Advertisement

ಮಕ್ಕಳಿಗೆ ರೆಮಿಡಿಸಿವಿರ್‌, ಸ್ಟಿರಾಯ್ಡ್  ಬಳಕೆ ಬೇಡ

12:35 AM Jun 11, 2021 | Team Udayavani |

ಹೊಸದಿಲ್ಲಿ: ಕೋವಿಡ್ ಸೋಂಕುಪೀಡಿತ ಮಕ್ಕಳಿಗೆ ಚಿಕಿತ್ಸೆಯ ವೇಳೆ ರೆಮಿಡಿಸಿವಿರ್‌, ಸ್ಟಿರಾಯ್ಡ ಬಳಕೆ ಮಾಡಬಾರದು ಮತ್ತು ಸಿಟಿ ಸ್ಕ್ಯಾನ್‌ ಮಿತಿಯಲ್ಲಿರಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ. ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Advertisement

ಅಲ್ಪ ಪ್ರಮಾಣದ ಸೋಂಕಿರುವ ಮಕ್ಕಳಿಗೆ ಸ್ಟಿರಾಯ್ಡ ನೀಡುವುದು ಅಪಾಯಕಾರಿ. ಇಂಥವರಿಗೆ ಪ್ರತೀ 4-6 ತಾಸುಗಳಿಗೆ ಒಮ್ಮೆ ಪ್ಯಾರಾಸಿಟಮಾಲ್‌ 10-15 ಎಂಜಿ/ಕೆ.ಜಿ. ಡೋಸ್‌ ನೀಡಿ. ಉಪ್ಪು ನೀರಿನ ದ್ರಾವಣದಲ್ಲಿ ಗಂಟಲು ಸ್ವಚ್ಛಗೊಳಿಸಲು ತಿಳಿಸಿ.

ಮಧ್ಯಮ ಪ್ರಮಾಣದ ರೋಗಲಕ್ಷಣ ಇರುವವರಿಗೆ ಆಮ್ಲಜನಕ ಚಿಕಿತ್ಸೆ ನೀಡಬಹುದು. ಈ ಮಕ್ಕಳಿಗೂ ಕಾರ್ಟಿಕೋಸ್ಟಿರಾಯ್ಡ ನೀಡುವ ಅಗತ್ಯವಿಲ್ಲ. ರೋಗವು ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದರೆ ಮಾತ್ರ ಇದನ್ನು ನೀಡಬಹುದು.

ಗಂಭೀರ ರೋಗಲಕ್ಷಣವಿರುವ ಮಕ್ಕಳಿಗೆ ಉಸಿರಾಟದ ಸಮಸ್ಯೆ ತೀವ್ರಗೊಂಡರೆ ಅಗತ್ಯ ಚಿಕಿತ್ಸೆ ನೀಡಬೇಕು. ಬ್ಯಾಕ್ಟೀರಿಯಾ ಸೋಂಕು ಹೆಚ್ಚಿರುವುದು ದೃಢಪಟ್ಟರೆ ಆ್ಯಂಟಿಮೈಕ್ರೋಬಿಯಲ್‌ ನೀಡಬಹುದು. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಬೆರಳಿಗೆ ಆಕ್ಸಿಮೀಟರ್‌ ಹಾಕಿ, ಕೊಠಡಿಯಲ್ಲೇ 6 ನಿಮಿಷ ನಿರಂತರವಾಗಿ ನಡೆಯಲು ಹೇಳಿ. ಆ ಮೂಲಕ ವ್ಯಾಯಾಮ ಮಾಡಿದಾಗ ಶ್ವಾಸಕೋಶ ಮತ್ತು ಹೃದಯ ಸಹಜವಾಗಿ ಪ್ರತಿಕ್ರಿಯಿಸುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next