Advertisement

ಕರಾಚಿ: ಚೀನ ಕಾನ್ಸುಲೇಟ್‌ ಬಳಿ ಗುಂಡು ಹಾರಾಟ; ಇಬ್ಬರ ಹತ್ಯೆ : ವರದಿ

11:39 AM Nov 23, 2018 | udayavani editorial |

ಕರಾಚಿ : ಇಲ್ಲಿನ ಚೀನ ಕಾನ್ಸುಲೇಟ್‌ ಸಮೀಪ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

Advertisement

ಇದೇ ವೇಳೆ ಕ್ಲಿಫ್ಟನ್‌ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಅದರ ಕಾರಣ ಮತ್ತು ಸ್ವರೂಪ ಏನೆಂಬುದು ಗೊತ್ತಾಗಿಲ್ಲ ಎಂದು ಡಾನ್‌ ನ್ಯೂಸ್‌ ವರದಿ ಮಾಡಿದೆ.

ಘಟನೆಯನ್ನು ಅನುಸರಿಸಿ ಭದ್ರತಾ ಪಡೆಗಳ ಕಾರ್ಯಾಚರಣೆ ಸಾಗಿದೆ. ಗುಂಡಿನ ಚಕಮಕಿಯನ್ನು ಅನುಸರಿಸಿ ಸ್ಥಳದಲ್ಲಿ ಭಾರೀ ಭದ್ರತಾ ಪಡೆಗಳನ್ನು ಛಾಯಾ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಪ್ರದೇಶವು ಭಾರೀ ಭದ್ರತೆಯದ್ದಾಗಿದ್ದು ಇದನ್ನು ಕಟ್ಟೆಚ್ಚರದ ಕೆಂಪು ವಲಯ ಎಂದೇ ಪರಿಗಣಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next