Advertisement

ಮಟ್ಟು: ಗ್ರಾ.ಪಂಚಾಯತ್ ಚುನಾವಣೆ ಬಹಿಷ್ಕಾರದ ಕೂಗು,  ಬೇಡಿಕೆ ಈಡೇರಿಕೆ ಭರವಸೆ ಬಳಿಕ ಮತಚಲಾವಣೆ

03:02 PM Dec 27, 2020 | Adarsha |

ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ವಾರ್ಡ್ ನ ಗೊಡ್ಡ  ಸಮುದಾಯದವರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತದಾನ ಬಹಿಷ್ಕಾರದ‌ ಕೂಗು ಕೇಳಿ ಬಂದಿದ್ದು, ಪ್ರಮುಖರ ಭರವಸೆಯ ಬಳಿಕ ಕಾಲೋನಿ ವಾಸಿಗಳು ಮತ ಚಲಾಯಿಸಿದರು.

Advertisement

ಭರವಸೆಯ ಈಡೇರಿಕೆಗೆ ತುರ್ತಾಗಿ ಆದ್ಯತೆ ನೀಡಬೇಕು ಎಂದು ಈ ಸಂದರ್ಭದಲ್ಲಿ ನ್ಯಾಯವಾದಿ ಗುರುರಾಜ್ ಮತ್ತು ಕಾಲೋನಿ ವಾಸಿಗಳು ಒತ್ತಾಯಿಸಿದ್ದಾರೆ.

ಸುಮಾರು 300  ವರ್ಷಗಳ ಇತಿಹಾಸ ಇರುವ ಮಟ್ಟು ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನ ಮೇ 2018 ರಲ್ಲಿ ಊರ ಹಾಗೂ ಪರವೂರ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡಿದ್ದು, ಕೇವಲ ಗರ್ಭ ಗುಡಿಯ ಹಾಗೂ ಮುಖಮಂಟಪ  ಕಾಮಗಾರಿ ಮಾತ್ರ ಪೂರ್ಣಗೊಂಡಿರುತ್ತದೆ. ಅಗ್ರಸಭೆ ಹಾಗೂ ಆವರಣ ಗೋಡೆ ಕಾಮಗಾರಿ ಬಾಕಿ ಇರುತ್ತದೆ . ಈ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಮಗೆ ಕಷ್ಟಸಾಧ್ಯ. ಆದ್ದರಿಂದ  ನಾವು ಸರ್ಕಾರದ  ಜನಪ್ರತಿನಿಧಿಗಳಿಗೆ ಹಾಗೂ  ಮುಜರಾಯಿ ಇಲಾಖೆಗೆ ಸರಕಾರಿ ಅನುದಾನಕ್ಕಾಗಿ ಮನವಿ ಸಿಲ್ಲಿಸಿದ್ದೇವೆ. ಆದರೆ  ಎರಡು  ವರ್ಷ ಕಳೆದರೂ ಯಾವುದೇ ಸರಕಾರಿ ಅನುದಾನ ನಮಗೆ ಸಿಕ್ಕಿಲ್ಲ .

ಇದನ್ನೂ ಓದಿ:56 ಆಂಬ್ಯುಲೆನ್ಸ್‌ ಸೇವೆಗೆ ಸನ್ನದ್ಧ

ಅಲ್ಲದೆ ನಮ್ಮ ವಾರ್ಡ್ ನಲ್ಲಿ  3 -4  ದಿವಸಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುತಿದ್ದು, ಅದಕ್ಕೂ  ನಮ್ಮಿಂದ ಪಂಚಾಯತ್ ನೀರಿನ ಬಿಲ್ಲನ್ನು ಪ್ರತಿ ತಿಂಗಳು ಪಡೆಯುತ್ತಾರೆ. ಇಲ್ಲಿ ಸುಮಾರು 50 ಪರಿಶಿಷ್ಟ  ಕುಟುಂಬಗಳು ವಾಸಿಸುತ್ತಿದ್ದು, ಕೆಲವರಿಗೆ ಸೂಕ್ತ ಜಾಗ ಹಾಗೂ ಮನೆಯ ವ್ಯವಸ್ಥೆ ಕೂಡಾ ಇಲ್ಲ. ಆದ್ದರಿಂದ ನಮಗೆ ಸೂಕ್ತ ಸರಕಾರಿ ಜಾಗವನ್ನು ನೀಡಬೇಕು ಮತ್ತು ನಮ್ಮಲ್ಲಿ ಹಲವು ವಿದ್ಯಾವಂತ ಯುವಕ, ಯುವತಿಯರಿದ್ದು, ಅವರಿಗೆ ಕೋಟೆ ಪಂಚಾಯತ್ ನಲ್ಲಿ ಮೀಸಲು ಉದ್ಯೋಗವನ್ನು ನೀಡುವಂತೆ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next