Advertisement

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

06:27 PM Nov 27, 2024 | Team Udayavani |

ಪ್ರತಿ ಬಾರಿ ನವಂಬರ್ 26 ಬಂತು ಅಂದರೆ ಸಂವಿಧಾನದ ಹೆಸರಿನಲ್ಲಿ ಒಂದಿಷ್ಟು ರಾಜಕೀಯ ಪ್ರೇರಿತ ಮಾತುಗಳಿಗಾಗಿ ವೇದಿಕೆಗಳು ಹುಟ್ಟಿ ಕೊಳ್ಳುತ್ತವೆ..ಈ ಬಾರಿ ಕೂಡಾ ಅಷ್ಟೇ ಒಂದಿಷ್ಟು ರಾಜಕೀಯ ಪ್ರೇರಿತ ಹೇಳಿಕೆಗಳು ಹುಟ್ಟಿ ಕೊಂಡಿದ್ದಾವೆ..ಸಂವಿಧಾನದ ತಿದ್ದುಪಡಿ ಬದಲಾಗಿ ಬದಲಾಣೆ ಪದ ಪ್ರಯೇೂಗ;ತಿದ್ದುಪಡಿ ಮಾಡುವುದರಲ್ಲಿ ಯಾರದ್ದು ಸಿಂಹಪಾಲು ಕಾಂಗ್ರೆಸ್ ನವರದ್ದೊ ಬಿಜೆಪಿಯವರದ್ದೊ;ಅಂಬೇಡ್ಕರ್ ರವರನ್ನು ಗೌರವಿಸುವುದರಲ್ಲಿ ಅಥವಾ ಅವಮಾನ ಮಾಡುವುದರಲ್ಲಿ ಕಾಂಗ್ರೆಸ್ ನವರ ಪಾತ್ರ ಜಾಸ್ತಿ ಇದೆಯೊ ಬಿಜೆಪಿವರದ್ದೊ..ಅನ್ನುವ ಅಪ್ರಸ್ತುತ ವಿಷಯಗಳ ಮೇಲೆ ಚವಿ೯ತ ಚವ೯ಣ ಚಚೆ೯ಗಳು..ಒಟ್ಟಿನಲ್ಲಿ ಸಂವಿಧಾನದ ಆಶಯದ ಮೇಲಾಗಲಿ ನೆಲೆಗಟ್ಟಿನ ಮೇಲಾಗಲಿ ಯಾವುದೇ ಗಂಭೀರವಾದ ಮಾತುಕತೆಗಳು ಚಿಂತನ ಮಂಥನಗಳು ನಡೆಯಲೇ ಇಲ್ಲ..ಇದಕ್ಕೆ ಮುಖ್ಯ ಕಾರಣ ಸಂವಿಧಾನ ಒಂದು ಚುನಾವಣಾ ಎಜೆಂಡವಾಗಿ ಪ್ರತಿಯೊಂದು ಪಕ್ಷಗಳು ತಲೆಯ ಮೇಲೆ ಹೊತ್ತು ತಿರುಗುವ ಪರಿಸ್ಥಿತಿ ಕಾಣುವಂತಾಗಿದೆ.ಹಾಗಾಗಿ ಅವರು ಕರೆಯುವ ಉಪನ್ಯಾಸಕರು ಅಷ್ಟೇ ತಮ್ಮ ತಮ್ಮ ಪಕ್ಷ ಗಳ ಎಜೆಂಡಕ್ಕೆ ಸರಿಯಾಗಿ ಕಥೆಗಳನ್ನು ಹೆಣೆದುಮಾತನಾಡ ಬೇಕು.ಪ್ರತಿಯೊಂದು ಕಾಲ ಘಟ್ಟದಲ್ಲಿ ಆದ ತಿದ್ದುಪಡಿಗಳು ನೆಲದ ಆಶಯಕ್ಕೆ ಎಷ್ಟು ಪೂರಕವಾಗಿ ತಿದ್ದುಪಡಿಗಳಾಗಿದ್ದಾವೆ ಅನ್ನುವುದನ್ನುಯಾರು ಕೂಡಾ ಮನವರಿಕೆ ಮಾಡುವ ಗೇೂಜಿಗೆ ಹೇೂಗಲಿಲ್ಲ..ಬದಲಾಗಿ ಅದರ ದೇೂಷಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ ಅನ್ನುವುದು ಅಷ್ಟೇ ಸ್ವಷ್ಟ.

