Advertisement
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ನ. 13ರಂದು ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನ ಹೊಂದಿದ ಮೊಗವೀರ ಸಮಾಜದ ಹಿರಿಯ ಮುಖಂಡ, ಮೊಗವೀರ ಯುವಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಮೊಗವೀರ ಕೋ-ಆಪರೇಟಿವ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
Related Articles
Advertisement
ಸಭೆಯಲ್ಲಿ ಉಪಸ್ಥಿತರಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ರಮೇಶ್ ಬಂಗೇರ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ್ ಪುತ್ರನ್, ಕಣ್ಣಂಗಾರ್ ಮೊಗವೀರ ಸಭಾ ಮುಂಬಯಿ ಸಮಿತಿ ಅಧ್ಯಕ್ಷ ಡಿ. ಬಿ. ಪುತ್ರನ್, ಚರಂತಿಪೇಟೆ ಮೊಗವೀರ ಸಭಾದ ಅಧ್ಯಕ್ಷ ಕೃಷ್ಣ ಕೆ. ಕೋಟ್ಯಾನ್, ಪೊಲಿಪು ಮೊಗವೀರ ಸಭಾ ಮುಂಬಯಿ ಸಮಿತಿ ದಿವಾಕರ್ ಸಾಲ್ಯಾನ್, ಕದಿಕೆ ಮೊಗವೀರ ಸಭಾ ಸಮಿತಿ ಮುಂಬಯಿ ಅಧ್ಯಕ್ಷ ಚಂದ್ರಕಾಂತ್ ಪುತ್ರನ್, ಮೊಗವೀರ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್ ಅಧ್ಯಕ್ಷ ಯದುವೀರ ಪುತ್ರನ್, ಹೆಜಮಾಡಿ ಕೋಡಿ ವಿದ್ಯಾಪ್ರಸಾರಕ ಸಂಘದ ರಾಜೇಂದ್ರ ಪುತ್ರನ್, ಮೊಗವೀರ ಬ್ಯಾಂಕ್‌ನ ನಿರ್ದೇಶಕ ಜನಾರ್ದನ ಮೂಲ್ಕಿ ಮೊದಲಾದವರು ನುಡಿನಮನ ಸಲ್ಲಿಸಿದರು.
ಪ್ರಾರಂಭದಲ್ಲಿ ಸದಾನಂದ ಕೋಟ್ಯಾನ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಗಣ್ಯರು ಪುಷ್ಪಾಂಜಲಿ ಅರ್ಪಿಸಿದರು. ಶ್ರದ್ಧಾಂಜಲಿ ಸಭೆಯನ್ನು ನಿರ್ವಹಿಸಿದ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ ಅವರು ಸದಾನಂದ ಕೋಟ್ಯಾನ್ ಅವರ ಸಾಧನೆಗಳ ಬಗ್ಗೆ ವಿವರಿಸಿದರು. ಮೊಗವೀರ ಯುವಕ ಸಂಘದ ಕಾರ್ಯದರ್ಶಿ ದಿಲೀಪ್ ಮೂಲ್ಕಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣ್ ಶ್ರೀಯಾನ್, ಯುಎಇ ಮೊಗವೀರ ಸಂಘದ ರವಿ ಸಾಲ್ಯಾನ್, ಗುರುವಪ್ಪ ಕೋಟ್ಯಾನ್, ಸಂಜೀತ್ ಸದಾನಂದ ಕೋಟ್ಯಾನ್, ನೈನ್ ಹ್ಯಾಂಡ್ಸ್ ಫೌಂಡೇಶನ್‌ನ ಟ್ರಸ್ಟಿ ಹರೀಶ್ ಶ್ರೀಯಾನ್, ಸದಾನಂದ ಕೋಟ್ಯಾನ್ ಅವರ ಪತ್ನಿ ಗೀತಾ ಕೋಟ್ಯಾನ್, ಪುತ್ರಿ ಡಾ| ಸಂಗೀತಾ ಗಣೇಶ್ ಮೂಲ್ಕಿ, ಸೊಸೆ ಮೆಹೆಕ್ ಸಂಜೀತ್ ಕೋಟ್ಯಾನ್, ಅಳಿಯ ಗಣೇಶ್ ಮೂಲ್ಕಿ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಮೊಗವೀರ ಬ್ಯಾಂಕ್‌ನ ನಿರ್ದೇಶಕರಾದ ವಸಂತ್ ಕುಂದರ್, ಶೀಲಾ ಅಮೀನ್, ಮುಕೇಶ್ ಬಂಗೇರ, ಜಯಶೀಲ್ ತಿಂಗಳಾಯ, ಬ್ಯಾಂಕ್‌ನ ಉನ್ನತಾಧಿಕಾರಿ ಶಿಲ್ಪಾ ಹಾಗೂ ಬ್ಯಾಂಕ್‌ನ ಅಧಿಕಾರಿಗಳು, ಪ್ರಬಂಧಕರು, ಸಿಬಂದಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಭಾಸ್ಕರ್ ಸಾಲ್ಯಾನ್, ಸಂಜೀವ್ ಕೆ. ಸಾಲ್ಯಾನ್, ರವಿದಾಸ್ ಸಾಲ್ಯಾನ್, ಪ್ರೇಮಲತಾ ಪುತ್ರನ್, ಗಣೇಶ್ ಕಾಂಚನ್, ದಯಾನಂದ್ ಬಂಗೇರ, ನಾಗೇಶ್ ಮೆಂಡನ್, ಟ್ರಸ್ಟಿಗಳಾದ ಹರೀಶ್ ಪುತ್ರನ್ ಮತ್ತು ದೇವರಾಜ್ ಬಂಗೇರ, ಉದ್ಯಮಿ ಶ್ರೀನಿವಾಸ ಕಾಂಚನ್, ಮೊಗವೀರ ಗ್ರಾಮ ಸಭಾ ಮತ್ತು ಮೂಲಸ್ಥಾನ ಸಭಾಗಳ ಪದಾಧಿಕಾರಿಗಳು ಹಾಗೂ ಸದಾನಂದ ಕೋಟ್ಯಾನ್ ಅವರ ಅಭಿಮಾನಿಗಳು, ಬಂಧು-ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಸದಾನಂದ ಕೋಟ್ಯಾನ್ ಅವರ ಪುತ್ರ ಸಂಜೀತ್ ಕೋಟ್ಯಾನ್ ಮತ್ತು ಅಳಿಯ ಗಣೇಶ್ ಮೂಲ್ಕಿ ಅವರು ಸಭೆಯನ್ನು ಆಯೋಜಿಸಿದ ಮೊಗವೀರ ಬ್ಯಾಂಕ್, ಮೊಗವೀರ ಮಂಡಳಿ, ಮುಂಬಯಿಯ ಗ್ರಾಮ ಸಭಾಗಳು, ಮೂಲಸ್ಥಾನ ಸಭಾಗಳ ಪದಾಧಿಕಾರಿಗಳು, ಇತರ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮೊಗವೀರ ಸಮಾಜದ ಒಬ್ಬ ಆಧಾರ ಸ್ತಂಭದಂತಿದ್ದ ಸದಾನಂದ ಕೋಟ್ಯಾನ್ ಅವರ ಅಗಲಿಕೆ ನಮಗೂ ಹಾಗೂ ನಮ್ಮ ಸಂಸ್ಥೆಗಳಿಗೆ ಬಹಳ ನಷ್ಟವನ್ನುಂಟುಮಾಡಿದೆ. ಅವರ ಸಮಾಜ ಸೇವೆಯ ಯೋಚನೆ-ಯೋಜನೆಗಳು ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಹಲವಾರು ಕನಸುಗಳು ನನಸಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕು.-ವೇದಪ್ರಕಾಶ್ ಶ್ರೀಯಾನ್, ಆಡಳಿತ ನಿರ್ದೇಶಕರು, ದಿವ್ಯಾ ಶಿಪ್ಪಿಂಗ್ ಕಂಪೆನಿ
ಸಮಾಜ ಬಾಂಧವರೊಂದಿಗೆ ಆತ್ಮೀಯವಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಿ ಎಲ್ಲರ ಹಿತವನ್ನೇ ಬಯಸುತ್ತಾ ಸದಾ ಸಮಾಜದ ಬಗ್ಗೆ ಚಿಂತಿಸುತ್ತಾ ಇದ್ದವರು. ಅವರು ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ ಬ್ಯಾಂಕ್‌ನ ಪ್ರಗತಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದರು. ಅವರ ಕನಸನ್ನು ನನಸು ಮಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕು. ಇದೇ ಅವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ.-ಸುರೇಶ್ ಕಾಂಚನ್, ನಿರ್ದೇಶಕರು, ಮೊಗವೀರ ಕೋ-ಆಪರೇಟಿವ್ ಬ್ಯಾಂಕ್
ಸದಾನಂದ ಕೋಟ್ಯಾನ್ ಅವರ ಸಮಾಜ ಸೇವೆ ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಮೊಗವೀರ ಮಂಡಳಿ ಹಾಗೂ ಮೊಗವೀರ ಬ್ಯಾಂಕನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಅವರ ಕಾರ್ಯ ಮೆಚ್ಚುವಂತದ್ದಾಗಿದೆ. ಅವರು ಸದಾ ನಮ್ಮೊಂದಿಗಿದ್ದು, ಕ್ರಿಯಾಶೀಲರಾಗಿದ್ದ ಒಬ್ಬ ನಿಷ್ಕಲ್ಮಶ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು.-ಅಜಿತ್ ಜಿ. ಸುವರ್ಣ, ಟ್ರಸ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ
ಸಮಾಜ ಸೇವಕ ಸದಾನಂದ ಕೋಟ್ಯಾನ್ ಅವರ ಅಗಲುವಿಕೆ ಮೊಗವೀರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಮಾಜದ ಸಮಸ್ಯೆಗಳನ್ನು ನಿವಾರಿಸುವಂತಹ ವ್ಯಕ್ತಿತ್ವ ಹೊಂದಿದ್ದರು. ಧಾರ್ಮಿಕ, ಶೈಕ್ಷಣಿಕ, ಬ್ಯಾಂಕಿಂಗ್ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅವರ ಸೇವೆ ಅನನ್ಯವಾಗಿದೆ.-ಕೆ. ಎಲ್. ಬಂಗೇರ, ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ
-ಚಿತ್ರ-ವರದಿ: ಸುಭಾಷ್ ಶಿರಿಯ