Advertisement

“10 ಕೋ. ರೂ. ವೆಚ್ಚದಲ್ಲಿ “ಶ್ರಮಿಕ ನಿವಾಸ’

11:20 PM Mar 28, 2023 | Team Udayavani |

ದೊಡ್ಡಬಳ್ಳಾಪುರ: ಕಾರ್ಮಿಕರ ಇಲಾಖೆ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದ್ದು, ಹೊರ ರಾಜ್ಯ ಹಾಗೂ ಇತರ ಜಿಲ್ಲೆಗಳಿಂದ ಉದ್ಯೋಗ ಅರಸಿಕೊಂಡು ಬರುವ ವಲಸೆ ಕಾರ್ಮಿಕರಿಗೆ ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಶ್ರಮಿಕ ನಿವಾಸ ಹೆಸರಿನಲ್ಲಿ ವಸತಿ ಸಮುತ್ಛಯಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

Advertisement

ತಾಲೂಕಿನ ಓಬದೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರಮಿಕ ನಿವಾಸ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿ, ದೇಶವನ್ನು ರಕ್ಷಿಸುವ ಸೈನಿಕರು, ಹಸಿವು ನೀಗಿ ಸುವ ರೈತರು ಮತ್ತು ದೇಶ ಕಟ್ಟುವುದರಲ್ಲಿ ಮಹತ್ವದ ಪಾತ್ರವಹಿಸಿರುವ ಶ್ರಮಿಕ ವರ್ಗ ಸುಖ ಶಾಂತಿಯಿಂದ ಬಾಳಬೇಕು.

ನಮ್ಮ ದೇಶದ ಜಿಡಿಪಿ ಹೆಚ್ಚಳದಲ್ಲಿ ಕಾರ್ಮಿಕರ ಪಾಲು ಮಹತ್ತರವಾಗಿದ್ದು, ಕಾರ್ಮಿಕರ ಕಲ್ಯಾಣವಾದಾಗ ಮಾತ್ರ ದೇಶದ ಆರ್ಥಿಕತೆ ಸದೃಢವಾಗಲು ಸಾಧ್ಯ ಎಂದರು.

ಸೆಸ್‌ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ
2006ರಲ್ಲಿ ಜಾರಿಗೆ ಬಂದಿರುವ ಕಾನೂನಿನಂತೆ ರಸ್ತೆ, ಮನೆ, ಬೃಹತ್‌ ವಸತಿ ಗೃಹ ಸೇರಿದಂತೆ ಯಾವುದೇ ನಿರ್ಮಾಣ ಆಗಬೇಕಿದ್ದರೆ ಶೇಕಡಾ ಒಂದರಷ್ಟು ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕಿದೆ. ತಪ್ಪಿದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಲು ಅವಕಾಶವಿದೆ. ಕಾರ್ಮಿಕರ ಕಲ್ಯಾಣದ ಹಣದ ಸಂಗ್ರಹಕ್ಕೆ ಇದ್ದ ಆದಾಯ ತೆರಿಗೆಯನ್ನು ತೆಗೆದು ಹಾಕಿದ್ದರ ಫಲವಾಗಿ ಸುಮಾರು 400 ಕೋಟಿ ರೂ. ಉಳಿತಾಯವಾಗಿದ್ದು, ಇದನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲಾಗುತ್ತಿದೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next