Advertisement

ಶ್ರೀ ಕಾಶೀ ಮಠ ಸಂಸ್ಥಾನ ವಾರಾಣಸಿ: ವಾಲ್ಕೇಶ್ವರ ಶಾಖಾ ಮಠ ಲೋಕಾರ್ಪಣೆ

12:59 AM Mar 01, 2024 | Team Udayavani |

ಮಣಿಪಾಲ/ ವಾಲ್ಕೇಶ್ವರ: ಪ್ರತಿಷ್ಠಿತ ಶ್ರೀ ಸಂಸ್ಥಾನ ವಾರಾಣಸಿಯ ಶ್ರೀ ಕಾಶೀ ಮಠದ ಜೀರ್ಣೋದ್ಧಾರಗೊಂಡ ವಾಲ್ಕೇಶ್ವರ ಬಾಣಗಂಗಾ ಶಾಖೆಯ ನೂತನ ಶಿಲಾಮಯ ಕಟ್ಟಡವನ್ನು ಶ್ರೀ ಕಾಶಿ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಗುರುವಾರ ಲೋಕಾರ್ಪಣೆಗೊಳಿಸಿದರು.

Advertisement

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಫೆ. 28ರಂದು ರಾಕ್ಷೋಘ್ನ ಹೋಮ, ನವಗ್ರಹ ವಾಸ್ತು ಹವನ ಹಾಗೂ ಫೆ. 29ರಂದು ಧನ್ವಂತರಿ, ಮೃತ್ಯುಂಜಯ ಹವನ ಮತ್ತಿತರ ವಿಧಿ-ವಿಧಾನಗಳು ನೆರವೇರಿದವು. ಫೆ. 29ರ ಸಂಜೆ ಜಿಎಸ್‌ಬಿ ಸಮಾಜದ ಪ್ರಸಿದ್ಧ ಕಲಾವಿದರಿಂದ ಭಜನ್‌ ಸಂಧ್ಯಾ, ಸ್ವಾಮೀಜಿಗಳ ಉಪಸ್ಥಿತಿ ಯಲ್ಲಿ ಧಾರ್ಮಿಕ ಸಭೆ ನಡೆಯಿತು. ಕಾಶೀ ಮಠಾಧೀಶರನ್ನು ಜಿಎಸ್‌ಬಿ ಸಮಾಜ ಬಾಂಧವರು ಮತ್ತು ಭಕ್ತರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಭಕ್ತರಿಂದ ಸಂಕೀರ್ತನೆ, ಶ್ರೀಗಳ ಪಾದಪೂಜೆ ನೆರವೇರಿತು. ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಹರಸಿದರು.

ವಾಲ್ಕೇಶ್ವರ ಶ್ರೀ ಕಾಶೀ ಮಠದ ಅಧ್ಯಕ್ಷ ಜಿ.ಜಿ. ಪ್ರಭು, ಕಾರ್ಯಾಧ್ಯಕ್ಷ ದಯಾನಂದ ಪೈ, ಉಪ ಕಾರ್ಯಾಧ್ಯಕ್ಷರಾದ ಜಿ.ಡಿ. ರಾವ್‌ ಮತ್ತು ಉಮೇಶ್‌ ಭಟ್‌, ಪ್ರಮುಖರಾದ ರಘವೀರ್‌ ಭಂಡಾರಿ ಮತ್ತು ರವೀಂದ್ರ ಡಿ. ಪೈ, ಡಾ| ಭುಜಂಗ ಪೈ, ಮೋಹನದಾಸ್‌ ಪಿ. ಮಲ್ಯ, ಜಗನ್ನಾಥ್‌ ಶೆಣೈ ಮೈಸೂರು, ದೀಪಕ್‌ ಅರವಿಂದ ರಾವ್‌, ರಘುನಂದನ್‌ ಕಾಮತ್‌, ಕೆ.ಎಸ್‌. ಪ್ರಭು, ಗಣೇಶ್‌ ಪ್ರಭು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದೀಪಕ್‌ ಭಾಸ್ಕರ್‌ ಶೆಣೈ, ಉಪಾಧ್ಯಕ್ಷ ಪ್ರಕಾಶ್‌ ಜಿ. ಕಾಮತ್‌, ಕಾರ್ಯದರ್ಶಿ ಆರ್‌.ಜಿ. ಭಟ್‌, ಜತೆ ಕಾರ್ಯದರ್ಶಿ ಉಮಾನಾಥ್‌ ನಾಯಕ್‌, ಕೋಶಾಧಿಕಾರಿ ಉಮೇಶ್‌ ಸುರೇಂದ್ರ ಕಾಮತ್‌, ಜತೆ ಕೋಶಾಧಿಕಾರಿ ಯು. ಪ್ರಭಾಕರ ಭಟ್‌, ಸದಸ್ಯರಾದ ಅಶೋಕ್‌ ಕಿಣಿ, ನಿತಿನ್‌ ಜಗದೀಶ್‌ ಪ್ರಭು, ಅಮಿತ್‌ ದಿನೇಶ್‌ ಪೈ, ಹೇಮ್‌ಪ್ರಕಾಶ್‌, ರಮೇಶ್‌ ವಾಮನ್‌ ಭಂಡರ್ಕಾರ್‌, ಕಾರ್ಯಕಾರಿ ಸಮಿತಿಯ ಸದಸ್ಯರು, ಮುಂಬಯಿ ಗ್ರಾಮ್‌ ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು.

