ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜ ನಿವಾಸ ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.
ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದ್ದು, ಜೊತೆಗೆ ಸೆಟ್ ವೊಂದರಲ್ಲಿ ಚಿತ್ರದ ಮುಖ್ಯಭಾಗವನ್ನು ಚಿತ್ರೀಕರಿಸಲಾಗಿದೆ.
ಈ ಚಿತ್ರದಲ್ಲಿ ಶ್ರೀನಗರ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮುಖ್ಯ ಭೂಮಿಕೆಯಲ್ಲಿ ರಾಘವ್, ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ಇದನ್ನೂ ಓದಿ:ಫಾರಿನ್ ಶೂಟಿಂಗ್‌ಗೆ ಸಾಥ್ ಕೊಡಲಿದೆ ‘ಫ್ಯಾಶನ್ ಎಬಿಸಿಡಿ’
ಮಿಥುನ್ ಸುವರ್ಣ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ ದಾ.ಪಿ ಆಂಜನಪ್ಪ ಹಾಗೂ ಲೋಕೇಶ್. ಎನ್. ಗೌಡ ಅವರು ಬಂಡವಾಳ ಹೂಡಿದ್ದಾರೆ. ದಸರಾ ಹಬ್ಬದಂದು ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಲಿದೆ