Advertisement

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೋವಿಡ್ ಲಸಿಕೆಗೆ ಅಭಾವ

03:44 PM May 03, 2021 | Team Udayavani |

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಕೋವಿಡ್ ಲಸಿಕೆ ಸಂಪೂರ್ಣ ಖಾಲಿಯಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಬಂದ ಜನ ಲಸಿಕೆ ಸಿಗದೇ ವಾಪಸ್ಸು ಹೋಗಿದ್ದಾರೆ. ಲಸಿಕಾ ಕೇಂದ್ರದ ಮುಂದೆ ಕೋವಿಡ್ ಲಸಿಕೆ ಖಾಲಿಯಾಗಿರೋ ಬಗ್ಗೆ ಸಿಬ್ಬಂದಿ ಸೂಚನಾ ಫಲಕವನ್ನು ಹಾಕಿದ್ದಾರೆ.

Advertisement

ಇನ್ನು ಮೂರು ದಿನ ಲಸಿಕೆ ಸಿಗಲ್ಲ ಅಂತಾ ಆರೋಗ್ಯ ಇಲಾಖೆ ಬೋರ್ಡ್ ಹಾಕಿದೆ. ಇದೇ ಹಿನ್ನೆಲೆಯಲ್ಲಿ ತಮಗೆ ಲಸಿಕೆ ಸಿಗುತ್ತಿಲ್ಲ ಎಂದು ಜನರು ಕಂಗಾಲಾಗಿದ್ದಾರೆ.

ಜಿಲ್ಲಾಸ್ಪತ್ರೆಯ ಆವರಣದಲ್ಲೇ ಕೋವಿಡ್ ನಿಯಮ ಉಲ್ಲಂಘನೆ : ಕೋವಿಡ್ ಪರಿಕ್ಷೆ ಮಾಡಿಸಲು ಜನರು ಗುಂಪು ಗುಂಪಾಗಿ ಮುಗಿಬಿದ್ದ ಘಟನೆ ಚಿಕ್ಕಮಗಳೂರಲ್ಲಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ  ನಡೆದಿದೆ. ವಯೋವೃದ್ಧರು, ಮಹಿಳೆಯರು, ಮಕ್ಕಳು ಈ ವೇಳೆ ಇದ್ದರು.

ಇನ್ನು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡದೆ ಕೋವಿಡ್ ಪರೀಕ್ಷೆ ಮಾಡಿಸಲು ಜನರು ಮುಂದಾಗಿದ್ದಾರೆ. ಇಷ್ಟಾದರೂ ಕೂಡ ಆಸ್ಪತ್ರೆ ಸಿಬ್ಬಂದಿಗಳು ಮಾತ್ರ ಈ ಕಡೆ ಗಮನ ಕೊಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next