಕಾಗುತ್ತದೆ. ಅಕಸ್ಮಾತ್‌ ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯ ಬಿದ್ದರೆ ಆಗ ಅಯ್ಯರ್‌ ಎರಡು ತಿಂಗಳು ವಿಶ್ರಾಂತಿಯಲ್ಲಿ ಇರಬೇಕಾಗುತ್ತದೆ’ ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್‌ನಲ್ಲಿ ಅಯ್ಯರ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಾಗಿದ್ದಾರೆ. ಕಳೆದ ಐಪಿಎಲ್‌ನಲ್ಲಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ ಹೆಗ್ಗಳಿಕೆ ಅಯ್ಯರ್‌ ಅವರದಾಗಿತ್ತು. ಅಯ್ಯರ್‌ ಗೈರಲ್ಲಿ ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌ ಅಥವಾ ಸ್ಟೀವನ್‌ ಸ್ಮಿತ್‌ ಡೆಲ್ಲಿ ತಂಡದ ನೇತೃತ್ವ ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ :ಕೋವಿಡ್ 2ನೇ ಅಲೆ ಹಿನ್ನೆಲೆ : ಹೋಳಿ ಆಚರಣೆ ನಿಷೇಧಿಸಿ ವಿಜಯಪುರ ಜಿಲ್ಲಾಧಿಕಾರಿ ಆದೇಶ

ಸೂರ್ಯಕುಮಾರ್‌ಗೆ ಅವಕಾಶ
ಶ್ರೇಯಸ್‌ ಅಯ್ಯರ್‌ ಅನು ಪಸ್ಥಿತಿಯಲ್ಲಿ ಸೂರ್ಯಕುಮಾರ್‌ ಯಾದವ್‌ ದ್ವಿತೀಯ ಪಂದ್ಯದಲ್ಲಿ ಏಕದಿನ ಪದಾರ್ಪಣೆ ಮಾಡುವುದು ಖಚಿತ. ರಿಷಭ್‌ ಪಂತ್‌ ಕೂಡ ರೇಸ್‌ನಲ್ಲಿದ್ದಾರೆ.

Advertisement

ಈ ಮಧ್ಯೆ ರೋಹಿತ್‌ ಶರ್ಮ ಕೂಡ ಫಿಟ್‌ನೆಸ್‌ ಸಮಸ್ಯೆಗೆ ಸಿಲುಕಿದ್ದು, ಶುಕ್ರವಾರದ ಎರಡನೇ ಮುಖಾಮುಖೀಯಲ್ಲಿ ಆಡು ವುದು ಖಾತ್ರಿಯಾಗಿಲ್ಲ. ಆಗ ಸೂರ್ಯಕುಮಾರ್‌ ಮತ್ತು ಪಂತ್‌ ಮಿಡ್ಲ್ ಆರ್ಡರ್‌ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಶಿಖರ್‌ ಧವನ್‌ ಜತೆ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next