Advertisement

ಮುಂಬಯಿ ಮತ್ತು ವಿವಿಧ ಉಪನಗರಗಳಾದ ಜಿಎಸ್‌ಬಿ ಸಭಾ ದಹಿಸರ್‌-ಬೊರಿವಲಿ, ಜಿಎಸ್‌ಬಿ ಮಂಡಳ ಥಾಣೆ, ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಸಹಿತ ಜಿಎಸ್‌ಬಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಭಕ್ತರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಪಾಲ್ಗೊಂಡು ಶುಭಹಾರೈಸಿದರು.

ಶ್ರೀ ಕ್ಷೇತ್ರದಲ್ಲಿ ಮಾ. 1ರಿಂದ ಮಾ. 9ರ ವರೆಗೆ ಸೀಯಾಳಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ನವ ಚಂಡಿಕಾ ಯಾಗ, ಮುದ್ರಾಧಾರಣೆ, ಪವಮಾನ ಅಭಿಷೇಕ, ಸುಂದರಕಾಂಡ ಕಲಶಾಭಿಷೇಕ, ಮಹಾವಿಷ್ಣು ಕಲಶಾಭಿಷೇಕ, ಸುಂದರ ಕಾಂಡ ಹವನ ಪಾರಾಯಣ, ವೇದವ್ಯಾಸ ಸಹಸ್ರನಾಮ ಹವನ ಸೇರಿದಂತೆ ವಿವಿಧ ಪೂಜೆ ಹವನಗಳು, ಅಭಿಷೇಕಗಳು, ರಾಮಾಯಣ ಪಾರಾಯಣ ಹಾಗೂ ವಿವಿಧ ಸೇವೆಗಳನ್ನು ಆಯೋಜಿಸಲಾಗಿದೆ.

ರಾಮ ಲಕ್ಷ್ಮಣರು ನೆಲೆಸಿದ್ದ ಸ್ಥಳ

ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕಲು ಹೊರಟಿದ್ದಾಗ ಈ ಸ್ಥಳದಲ್ಲಿ ನೆಲೆ ನಿಂತಿದ್ದರು ಎಂಬ ಪ್ರತೀತಿಯಿದೆ. ಶ್ರೀರಾಮನ ಬಾಯಾರಿಕೆಯನ್ನು ನೀಗಿಸಲು ಲಕ್ಷ್ಮಣನು ಬಾಣವನ್ನು ನೆಲಕ್ಕೆ ಪ್ರಯೋಗಿಸಿದಾಗ ನೆಲದಿಂದ ನೀರು ಚಿಮ್ಮಿತು. ಈ ಕಾರಣದಿಂದಲೇ ಈ ಸ್ಥಳವು ಬಾಣಗಂಗಾ ಎಂದು ಪ್ರಸಿದ್ಧಿ ಪಡೆದಿದೆ.

ವಾಲ್ಕೇಶ್ವರ ಸ್ಥಳನಾಮ ವಿಶೇಷ

ಶ್ರೀರಾಮನು ಬಾಣಗಂಗಾದಲ್ಲಿ ತಂಗಿದ್ದಾಗ ಮರಳು, ನೀರನ್ನು ಬಳಸಿ ಶಿವಲಿಂಗವನ್ನು ನಿರ್ಮಿಸಿ ಪೂಜೆಯನ್ನು ಸಲ್ಲಿಸಿರುವುದರಿಂದ ಮೂಲತಃ ಇದನ್ನು ವಾಲು ಚ ಈಶ್ವರ ಎಂದು ಕರೆಯಲಾಯಿತು (ವಾಲು ಎಂದರೆ ಮರಳು). ಮುಂದೇ ಇದೇ ವಾಲ್ಕೇಶ್ವರ ಆಯಿತು. ಬಾಣಗಂಗಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next