Advertisement
ಡಾ| ಸದ್ಯೋಜಾತ ಹಿರೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂವಾದಿ, ರಾಷ್ಟ್ರವಾದಿ ಹಿಂದುಳಿದವರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಮನೆ ಮಾಡಿರುವ ಅಸ್ಪೃಶ್ಯತೆ ವಿರುದ್ಧ ದೊಡ್ಡ ಆಂದೋಲನ ನಡೆಸಲು ಶ್ರೀರಾಮ ಸೇನೆ ಸಂಕಲ್ಪ ಮಾಡಿದೆ ಎಂದರು.
Related Articles
Advertisement
ಇಂದಿನ ಆಧುನಿಕ, ತಂತ್ರಜ್ಞಾನ ಯುಗದಲ್ಲೂ ನಗರ ಪ್ರದೇಶಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಬಾಡಿಗೆ ಮನೆ ಸಹ ಕೊಡುವುದಿಲ್ಲ. ಅಂಬೇಡ್ಕರ್ ಅವರೇ ಅಸ್ಪೃಶ್ಯತೆಯ ಕೌರ್ಯವನ್ನು ಅನುಭವಿಸಿದ್ದಾರೆ ನಾವೆಲ್ಲರೂ ಅಂಬೇಡ್ಕರ್ ಸ್ಥಾನದಲ್ಲಿ ನಿಂತು ಅಸ್ಪೃಶ್ಯತೆ ನೋಡಬೇಕು ಎಂದು ತಿಳಿಸಿದರು. ಒಂದು ವರ್ಗದವರು ಅಸ್ಪೃಶ್ಯತೆಯನ್ನ ದಾಳವನ್ನಾಗಿ ಬಳಕೆ ಮಾಡುತ್ತಿದ್ದಾರೆ. ಆ ವರ್ಗದ ಜನರನ್ನು ಮೇಲೇತ್ತುವ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿ ಶ್ರೀರಾಮ ಸೇನೆ ಅಸ್ಪೃಶ್ಯರನ್ನು ಜೊತೆಗೆ ಕೊಂಡೊಯ್ಯುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಒಂದು ಮನೆಯಲ್ಲಿರುವ ನಾಲ್ಕೈದು ಮಕ್ಕಳಲ್ಲಿ ಒಬ್ಬ ದುರ್ಬಲನಾಗಿದ್ದರೆ ತಾಯಿ ದುರ್ಬಲ ಇರುವ ಮಗುವಿನ ಮೇಲೆ ಹೆಚ್ಚು ಅಕ್ಕರೆ ತೋರಿಸುತ್ತಾಳೆ. ಅವರನ್ನು ಪ್ರತ್ಯೇಕವಾಗಿ ಇಡುವುದು ಸರಿಯಲ್ಲ. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಎಲ್ಲರೂ ಒಂದಾಗಿ ಸಾಗುವಂತಾಗಬೇಕು ಎಂದು ತಿಳಿಸಿದರು.
ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗೌರವ ಅಧ್ಯಕ್ಷ ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ, ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಆನಂದ್ ಅಡ್ಡಿಯಾರ್, ಪ್ರಮೋದ್, ಮಾಧ್ಯಮ ಪ್ರಮುಖ್ ಪರಶುರಾಮ್ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಇತರರು ಇದ್ದರು.