Advertisement

ಸಂವಿಧಾನ ಒಂದು ನಿಂತ ನೀರಲ್ಲ..ಜನರ ಬದುಕಿನಲ್ಲಿಯಾದ ಆಥಿ೯ಕ ಸಾಮಾಜಿಕ ಶೈಕ್ಷಣಿಕ ಸುಧಾರಣೆಗಳ ಅಗತ್ಯತೆಗೆಅನುಗುಣವಾಗಿ ನಮ್ಮ ಸಂವಿಧಾನವು ಸ್ಪಂದಿಸ ಬೇಕಾಗುತ್ತದೆ ಅನ್ನುವ ಕಾರಣದಿಂದಲೇ ಸಂವಿಧಾನದ 368 ನೇ ಅನುಚ್ಛೇದದಲ್ಲಿ ಸಂವಿಧಾನದ ತಿದ್ದುಪಡಿಗೂ ಮೂರು ವಿಧಾನಗಳನ್ನು ಮಾಡಿಕೊಟ್ಟಿದೆ.ಒಂದು ವೇಳೆ ಇಂತಹ ತಿದ್ದುಪಡಿಗಳು ಅಸಂವಿಧಾನಿಕ ಅನ್ನಿಸಿಕೊಂಡರೆ ನ್ಯಾಯಾಂಗ ಪರಾಮರ್ಶೆಗಳಿಗೂ ಅವಕಾಶ ಮಾಡಿಕೊಟ್ಟಿವೆ. ಹಿಂದೆ ಅದೇಷ್ಟೊ ಪ್ರಕರಣಗಳು ನ್ಯಾಯಾಂಗದ ತೀಪಿ೯ಗೂ ಒಳ ಪಡಿಸಿದ್ದೇವೆ. ಸಂವಿಧಾನದ 31ನೇ ಅನುಚ್ಛೇದ ಅಂದರೆ ಆಸ್ತಿ ಹಕ್ಕು ಮೊಟಕ್ಕೂಗೊಂಡಾಗ ಸುಪ್ರೀಂ ಕೇೂಟು೯ ಮೆಟ್ಟಿಲು ಹತ್ತಿದ್ದೇವೆ.ಈ ತಿದ್ದುಪಡಿಗೆ ಅಂದಿನ ಸರ್ಕಾರದ ಪರವಾಗಿ ಸುಪ್ರೀಂ ಕೇೂಟು೯ ತೀಪು೯ ಕೊಟ್ಟ ಉದಾಹರಣೆ ನಮ್ಮಮುಂದಿದೆ.

ಸಂವಿಧಾನದ 19(1) ಅನುಚ್ಛೇದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಕಾರಾತ್ಮಕ ಕಡಿವಾಣ ಹಾಕುವುದಕ್ಕೆ 1951ರಲ್ಲಿ ತಂದ ತಿದ್ದುಪಡಿ..ಇದು ಇಂದಿನ ರಾಷ್ಟ್ರದ ಸಮಗ್ರತೆಯ ಹಿತದೃಷ್ಟಿಯಿಂದ ಅಗತ್ಯತೆಯೂ ಹೌದು ಅನ್ನಿಸುತ್ತದೆ ..

