Advertisement
ನಗರದ ಕೆನರಾ ಶಾಲೆಯ ಭುವನೇಂದ್ರ ಸಭಾಂಗಣದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಲವ್ ಜೆಹಾದ್ ಬಗ್ಗೆ ಜಾಗೃತಿ ಮೂಡಿಸಲು ಬುಧವಾರ ಹಮ್ಮಿಕೊಳ್ಳಲಾಗಿದ್ದ “ನಮ್ಮಯ ಹಕ್ಕಿ ಕಳ್ಕೊಂಡ್‌ಬಿಟ್ವಿ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಹಿಂದೆ ಮೊಬೈಲ್ ರಿಚಾರ್ಜ್ ಅಂಗಡಿಗಳ ಮೂಲಕ ಹಿಂದೂ ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳಲಾಗುತ್ತಿದ್ದರೆ, ಈಗ ಡೇಟಿಂಗ್ ಆ್ಯಪ್‌ಗ್ಳು, ಸಾಮಾಜಿಕ ಜಾಲತಾಣಗಳ ಮೂಲಕ ಅವರನ್ನು ಗುರಿಯಾಗಿಸಲಾಗುತ್ತದೆ. ಲವ್‌ಜೆಹಾದ್ ಗೆ ಬಲಿಯಾದವರನ್ನು ಭಯೋತ್ಪಾದನ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಕೊಡಗಿನ ದೀಪ್ತಿ ಮಾರ್ಲ ಹಾಗೂ ಆಶಾ ಅವರು ಉಳ್ಳಾಲದ ಮರಿಯಮ್ ಹಾಗೂ ಮಂಗಳೂರಿನ ಆಯೆಷಾ ಆಗಿರುವುದು ನಿದರ್ಶನ. ಮತಾಂತರಗೊಂಡ ಯುವತಿಯರನ್ನು ಬಳಸಿಕೊಳ್ಳುವುದಷ್ಟೇ ಅಲ್ಲದೆ ಮಾರಾಟ ಮಾಡುವುದು ಕೂಡ ನಡೆಯುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿಂದೂ ಜನಜಾಗೃತಿ ಸಮಿತಿ ಮಂಗಳೂರು ಅಧ್ಯಕ್ಷೆ ಲಕ್ಷ್ಮೀ ಪೈ ಅವರು, ಬ್ರಿಟಿಷರು ಹುಟ್ಟು ಹಾಕಿದ ನೂತನ ಶಿಕ್ಷಣ ಪದ್ಧತಿಯ ಪರಿಣಾಮವಾಗಿ ಧರ್ಮಬಲ, ಆತ್ಮಬಲ ವಿಲ್ಲದ ಸಮುದಾಯ ಸೃಷ್ಟಿಯಾಗಿರುವುದು ವಿಪರ್ಯಾಸ, ಸಂಸ್ಕಾರದ ಶಿಕ್ಷಣದಿಂದ ನಮ್ಮ ಮಕ್ಕಳನ್ನು ಸದೃಢರನ್ನಾಗಿಸಬಹುದು ಎಂದರು.
ಯುವಬ್ರಿಗೇಡ್ ಮುಖಂಡ ಧರ್ಮ ಹೊನ್ನಾರಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಭವ್ಯ ಸ್ವಾಗತಿಸಿ ಪ್ರಿಯಾ ಶಿವಮೊಗ್ಗ ನಿರೂಪಿಸಿದರು.
ಕಾನೂನಿಗಿಂತ ಹೆತ್ತವರ ಪಾತ್ರ ಮುಖ್ಯ: ದೇಶದಲ್ಲಿ ಲವ್ ಜೆಹಾದ್ ವಿರುದ್ಧ ಕಾನೂನು ತರಬೇಕು, ಶಾಲೆ ಗಳಲ್ಲಿ ಪಠ್ಯ ತರಬೇಕೆಂಬ ಮಾತು ಕೇಳಿಬರುತ್ತಿದೆ. ಆದರೆ ಅದಲ್ಲಕ್ಕಿಂತ ಮುಖ್ಯವಾದದ್ದು ಹಿಂದೂ ಯುವತಿ ಯರ ಹಾಗೂ ಯುವಕರ ಹೆತ್ತವರು ಮಕ್ಕಳಿಗೆ ಈ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು, ಮಾತ ನಾಡಬೇಕು, ಅವರಿಗೆ ಅರ್ಥ ವಾಗುವ ರೀತಿಯಲ್ಲಿ ತಿಳಿಸಿದರೆ ಶೇ. 50 ಪ್ರಕರಣ ಇಳಿಕೆ ಯಾಗಬಹುದು ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದರು.
———————————————————————————————————————————————————————-
ಲವ್ ಜೆಹಾದ್ನತ್ತ ಗಮನಕೊಡಿ!
ಚರ್ಚೆ ಹುಟ್ಟುಹಾಕಿದ ನಳಿನ್ ಕುಮಾರ್ ಹೇಳಿಕೆ
ಮಂಗಳೂರು: “ನೀವು ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ವೇದವ್ಯಾಸ್ ಹೋದಾಗ ಕೈ ಎತ್ತಿಲ್ಲ, ನಳಿನ್ ನಕ್ಕಿಲ್ಲ ಎನ್ನಬೇಡಿ. ನಳಿನ್ ಕುಮಾರ್ ನಕ್ಕು ನಿಮಗೇನು ಬಂಗಾರ ಸಿಗ್ತಾ ಇಲ್ಲ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜೆಹಾದ್ ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಬೇಕು’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸೋಮವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿಯ ಜಿಲ್ಲಾ ಮಟ್ಟದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವ ಸಂದರ್ಭ ಉಳ್ಳಾಲದ ಬಿಜೆಪಿ ನಾಯಕರನ್ನು ಉಲ್ಲೇಖೀಸಿ ಅವರು ಈ ಹೇಳಿಕೆ ನೀಡಿದ್ದರು.
ಲವ್ ಜೆಹಾದ್ ನಿಷೇಧಿಸಲು ಬಿಜೆಪಿ ಆಡಳಿತ ಬೇಕು. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ ಬಿಜೆಪಿ ಬೇಕು. ಅದಕ್ಕಾಗಿ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಪಕ್ಷದ ಜಯಕ್ಕೆ ಶ್ರಮಿಸಬೇಕು ಎಂದು ಹೇಳುತ್ತಾ ನಳಿನ್ ಕುಮಾರ್, ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಗೈದಿದ್ದರು. ನಳಿನ್ ಅವರ ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ.