Advertisement

ವೆಂಟಿಲೇಟರ್ ಬಳಕೆ ಬಗ್ಗೆ ಹೆಚ್ಚಿನ ತರಬೇತಿ ನೀಡಬೇಕಿದೆ: ಜಗದೀಶ್ ಶೆಟ್ಟರ್

04:15 PM May 25, 2021 | Team Udayavani |

ಬೆಂಗಳೂರು: ಕೋವಿಡ್‌ ರೋಗಿಗಳಲ್ಲಿ ವೆಂಟಿಲೇಟರ್ ಗಳ ಬಳಕೆಯ ಬಗ್ಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಲ್ಲಿ ಪ್ರಾಯೋಗಿಕ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹೆಚ್ಚಿಸಬೇಕು ಎಂದು ಸಚಿವ ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು.

Advertisement

ಇಂದು ಕರ್ನಾಟಕ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಹುಬ್ಬಳ್ಳಿ, ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳ ಸಂಘ ಮತ್ತು ಇಂಡಿಯನ್‌ ಸೊಸೈಟಿ ಆಫ್‌ ಅನಸ್ತೇಸಿಯಾಲಜಿಸ್ಟ್‌ ಹುಬ್ಬಳ್ಳಿ ಜಂಟಿಯಾಗಿ ಕೋವಿಡ್‌ ರೋಗಿಗಳಲ್ಲಿ ವೆಂಟಿಲೇಟರ್‌ ಬಳಕೆಯ ಬಗ್ಗೆ ಪ್ರಾಯೋಗಿಕ ಕ್ರಮಗಳ ಬಗ್ಗೆ ಆಯೋಜಿಸಿದ್ದ ವೆಬಿನಾರ್‌ ನಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ದೇಶದ ಗ್ರಾಮೀಣ ಭಾಗದಲ್ಲೂ ಅತ್ಯಾಧುನಿಕ ಚಿಕಿತ್ಸೆಗೆ ಅನುಕೂಲವಾಗಲು ಪ್ರಧಾನಮಂತ್ರಿಗಳ ಅನುದಾನದ ಅಡಿಯಲ್ಲಿ ಪ್ರತಿ ತಾಲ್ಲೂಕಿಗೂ 6 ವೆಂಟಿಲೇಟರ್‌ ಗಳನ್ನು ನೀಡಲಾಗಿತ್ತು. ಆದರೆ, ಆವುಗಳನ್ನು ಬಳಸುವ ತಜ್ಞ ವೈದ್ಯರು ಇಲ್ಲದೆ ಬಹುತೇಕ ವೆಂಟಿಲೇಟರ್‌ ಗಳು ಉಪಯೋಗ ಆಗುತ್ತಿಲ್ಲ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ತುರ್ತು ಸಂಧರ್ಭದಲ್ಲಿ ವೆಂಟಿಲೇಟರ್‌ ಗಳನ್ನು ಉಪಯೋಗಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.

ಕೋವಿಡ್‌ 2 ನೇ ಅಲೆಯಲ್ಲಿ ಆಮ್ಲಜನಕ ಹಾಗೂ ವೆಂಟಿಲೇಟರ್ ಬೆಡ್‌ ಗಳ ಬೇಡಿಕೆ ಹೆಚ್ಚಾಗಿದೆ. ಆದರೆ, ಸೂಕ್ತ ತರಬೇತಿ ಇಲ್ಲದೆ ವೆಂಟಿಲೇಟರ್ ಗಳ ಉಪಯೋಗದಿಂದ ಆಗುವ ಹಾನಿಯೇ ಹೆಚ್ಚು. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ಇಲ್ಲದ ಕಡೆಯಲ್ಲಿ ವೆಂಟಿಲೇಟರ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವುದರ ಬಗ್ಗೆ ವೈದ್ಯಕೀಯ ಸಿಬ್ಬಂದಿಗಳಲ್ಲಿ ತರಬೇತಿ ನೀಡಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ:ಉಡುಪಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಭೇಟಿ

Advertisement

ವೈದ್ಯಕೀಯ ಸಿಬ್ಬಂದಿಗಳು ಆಮ್ಲಜನಕವನ್ನು ಮಿತವಾಗಿ ಬಳಸುವಂತೆ ಹಾಗೂ ವೆಂಟಿಲೇಟರ್‌ಗಳನ್ನು ಬಳಸಲು ಸೂಕ್ತ ತರಬೇತಿಯನ್ನು ಪಡೆದುಕೊಳ್ಳುವಂತೆ ಈ ವೆಬಿನಾರ್‌ ಮೂಲಕ ವೈದ್ಯಕೀಯ ಸಿಬ್ಬಂದಿಗಳಲ್ಲಿ ತಿಳುವಳಿಕೆ ಮೂಡಿಸುವಂತೆ ಶೆಟ್ಟರ್ ಹೇಳಿದರು.

ವೆಬಿನಾರ್‌ ನಲ್ಲಿ ಕೋವಿಡ್‌ ತಜ್ಞ ಸಮಿತಿಯ ಸದಸ್ಯರು ಹಾಗೂ ವೆಬಿನಾರ್‌ ನ ಅಧ್ಯಕ್ಷ ಡಾ. ಜಿ.ಬಿ ಸುತ್ತೂರ್‌, ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ ಸಚ್ಚಿದಾನಂದ, ಡಾ ರಾಜೇಶ್‌ ಫಾಟ್ಕೆ, ಡಾ. ಬಸವಾರಾಜ್‌ ಕೊಲ್ಲಾಪುರ್‌, ಡಾ ಇಮ್ರಾನ್‌ ಶೋಹ್ಲಾಪುರ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next