ಹಾಗಾಗಿ ಇಲ್ಲಿ ಯಾರು ಎಷ್ಟು ತಿದ್ದುಪಡಿ ಮಾಡಿದ್ದಾರೆ ಅನ್ನುವುದು ಮುಖ್ಯವಲ್ಲ..ಆ ತಿದ್ದುಪಡಿಗಳಿಂದ ದೇಶದ ಹಿತದೃಷ್ಟಿಯಿಂದ ನಮಗೆಷ್ಟು ಲಾಭವಾಗಿದೆ ನಷ್ಟ ವಾಗಿದೆ ಅನ್ನುವ ಚಿಂತನೆಗಳು ನಡೆಯ ಬೇಕಾಗಿದೆ.ಸಂವಿಧಾನಕ್ಕೆ ಅಂತಿಮ ಸ್ಪಶ೯ಕೊಡುವ ಸಂದರ್ಭದಲ್ಲಿ ಅತಿ ಹೆಚ್ಚು ತಿದ್ದುಪಡಿ ಮಂಡಿಸಿದ ಕೀರ್ತಿ ಸಂವಿಧಾನ ಸಮಿತಿಯಲ್ಲಿಯೇ ಇದ್ದ ನಮ್ಮ ವರೆ ಆದ ಎಚ್.ವಿ.ಕಾಮತ್ ರಿಗೆ ಸಲ್ಲುತ್ತದೆ..ಹಾಗಾಂತ ಅವರನ್ನು ದೂಷಿಸ ಬಹುದೇ? ಇಲ್ಲ..ತಿದ್ದುಪಡಿ ಮಾಡುವ ಅನಿವಾರ್ಯತೆಯುಾ ಇದ್ದ ಕಾಲವದು.ತಿದ್ದುಪಡಿಗೆ ಅವಕಾಶವಿರುವ ಕಾರಣದಿಂದಲೇ ಸಂವಿಧಾನದಲ್ಲಿ ಜೀವಂತಿಕೆ ಲಕ್ಷಣಗಳನ್ನು ಕಾಣಲು ಸಾಧ್ಯ.”.constitution is not only a book but it is a living organism..”ಅನ್ನುವುದನ್ನು ನಾವು ಮರೆಯ ಬಾರದು.ಆದುದರಿಂದ ಸಂವಿಧಾನದ ಕುರಿತಾಗಿ ಮಾತನಾಡುವಾಗ ತಿದ್ದುಪಡಿ ಪದ ಬಳಸ ಬಹುದೇ ಹೊರತು ಬದಲಾವಣೆ ಪದ ಬಳಸುವುದು ಆರೇೂಗ್ಯ ಪೂಣ೯ವಾದ ಪದ ಪ್ರಯೇೂಗವಲ್ಲ..ಅನ್ನುವುದನ್ನು ನಾವು ಅಥೈ೯ಸ ಬೇಕಾಗಿದೆ.

ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸ್ವಷ್ಟವಾಗಿ ಹೇಳಿದೆ ಎಲ್ಲಾ ಜಾತಿ ಧಮ೯ ಜನಾಂಗಗಳಿಗೆ ಸಮಾನವಾದ ಅವಕಾಶ ಮತ್ತು ರಕ್ಷಣೆ ನೀಡಲು ನಮ್ಮ ಸಂವಿಧಾನ ಕಟ್ಟಿ ಬದ್ಧವಾಗಿ ನಿಂತಿದೆ.ಹಾಗಾಗಿ ಇದನ್ನು ಯಾರು ಕುಾಡಾ ದುರುಪಯೋಗ ಮಾಡುವ ಹಾಗೇ ಇಲ್ಲ.

Advertisement

1976ರಲ್ಲಿ 42ನೇ ಸಂವಿಧಾನ ತಿದ್ದುಪಡಿ ತರುವುದರಮೂಲಕ ಸಂವಿಧಾನದ ಪ್ರಾಸ್ತಾವನೆಗೆ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಸೇರಿಸಿರುವುದು ಬಹು ಚಚೆ೯ಗೂ ಒಳಗಾಗಿತ್ತು..ಆದರೆ ಇತ್ತೀಚೆಗೆ ಸುಪ್ರೀಂ ಕೇೂಟು೯ಕೂಡಾ ಇದನ್ನು ಎತ್ತಿ ಹಿಡಿದಿದೆ..

