Advertisement
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿತಾಲೂಕಿನ ಹೋಬಳಿ ಕೇಂದ್ರ ಹಾಗೂ ಇತರಕಡೆ ಇರುವ ಎಲ್ಲಾ ಸಮುದಾಯ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಹಾಕಲಾಗುತ್ತಿದೆ. ಆದರೆ, ಕಳೆದ 5-6ದಿನಗಳಿಂದ ಲಸಿಕೆ ಕೊರತೆ ಉಂಟಾಗಿದ್ದುಆಸ್ಪತ್ರೆಗೆ ಆಗಮಿಸುವ ಜನತೆ ಲಸಿಕೆಪಡೆಯದೆ ಸರ್ಕಾರಕ್ಕೆ ಹಿಡಿಶಾಪಹಾಕಿಕೊಂಡು ಮನೆಗೆ ಮರಳುತ್ತಿದ್ದಾರೆ.
Related Articles
Advertisement
ತೋಟಿಯಲ್ಲಿ ಈ ಹಿಂದೆ15 ರಿಂದ 25 ಮಂದಿ ಪಡೆಯುತ್ತಿದ್ದರು.ಈಗ 30 ರಿಂದ 40 ಮಂದಿಪಡೆಯುತ್ತಿದ್ದಾರೆ. ದಿಡಗದಲ್ಲಿ ಈ ಹಿಂದೆ 35ರಿಂದ 50 ಈಗ 50 ರಿಂದ 90.ಚನ್ನರಾಯಪಟ್ಟಣದಲ್ಲಿ 80 ರಿಂದ 100ಮಂದಿ ಪಡೆಯುತ್ತಿದ್ದರು ಈಗ 120 ಕ್ಕೂಹೆಚ್ಚು ಮಂದಿ ಪಡೆಯುತ್ತಿದ್ದಾರೆ.
ಮೇ 1ರ ನಂತರ ಮತ್ತಷ್ಟು ಸಮಸ್ಯೆ:ಸರ್ಕಾರ ಈಗಾಗಲೇ 18 ವರ್ಷಮೇಲ್ಪಟ್ಟವರಿಗೂ ಲಸಿಕೆ ಹಾಕುವ ಭರವಸೆನೀಡಿದ್ದು ಮೇ 1ರ ನಂತರ ಚಾಲನೆನೀಡಲಾಗುವುದು ಎಂದು ಹೇಳಿದೆ.ಈಗಾಗಲೇ ಸಾಕಷ್ಟು ಸಮಸ್ಯೆಎದುರಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿಮೇ 1ರ ನಂತರ ಸಮಸ್ಯೆ ಮತ್ತಷ್ಟುಬಿಗಡಾಯಿಸಲಿದೆ.
ಅಷ್ಟರೊಳಗೆ ಜಿಲ್ಲಾಡಳಿತಹಾಗೂ ತಾಲೂಕು ಆಡಳಿತ ಸಭೆ ಮಾಡಿಸರ್ಕಾರಕ್ಕೆ ವರದಿ ನೀಡಿ ಅಗತ್ಯಕ್ಕೆಅನುಗುಣವಾಗಿ ಲಸಿಕೆ ಸರಬರಾಜಿಗೆಬೇಡಿಕೆ ಇಡದೆ ಹೋದರೆ ಮತ್ತಷ್ಟುತೊಂದರೆ ಎದುರಿಸಲು ಸಿದ್ಧರಾಗಬೇಕಿದೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