Advertisement

ಸತ್ಯ, ಧರ್ಮ ಇರುವಲ್ಲಿ ನಾಗ ಸಾನ್ನಿಧ್ಯ; ಸಗ್ರಿ ದೇವಸ್ಥಾನ ಸುಧರ್ಮ ಸಭೆಯಲ್ಲಿ ಡಾ|ಹೆಗ್ಗಡೆ

11:59 PM Apr 09, 2022 | Team Udayavani |

ಉಡುಪಿ: ಸತ್ಯ, ಧರ್ಮ ಇರುವಲ್ಲಿ ನಾಗ ಸಾನ್ನಿಧ್ಯ ಇರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪವಿತ್ರ ಭೂಮಿಯಾಗಿದ್ದು ಇಲ್ಲಿ ಬಹಳಷ್ಟು ನಾಗ ಸಾನ್ನಿಧ್ಯಗಳಿವೆ. ಇಲ್ಲಿನ ಮಣ್ಣು ಕೂಡ ನಾಗ ದೇವರದ್ದೇ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ನವೀಕೃತ ನಾಗ ಸನ್ನಿಧಾನ ಸಮರ್ಪಣೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವದ ಪ್ರಯುಕ್ತ ನಡೆದ ಸುಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವ ಚನ ನೀಡಿ, ಧರ್ಮ ನಮ್ಮನ್ನು, ದೇಶ ವನ್ನು ರಕ್ಷಿಸುತ್ತದೆ. ಅದಕ್ಕಾಗಿ ನಾವು ಭಗ ವಂತನನ್ನು ಆಶ್ರಯಿಸಬೇಕು ಎಂದರು.

ವಿವಿಧ ಗಣ್ಯರನ್ನು ಸಮ್ಮಾನಿಸ ಲಾಯಿತು. ಸಗ್ರಿ ದೇವಸ್ಥಾನದ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆರ್ಚಕರಾದ ಅನಂತ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಬ್ರಹ್ಮಕಲಶೋತ್ಸವ, ನಾಗಮಂಡಲ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ, ಶ್ರೀ ಮಹಾಲಕ್ಷೀ ¾ ಕ್ಯಾಶ್ಯೂನ ಶ್ರೀಪತಿ ಭಟ್‌ ಮೂಡುಬಿದಿರೆ, ಉಡುಪಿ ಸಾಯಿರಾಧಾ ಗ್ರೂಪ್ಸ್‌ನ ಮನೋಹರ ಶೆಟ್ಟಿ, ಉದ್ಯಮಿ ಗಣಪತಿ ಹೆಗ್ಡೆ, ದ.ಕ.-ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಉಪಸ್ಥಿತರಿದ್ದರು.

ಗೋಪಾಲಕೃಷ್ಣ ಜೋಯಿಸ ಸ್ವಾಗತಿಸಿ, ವಾಸುದೇವ ಪೆರಂಪಳ್ಳಿ ಪ್ರಸ್ತಾವನೆ ಗೈದರು. ಆನಂದತೀರ್ಥ ಉಪಾಧ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next