Advertisement
ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ಸಿಗದಕ್ಕೆ ಪಕ್ಷೇತರವಾಗಿ ಸ್ಪರ್ಧಿಸಿ ಅತಿ ಹೆಚ್ಚು ಮತ ಗಳಿಸಿದ್ದ ಅರುಣ್ ಪುತ್ತಿಲ ಅವರನ್ನು ಉದಾಹರಣೆಗೆ ತೆಗೆದುಕೊಂಡು ಪ್ರಸ್ತಾಪಿಸಿದ ಅವರು, ನನಗೆ ಟಿಕೆಟ್ ಸಿಗಲಿಲ್ಲ. ಒಂದು ವೇಳೆ ವೈಯಕ್ತಿಕ ಶಕ್ತಿ ಪ್ರದರ್ಶನದ ಯೋಚನೆ ಇದ್ದರೆ ಮೈಸೂರಿನಲ್ಲಿ ಮಾಡುತ್ತಿದ್ದೆ ಎಂದು ತಮ್ಮ ಸಾಮರ್ಥಯದ ಬಗ್ಗೆ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಸಂಸದ ಹಾಗೂ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಳಿನ್ ಕುಮಾರ್‌ಕಟೀಲು ಕುರಿತಾಗಿ ಪ್ರತಾಪ್, ಪಕ್ಷದಲ್ಲಿ ನಲವತ್ತು ವರ್ಷ ರಾಜಕಾರಣ ಮಾಡಿದವರು ಮಾಡದಷ್ಟು ಓಡಾಟವನ್ನು ನಳಿನ್ ಕುಮಾರ್ ಕಟೀಲು ನಾಲ್ಕೇ ವರ್ಷದಲ್ಲೇ ಮಾಡಿದ್ದಾರೆ. ಪಕ್ಷದ ಯಾವ ಅಧ್ಯಕ್ಷನೂ ಇಷ್ಟು ಓಡಾಟ ನಡೆಸಿಲ್ಲ ಎಂದು ನಳಿನ್ ಕಟೀಲು ಪರ ಬ್ಯಾಟ್ ಬೀಸಿದರು.