Advertisement

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

05:53 PM Mar 26, 2024 | ಶ್ರೀರಾಮ್ ನಾಯಕ್ |

ಹಲ್ವಾ ಎಂದರೆ ಸಾಕು ಎಂತಹವರ ಬಾಯಲ್ಲೂ ನೀರೂರುತ್ತದೆ. ಅದರಲ್ಲೂ ಬೂದುಕುಂಬಳಕಾಯಿಯ (ಕಾಶಿ)ಹಲ್ವಾ ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ತಿನ್ನಬೇಕೆನ್ನುವಷ್ಟು ರುಚಿಕರ ಹಾಗೂ ಆರೋಗ್ಯಕರಕ್ಕೂ ಇದು ಅತ್ಯುತ್ತಮವಾಗಿದೆ. ಹಾಗಾದರೆ ಇಂದು ನಾವು ನಿಮಗಾಗಿ ಬೂದುಕುಂಬಳಕಾಯಿಯನ್ನು ಬಳಸಿ ಅತ್ಯಂತ ಸುಲಭವಾಗಿ ರುಚಿಕರವಾದ ಕಾಶಿ ಹಲ್ವಾ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ…..

Advertisement

ಕಾಶಿ ಹಲ್ವಾ
ಬೇಕಾಗುವ ಸಾಮಗ್ರಿಗಳು
ಬೂದುಕುಂಬಳ ಕಾಯಿ 2ಕಪ್‌ (ತುರಿದಿಟ್ಟ), ಸಕ್ಕರೆ 1 ಕಪ್‌,ತುಪ್ಪ ಅರ್ಧ ಕಪ್‌, ಗೋಡಂಬಿ ಸ್ವಲ್ಪ, ಒಣದ್ರಾಕ್ಷಿ ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ, ಕೇಸರಿ ಸ್ವಲ್ಪ.

ತಯಾರಿಸುವ ವಿಧಾನ
ಮೊದಲಿಗೆ ಬೂದುಕುಂಬಳ ಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ನಂತರ ಅದರಲ್ಲಿರುವ ಬೀಜ ಹಾಗೂ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಿ. ಆ ಬಳಿಕ ಒಂದು ಬಾಣಲೆಗೆ ತುರಿದ ಬೂದುಕುಂಬಳ ಕಾಯಿಯನ್ನು ಸೇರಿಸಿ ಚೆನ್ನಾಗಿ ಹುರಿಯರಿ. ಕುಂಬಳಕಾಯಿಯಲ್ಲಿ ನೀರಿನಾಂಶ ಇರುವುದರಿಂದ ಅದು ಆವಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ, ತದನಂತರದಲ್ಲಿ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುತ್ತ ತುಪ್ಪವನ್ನು ಹಾಕಿರಿ. ತುಪ್ಪ ಜಾಸ್ತಿ ಹಾಕಿದಷ್ಟು ಹಲ್ವಾಕ್ಕೆ ರುಚಿ ಹೆಚ್ಚು. ನಂತರ ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಂದು ಪ್ಯಾನ್‌ ಗೆ ಎರಡು ಚಮಚ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಕಂದು ಬಣ್ಣ ಆಗುವವರೆಗೆ ಹುರಿಯಿರಿ ನಂತರ ಅದನ್ನು ಹಲ್ವಾಕ್ಕೆ ಹಾಕಿ ಅದರ ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಬೂದುಕುಂಬಳಕಾಯಿ(ಕಾಶಿ) ಹಲ್ವಾ ಸವಿಯಲು ಸಿದ್ಧ.

-ಶ್ರೀರಾಮ್ ಜಿ. .ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next