Advertisement

ಮುಂಬೈನ ಪ್ರಸಿದ್ಧ ಗಣಪತಿ ದೇಗುಲವಾಗಿರುವ ಸಿದ್ಧಿವಿನಾಯಕ ಈಗ ಲೈವ್‌ ನಲ್ಲೂ ಕಾಣಬಹುದು!

07:03 PM Aug 30, 2022 | Team Udayavani |

ಮುಂಬೈ: ಗಣೇಶ ಚತುರ್ಥಿ ಪ್ರಯುಕ್ತ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರಸಿದ್ಧ ಗಣಪತಿ ದೇಗುಲವಾಗಿರುವ ಶ್ರೀ ಸಿದ್ಧಿವಿನಾಯಕ ದೇಗುಲವು ಭಕ್ತಾದಿಗಳಿಗೆ ಹೊಸ ಸೌಲಭ್ಯವೊಂದನ್ನು ಆರಂಭಿಸಿದೆ.

Advertisement

ದೂರದೂರಿನಲ್ಲಿರುವ ಭಕ್ತರೂ ದೇವರ ದರ್ಶನ ಪಡೆಯಲೆಂದು ಯೂಟ್ಯೂಬ್‌ನಲ್ಲಿ ಮತ್ತು ದೇಗುಲದ ಆ್ಯಪ್‌ನಲ್ಲಿ ಲೈವ್‌ ಪೂಜೆ ಹಾಗೂ ಆರತಿಯನ್ನು ನಡೆಸಲಾಗುತ್ತಿದೆ.

ಬಲಗಡೆ ಸೊಂಡಿಲಿನಿಂದಾಗಿ ಪ್ರಸಿದ್ಧವಾಗಿರುವ ಈ ದೇಗುಲದಲ್ಲಿ ಒಟ್ಟು 10 ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ.

ಬೆಳಗ್ಗೆ 5.30ರಿಂದ ರಾತ್ರಿ 10 ಗಂಟೆಯವರೆಗೆ ಪೂಜೆಗಳು ನಡೆಯಲಿವೆ. ಈ ವಿನಾಯಕನ ದರ್ಶನ ಪಡೆಯಲಿಚ್ಛಿಸುವವರು https://www.youtube.com/watch?v=zrz2f1pzPrs&feature=emb_title ಗೆ ಭೇಟಿ ನೀಡಬಹುದು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next