Advertisement

ಡೆಲ್ಲಿ ಕೋಟೆಯಲ್ಲಿ ಇಂಡೋ-ಆಸೀಸ್ ಕಾಳಗ; ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್

09:08 AM Feb 17, 2023 | Team Udayavani |

ಹೊಸದಿಲ್ಲಿ: ಬಾರ್ಡರ್- ಗಾವಸ್ಕರ್ ಟ್ರೋಫಿ ಕೂಟದ ಎರಡನೇ ಟೆಸ್ಟ್ ಪಂದ್ಯಕ್ಕೆ ಹೊಸದಿಲ್ಲಿ ಸಜ್ಜಾಗಿದೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸುತ್ತಿದೆ. ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸದ್ದಾರೆ.

Advertisement

ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗುಣಮುಖರಾಗಿರುವ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದು, ಅವರಿಗಾಗಿ ಸೂರ್ಯ ಕುಮಾರ್ ಯಾದವ್ ಜಾಗ ಮಾಡಿಕೊಟ್ಟಿದ್ದಾರೆ.

ಆಸೀಸ್ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದು, ರೆನ್ಶಾ ಬದಲಿಗೆ ಟ್ರಾವಿಸ್ ಹೆಡ್ ಮತ್ತು ಬೊಲ್ಯಾಂಡ್ ಬದಲಿಗೆ ಮ್ಯಾಥ್ಯೂ ಕುಹ್ನೆಮನ್ ಸ್ಥಾನ ಪಡೆದಿದ್ದಾರೆ.

ಭಾರತದ “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಆಸ್ಟ್ರೇಲಿಯ ಎದುರಿನ ಹೊಸದಿಲ್ಲಿ ಪಂದ್ಯದ ವೇಳೆ ನೂತನ ಮೈಲುಗಲ್ಲೊಂದನ್ನು ನೆಡುತ್ತಿದ್ದಾರೆ. ಅವರು ತಮ್ಮ ಟೆಸ್ಟ್‌ ಬಾಳ್ವೆಯ 100ನೇ ಪಂದ್ಯವಾಡಲು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ “ಟೆಸ್ಟ್‌ ಶತಕ’ದ ಸಂಭ್ರಮ ಆಚರಿಸಿದ ಭಾರತದ 13ನೇ ಕ್ರಿಕೆಟಿಗನಾಗಲಿದ್ದಾರೆ. ಕಾಕತಾಳೀಯವೆಂದರೆ, ಚೇತೇಶ್ವರ್‌ ಪೂಜಾರ ಆಸ್ಟ್ರೇಲಿಯ ವಿರುದ್ಧವೇ ಮೊದಲ ಟೆಸ್ಟ್‌ ಆಡಿದ್ದರು. ಅದು 2010ರ ಸರಣಿಯ ಬೆಂಗಳೂರು ಪಂದ್ಯವಾಗಿತ್ತು.

ಸ್ಪಿನ್ನರ್ ಪದಾರ್ಪಣೆ: ಆಸ್ಟ್ರೇಲಿಯಾ ತಂಡದಲ್ಲಿ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಅವರು ಪದಾರ್ಪಣೆ ಮಾಡಿದ್ದಾರೆ. ಮಾರ್ನರ್ ಲಬುಶೇನ್ ಅವರು ಕುಹ್ನೆಮನ್ ಗೆ ಬ್ಯಾಗಿ ಗ್ರೀನ್ ಕ್ಯಾಪ್ ನೀಡಿದರು.

Advertisement

ಭಾರತ ಮತ್ತು ಆಸ್ಟ್ರೇಲಿಯ ಈ ಹಿಂದೆ 2013ರಲ್ಲಿ ಹೊಸದಿಲ್ಲಿಯಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿತ್ತು. ಧೋನಿ ನೇತೃತ್ವದ ಭಾರತೀಯ ತಂಡವು ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಜಯಿಸಿತ್ತು. ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅಮೋಘ ನಿರ್ವಹಣೆ ನೀಡಿದ್ದು 14 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದರು.

ತಂಡಗಳು

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾ), ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್

ಭಾರತ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿ.ಕೀ), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

 

Advertisement

Udayavani is now on Telegram. Click here to join our channel and stay updated with the latest news.

Next