ಒಂದಂತೂ ಸತ್ಯ ನಮ್ಮ ಸಂವಿಧಾನ ಮತ್ತು ನಮ್ಮೆಲ್ಲರ ಹಕ್ಕುಗಳಿಗೆ ಸಂರಕ್ಷಣೆ ನೀಡ ಬೇಕಾದ ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವಾಯತ್ತತೆ ಸ್ಥಾನಮಾನದಲ್ಲಿ ಕಾರ್ಯ ನಿವ೯ಹಿಸುವಂತೆ ಕಾಪಾಡಿಕೊಂಡು ಬರ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

ಸಂವಿಧಾನದ 356ನೇ ವಿಧಿ ಅಥವಾ ರಾಜ್ಯಗಳಮೇಲೆ ರಾಷ್ಟ್ರಪತಿ ಆಡಳಿತ ಹೇರುವುದರಲ್ಲಿ ಯಾರು ನಿಷ್ಣಾತರು ಅನ್ನುವ ಮಾತುಗಳು ಕೆಲವು ಕಡೆಯಿಂದಲೂ ಕೇಳಿ ಬಂದಿದೆ..ಎಲ್ಲರೂ ನಿಷ್ಣಾತರೆ ಆದರೆ ಬಹುಮುಖ್ಯವಾಗಿ ಎಸ್.ಆರ್.ಬೊಮ್ಮಾಯಿ ಜನತಾ ಸರಕಾರವನ್ನು ವಜಾ ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೇೂಟು೯ ಹಾಕಿದ ಒಂದು ಕಡಿವಾಣದ ತೀಪಿ೯ನಿಂದಾಗಿ ಮುಂದೆ ಬಂದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಆಡಳಿತ ಹೇರುವುದು ಅಷ್ಟು ಸುಲಭವಾಗಿರಲಿಲ್ಲ ಅನ್ನುವುದನ್ನು ಮರೆಯಬಾರದು.ಆದರೆ ಬಿದ್ದ ಮನೆಗಳನ್ನು ಕೆಡವಿ ತಮ್ಮದೇ ಹೊಸ ಮನೆಗಳನ್ನು ಕಟ್ಟುವುದರಲ್ಲಿ ಬುದ್ಧಿವಂತಿಕೆ ತೇೂರಿದ ಸಂದರ್ಭಗಳು ನಮ್ಮಮುಂದಿದೆ.

ಒಂದು ಮಾತನ್ನು ನಾವೆಲ್ಲರೂ ನೆನಪಿನಲ್ಲಿಟ್ಟ ಕೊಳ್ಳ ಬೇಕು..ಪ್ರಾನ್ಸ್ ಸವಾ೯ಧಿಕಾರಿ ಡಿಗಾಲೇ ರೂಪಿಸಿಕೊಂಡ tailor made constitution ನಮ್ಮದಲ್ಲ..ಸಂವಿಧಾನ ಪರಿಣಿತ ಸಂವಿಧಾನ ಸಮಿತಿ ರೂಪಿಸಿ ಕೊಟ್ಟ ಸಂವಿಧಾನ ನಮ್ಮದು.ಪ್ರಸ್ತುತ ನಮ್ಮ ಸಂವಿಧಾನಕ್ಕೆ ಯಾವುದೇ ಅಪಾಯವಿಲ್ಲ.ನಮ್ಮ ಸಂವಿಧಾನದ ಪ್ರಮುಖವಾದ ಆಶಯವೆಂದರೆ ಭಾರತೀಯರಾದ ನಮ್ಮೆಲ್ಲರ ಮನಸ್ಸನ್ನು ಒಗ್ಗೂಡಿಸುವುದೆ ಹೊರತು ಒಡೆಯುವುದಲ್ಲ.ಹಾಗಾಗಿ ಆರೇೂಗ್ಯ ಪೂರ್ಣವಾದ ಚಿಂತನ ಮಂಥನಗಳು ನಡೆಯಲ್ಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.

ಪ್ರೊ.ಕೊಕ್ಕಣೆ೯ಸುರೇಂದ್ರನಾಥ ಶೆಟ್ಟಿ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next