Advertisement

ಮುಂದಿನ ಎರಡು ದಿನ ರಾಜ್ಯದಲ್ಲಿ ತುಂತುರು ಮಳೆ 

03:40 AM Jul 08, 2017 | |

ಬೆಂಗಳೂರು: ಕರಾವಳಿ ಸೇರಿ ರಾಜ್ಯದ ಒಳನಾಡು ಪ್ರದೇಶಗಳ ಆಯ್ದ ಭಾಗಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದ್ದು, ಮುಂದಿನ ಎರಡು ದಿನಗಳು ಅಲ್ಲಲ್ಲಿ ತುಂತುರು ಮಳೆ ಹನಿಯಲಿದೆ.

Advertisement

ಕಳೆದ ವಾರ ಆರ್ಭಟಿಸಿದ್ದ ಮಳೆ, ಈ ವಾರ ಬಹುತೇಕ ವಿರಾಮ ನೀಡಿದೆ. ಬೆಂಗಳೂರು ಒಳ ಗೊಂಡಂತೆ ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಒಳನಾಡಿನಲ್ಲಿ ಕೇವಲ ತುಂತುರು ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಮಧ್ಯೆ ಶುಕ್ರವಾರ ಬೆಳಗ್ಗೆ 8.30ಕ್ಕೆ ತೀರ್ಥಹಳ್ಳಿಯ ಆಗುಂಬೆ, ದಕ್ಷಿಣ ಕನ್ನಡದ ಸುಳ್ಯ, ಪುತ್ತೂರಿನಲ್ಲಿ 4 ಸೆಂ.ಮೀ., ಬೆಳ್ತಂಗಡಿ,ಕೊಲ್ಲೂರು, ಕದ್ರಾ, ಮಂಚಿಕೇರಿ,ಕಮ್ಮರಡಿ, ನಗರದ ಯಲಹಂಕದಲ್ಲಿ 3 ಸೆಂ.ಮೀ., ಭಾಗಮಂಡಲ,
ಮಾದಾಪುರ, ಸೋಮವಾರಪೇಟೆ, ಹೊನ್ನಾವರ, ಮಡಿಕೇರಿ, ರಾಮನಗರದಲ್ಲಿ 2 ಸೆಂ.ಮೀ. ಮಳೆ ದಾಖಲಾಗಿದೆ.

ಮುಂಡಗೋಡ, ಯಲ್ಲಾಪುರ, ಕುಮಟಾ, ಅಂಕೋಲಾ,ಯಲಬುರ್ಗ, ಮೂಡಿಗೆರೆ,ಜಯಪುರ, ಕೊಪ್ಪ, ಸಕಲೇಶಪುರ, ನಂಜನಗೂಡು, ಹೆಸರಘಟ್ಟ, ಆನೇಕಲ್‌ ಸುತ್ತಮುತ್ತ 1 ಸೆಂ.ಮೀ. ಮಳೆ ಯಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಕಾವೇರಿ ಕಣಿವೆಯಲ್ಲೂ ಮಳೆ: ಕಾವೇರಿ ಕಣಿವೆಯ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು
ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next