ಮುಂದಿನ ಎರಡು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿವೆ.
Advertisement
ಅಕಾಲಿಕವಾಗಿ ಹಾಗೂ ತೂಕವಿಲ್ಲದೇ ಜನಿಸಿದ, ಎದೆ ಹಾಲು ಉತ್ಪಾದಿಸದ ತಾಯಂದಿರ ಹಾಗೂ ಹಲವು ಕಾರಣಗಳಿಂದ ತಾಯಂದಿರಿಂದ ದೂರ ಉಳಿದಿರುವ ಶೇ.68ರಷ್ಟು ಶಿಶುಗಳಿಗೆ ಎದೆ ಹಾಲಿನ ಕೊರತೆಯಿದೆ. ಇದನ್ನು ಸರಿಪಡಿಸಲು ಆರೋಗ್ಯಇಲಾಖೆ ಮೈಸೂರು, ಬೆಳಗಾವಿ, ಬೆಂಗಳೂರು, ಕಲಬುರಗಿಯಲ್ಲಿ ತಲಾ ಒಂದು ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯಲಿದ್ದು, ಪ್ರಸ್ತುತ ಅಗತ್ಯದ ಐಸ್ ಲೈನ್ ಶಿಥಿಲೀಕರಣ ಯಂತ್ರ, ಮಿಕ್ಸಿಂಗ್ ಯಂತ್ರ, ಡ್ರೈಯರ್, ಪಾಶ್ಚರೀಕರಿಸುವ ಯಂತ್ರ, ಬ್ರೈಸ್ಟ್ ಪಂಪ್ ಖರೀದಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
Related Articles
Advertisement
ಉಚಿತ ವಿತರಣೆಕಳೆದೊಂದು ವರ್ಷದಿಂದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಸರ್ಕಾರಿ ಹಾಗೂ ಮಂಗಳೂರಿನ ಲೇಡಿಘೋಷ್ ಆಸ್ಪತ್ರೆಯಲ್ಲಿ ಖಾಸಗಿ ಸಾರ್ವಜನಿಕ ಸಹಬಾಗಿತ್ವದಲ್ಲಿ ತಲಾ ಒಂದು ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗಿದೆ. ಇದುವರೆಗೆ ಎರಡು ಕೇಂದ್ರದಲ್ಲಿ ಸುಮಾರು 300 ಲೀಟರ್ ಹಾಲು ಪಾಶ್ಚರೀಕರಿಸಿ 1000ಕ್ಕೂ ಅಧಿಕ ನವಜಾತ ಶಿಶುಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಎರಡು ಕೇಂದ್ರದಲ್ಲಿ ಒಟ್ಟು ಪ್ರತಿ ದಿನ ಸರಾಸರಿ 120ಕ್ಕೂ ಅಧಿಕ ಮಂದಿ ದಾನಿಗಳು ಎದೆ ಹಾಲು ದಾನ ಮಾಡುತ್ತಾರೆ. *ತೃಪ್ತಿ ಕುಮ್ರಗೋಡು