Advertisement

ಹಾರರ್‌-ಕಾಮಿಡಿ ‘ಎ ಟೇಲ್‌ ಆಫ್ ಆಂಡಾಳಮ್ಮ’

02:46 PM Jul 15, 2021 | Team Udayavani |

ನಿರ್ದೇಶಕ ನೂತನ್‌ ಉಮೇಶ್‌ ಈಗ “ಎ ಟೇಲ್‌ ಆಫ್ ಆಂಡಾಳಮ್ಮ’ ಎಂಬ ಮತ್ತೂಂದು ಚಿತ್ರವನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ. ಅಂದಹಾಗೆ, ಔಟ್‌ ಆ್ಯಂಡ್‌ ಔಟ್‌ ಹಾರರ್‌-ಕಾಮಿಡಿ ಕಥಾಹಂದರದ “ಆಂಡಾಳಮ್ಮ’

Advertisement

ಚಿತ್ರದಲ್ಲಿ ಶ್ರೀನಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಶೀರ್ಷಿಕೆಯ ಹಿಂದೆ ಕಾಣುವ ಹಂಡೆ ಸಹಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಚಿತ್ರಕ್ಕೆ “ಆಂಡಾಳಮ್ಮ’ ಅಂತ ಶೀರ್ಷಿಕೆಯಿಡಲು ಹಂಡೆಯು ಒಂದು ಕಾರಣ. ಹಾರರ್‌ – ಕಾಮಿಡಿ ಜೊತೆಗೆ ಫ್ಯಾಮಿಲಿ ಎಮೋಷನ್‌ ಸಹ ಈ ಚಿತ್ರದಲ್ಲಿದೆ.

ಸಂಪೂರ್ಣ ಮನರಂಜನೆ ಈ ಚಿತ್ರದಲ್ಲಿದೆ. ಸದ್ಯ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ ನಿರ್ದೇಶಕ ನೂತನ್‌ ಉಮೇಶ್‌.

“ಮೋಹಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಆಂಡಾಳಮ್ಮ’ ಚಿತ್ರದ ಪ್ರೀ-ಪ್ರೊಡಕ್ಷನ್‌ಕೆಲಸಗಳು ಭರದಿಂದ ನಡೆಯುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next